ಕೊರೋನಾದಿಂದಾಗಿ 1 ಕೋಟಿ ಜನರ ಉದ್ಯೋಗ ನಷ್ಟ!

By Kannadaprabha NewsFirst Published Jun 3, 2021, 8:04 AM IST
Highlights

* 1 ಕೋಟಿ ಜನರ ಉದ್ಯೋಗ ನಷ್ಟ

* ಕೊರೋನಾ 2ನೇ ಅಲೆಯ ಪ್ರಭಾವ

* ಶೇ.97ರಷ್ಟುಕುಟುಂಬಗಳ ಆದಾಯ ಇಳಿಕೆ

* ಉದ್ಯೋಗ ಕಳೆದುಕೊಂಡವರಿಗೆ ಮತ್ತೆ ಉದ್ಯೋಗ ಕಷ್ಟ

* ಸಿಎಂಐಸಿ ಎಂಬ ಚಿಂತಕರ ಚಾವಡಿ ವರದಿ

ಮುಂಬೈ(ಜೂ.03): ಕೊರೋನಾ ವೈರಸ್‌ ಎರಡನೇ ಅಲೆಯಿಂದಾಗಿ 1 ಕೋಟಿಗೂ ಅಧಿಕ ಭಾರತೀಯರು ಉದ್ಯೋಗವನ್ನು ಕಳೆದುಕೊಂಡಿದ್ದು, ಶೇ.97ರಷ್ಟುಮನೆ ಮಂದಿಯ ಆದಾಯ ಇಳಿಕೆ ಆಗಿದೆ ಎಂದು ಚಿಂತಕರ ಚಾವಡಿಯೊಂದು ಕಳವಳ ವ್ಯಕ್ತಪಡಿಸಿದೆ.

ಭಾರತದ ಆರ್ಥಿಕತೆ ಮೇಲ್ವಿಚರಣೆ ಕೇಂದ್ರ (ಸಿಎಂಐಸಿ) ಎಂಬ ಚಿಂತಕರ ಚಾವಡಿ ದೇಶದಲ್ಲೆಡೆ 1.75 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

‘ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ರೀತಿಯ ನಿಯಂತ್ರಣಗಳನ್ನು ಹೇರಿದ್ದರಿಂದ 1 ಕೋಟಿಗೂ ಅಧಿಕ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಮೇ ಅಂತ್ಯಕ್ಕೆ ನಿರುದ್ಯೋಗ ದರ ಶೇ.12ರಷ್ಟುದಾಖಲಾಗುವ ನಿರೀಕ್ಷೆ ಇದೆ. ಉದ್ಯೋಗವನ್ನು ಕಳೆದುಕೊಂಡವರು ಪುನಃ ಉದ್ಯೋಗವನ್ನು ಪಡೆಯುವುದ ಕಷ್ಟವಾಗಲಿದೆ. ಅನೌಪಚಾರಿಕ ವಲಯಗಳು ಬೇಗನೆ ಚೇತರಿಸಿಕೊಳ್ಳಬಹುದು. ಆದರೆ, ಔಪಚಾರಿಕ ವಲಯದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಲು ಇನ್ನೂ ಒಂದು ವರ್ಷ ಬೇಕಾಗಲಿದೆ’ ಎಂದು ಸಿಎಂಐಸಿ ಮುಖಸ್ಥ ಮಹೇಶ್‌ ವ್ಯಾಸ್‌ ತಿಳಿಸಿದ್ದಾರೆ.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

ಸಾಮಾನ್ಯವಾಗಿ ಭಾರತದ ಆರ್ಥಿಕತೆಗೆ ನಿರುದ್ಯೋಗ ಪ್ರಮಾಣ ಶೇ.3ರಿಂದ 4ರಷ್ಟುಇದ್ದರೆ ಅದನ್ನು ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ, ಕಳೆದ ವರ್ಷ ದೇಶವ್ಯಾಪಿ ಲಾಕ್‌ಡೌನ್‌ ಹೇರಿದ್ದರ ಪರಿಣಾಮವಾಗಿ ಮೇನಲ್ಲಿ ನಿರುದ್ಯೋಗ ಪ್ರಮಾಣ ಶೇ.23.5ಕ್ಕೆ ಏರಿಕೆ ಆಗಿತ್ತು. ಇದೀಗ 2ನೇ ಅಲೆ ಪುನಃ ಜನರ ಉದ್ಯೋಗವನ್ನು ಕಸಿದುಕೊಂಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!