
ನವದೆಹಲಿ (ನ.10) ಡಿಜಿಟಲ್ ಗೋಲ್ಡ್ ಭಾರತದಲ್ಲಿ ನಡೆಯುತ್ತಿರುವ ಅತೀ ದೊಡ್ಡ ಹಗರಣ ಎಂದು ಸೆಬಿ ಎಚ್ಚರಿಸಿದೆ. ಆನ್‌ಲೈನ್ ಮೂಲಕ, ಕೆಲ ಪ್ರಖ್ಯಾತ ಆ್ಯಪ್ ಮೂಲಕ ಡಿಜಿಟಲ್ ಗೋಲ್ಡ್ ಖರೀದಿಸಲು ಅವಕಾಶವಿದೆ. ಬಹುತೇಕರು ಹೂಡಿಕೆ ದೃಷ್ಟಿಯಿಂದ ಡಿಜಿಟಲ್ ಗೋಲ್ಡ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಹೀಗೆ ಹೂಡಿಕೆ ಮಾಡಿ ಮೋಸ ಹೋಗಬೇಡಿ. ಕಾರಣ ಈ ಡಿಜಿಟಲ್ ಗೋಲ್ಡ್ ಯೋಜನೆಗಳು ಯಾವುದು ಅಧಿಕೃತವಾಗಿ ಸೆಬಿ ನಿಯಂತ್ರಣದಲ್ಲಿಲ್ಲ ಎಂದು ಸೆಬಿ ಸ್ಪಷ್ಟಪಡಿಸಿದೆ. ಈ ಮೂಲಕ ಡಿಜಿಟಲ್ ಗೋಲ್ಡ್ ಹೂಡಿಕೆ ಕುರಿತು ಸೆಬಿ ಅತೀ ದೊಡ್ಡ ವಾರ್ನಿಂಗ್ ನೀಡಿದೆ.
ಮಾರ್ಕೆಟ್ ರೆಗ್ಯೂಲೇಟರಿ ಸೆಬಿ ಈ ಕುರಿತು ಮಹತ್ವದ ಎಚ್ಚರಿಕೆ ನೀಡಿದೆ. ಹೂಡಿಕೆದಾರರು ಇ ಗೋಲ್ಡ್, ಡಿಜಿಟಲ್ ಗೋಲ್ಡ್ ಸ್ಕೀಮ್ ಮೇಲೆ ಹೂಡಿಕೆ ಮಾಡಿ ಹಣ ಕಳೆದುಕೊಳ್ಳಬೇಡಿ ಎಂದಿದೆ. ಹಲವು ಆ್ಯಪ್, ಆನ್‌ಲೈನ್ ಕಂಪನಿಗಳು ಡಿಜಿಟಲ್ ಗೋಲ್ಡ್, ಫಿಸಿಕಲ್ ಗೋಲ್ಡ್ ರೀತಿಯೇ ಎಂದು ಪ್ರಚಾರ ಮಾಡುತ್ತಿದೆ. ಆದರೆ ಹಾಗಲ್ಲ, ಅದರ ಮೇಲೆ ಸೆಬಿಗೆ ಯಾವುದೇ ನಿಯಂತ್ರಣ ಇಲ್ಲ ಎಂದಿದೆ.
ಡಿಜಿಟಲ್ ಗೋಲ್ಡ್ ಸೆಬಿ ನಿಯಂತ್ರಿಸುವ ಫಿಸಿಕಲ್ ಗೋಲ್ಡ್‌ಗಿಂತ ಭಿನ್ನವಾಗಿದೆ. ಈ ಡಿಜಿಟಲ್ ಗೋಲ್ಡ್, ಇ ಗೋಲ್ಡ್‌ಗಳನ್ನು ಸೆಬಿ ಭದ್ರತಾ ಹೂಡಿಕೆ (SECURITIES) ಎಂದು ಘೋಷಿಸಿಲ್ಲ. ಇಷ್ಟೇ ಅಲ್ಲ ಇದು ವಸ್ತು ವ್ಯವಹಾರ (commodity derivatives) ನಿಯಂತ್ರಣದಲ್ಲಿ ಇಲ್ಲ. ಹೀಗಾಗಿ ಡಿಜಿಟಲ್ ಗೋಲ್ಡ್ ಹಾಗೂ ಇ ಗೋಲ್ಡ್ ಸೆಬಿ ನಿಯಂತ್ರಣ ವ್ಯಾಪ್ತಿಯಿಂದ ಹೊರಗಿದೆ ಎಂದು ಸೆಬೆ ಸ್ಪಷ್ಟಪಡಿಸಿದೆ.
ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಮಾಡುವ ಹೂಡಿಕೆದಾರರು ಅತ್ಯಂತ ಗಂಭೀರ ಅಪಾಯ ಎದುರಿಸುತ್ತಾರೆ. ಕಾರಣ ಸೆಬಿ ನಿಯಂತ್ರಿತ ಹೂಡಿಕೆಗಳಿಗೆ ಅನ್ವವಯವಾಗುವ ಹೂಡಿಕೆದಾರರ ರಕ್ಷಣೆ ವ್ಯವಸ್ಥೆ ಸೇರದಂತೆ ಸೆಬಿಯ ಸುರಕ್ಷತಾ ಮಾನದಂಡಗಳು ಡಿಜಿಟಲ್ ಗೋಲ್ಡ್‌ಗಳಿಗೆ ಅನ್ವಯವಾಗುವುದಿಲ್ಲ ಎಂದು ಸೆಬಿ ಸ್ಪಷ್ಟಪಡಿಸಿದೆ.
ಹೂಡಿಕೆದಾರರಿಗೆ ಸೆಬಿ ಕೆಲ ಮಹತ್ವದ ಸಲಹೆ ನೀಡಿದೆ. ಡಿಜಿಟಲ್ ಗೋಲ್ಡ್ ಅತೀ ದೊಡ್ಡ ಹಗರಣವಾಗಿದೆ. ಇದರ ಬದಲು ಸೆಬಿ ನಿಯಂತ್ರಣದಲ್ಲಿರುವ ಹೂಡಿಕೆ ಆಯ್ಕೆಗಳಾದ ಮ್ಯೂಚ್ಯುವಲ್ ಫಂಡ್ ನೀಡುವ ಗೋಲ್ಡ್ ಎಕ್ಸ್‌ಚೇಂಜ್, ಟ್ರೇಡೆಡ್ ಫಂಡ್ಸ್, ಎಕ್ಸ್‌ಚೇಂಜ್ ವಹಿವಾಟು ಚಿನ್ನದ ವ್ಯವಹಾರ ಒಪ್ಪಂದ (commodity derivative contracts), ಸ್ಟಾಕ್ ಎಕ್ಸ್‌ಚೇಂಜ್ ಖರೀದಿ ಅಥವಾ ಮಾರಾಟಕ್ಕಿರುವ ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್ ಮೇಲೆ ಹೂಡಿಕೆ ಮಾಡಬಹುದು ಎಂದು ಸೆಬಿ ಹೇಳಿದೆ.
ಸೆಬಿ ನಿಯಂತ್ರಿತ ಚಿನ್ನದ ಉತ್ಪನ್ನಗಳ ಮೇಲೆ ಹೂಡಿಕೆ ಮಾಡುವಾಗ ರಿಜಿಸ್ಟರ್ಡ್ ಮಧ್ಯವರ್ತಿಗಳ ಮೂಲಕ ಮಾತ್ರ ಮಾಡಬೇಕು ಎಂದು ಎಚ್ಚರಿಕೆಯನ್ನು ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.