
2025ರ ನವೆಂಬರ್ 8ರ ಶನಿವಾರದಂದು ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಯು (ಸೆಬಿ-The Securities and Exchange Board of India) ಅನಿಯಂತ್ರಿತ ಡಿಜಿಟಲ್ ಚಿನ್ನ, ಬಂಗಾರಕ್ಕೆ ಸಂಬಂಧಿಸಿದ ಆನ್‌ಲೈನ್ ಪ್ರೊಡಕ್ಟ್ ಖರೀದಿಸದಂತೆ ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದೆ.
ಪ್ರಕಟಣೆಯಲ್ಲಿ ತಿಳಿಸಿದಂತೆ, ಬಂಡವಾಳ ಮಾರುಕಟ್ಟೆ ನಿಯಂತ್ರಕವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಹೂಡಿಕೆದಾರರಿಗೆ ಡಿಜಿಟಲ್ ಬಂಗಾರ ಅಥವಾ ಇ-ಬಂಗಾರದ ಉತ್ಪನ್ನಗಳಂತೆ ಡಿಜಿಟಲ್ ಆಸ್ತಿ ಆಯ್ಕೆಗಳನ್ನು ನೀಡುತ್ತಿರುವುದನ್ನು ಗಮನಿಸಲಾಗಿದೆ. ಇವುಗಳನ್ನು ಭೌತಿಕ ಚಿನ್ನದಲ್ಲಿ ಮತ್ತೊಂದು ಹೂಡಿಕೆಯಾಗಿ ಮಾರಾಟ ಮಾಡಲಾಗುತ್ತಿದೆ.
"ಕೆಲವು ಡಿಜಿಟಲ್ / ಆನ್‌ಲೈನ್ ವೇದಿಕೆಗಳು ಹೂಡಿಕೆದಾರರಿಗೆ 'ಡಿಜಿಟಲ್ ಗೋಲ್ಡ್ ಅಥವಾ ಇ-ಗೋಲ್ಡ್ ಉತ್ಪನ್ನಗಳಲ್ಲಿ' ಹೂಡಿಕೆ ಮಾಡಲು ಅವಕಾಶ ನೀಡುತ್ತಿರುವುದು ಸೆಬಿಗೆ ಗೊತ್ತಾಗಿದೆ. ಡಿಜಿಟಲ್ ಚಿನ್ನವನ್ನು ಭೌತಿಕ ಚಿನ್ನದಲ್ಲಿ ಹೂಡಿಕೆಗೆ ಪರ್ಯಾಯವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಸೆಬಿ ಹೇಳಿದೆ.
ಈ ಡಿಜಿಟಲ್ ಚಿನ್ನ ಉತ್ಪನ್ನಗಳಲ್ಲಿನ ಹೂಡಿಕೆಯನ್ನು ಭದ್ರತೆ ಎಂದು ಗುರುತಿಸಲಾಗಿಲ್ಲ. ಹೀಗಾಗಿ ರಕ್ಷಣಾ ಕಾರ್ಯವಿಧಾನಗಳು ಅನ್ವಯಿಸುವುದಿಲ್ಲ. ಅಷ್ಟೇ ಅಲ್ಲದೆ ಸರಕು ಉತ್ಪನ್ನಗಳಾಗಿ ನಿಯಂತ್ರಿಸಲಾಗಿಲ್ಲವಂತೆ.
"ಸೆಕ್ಯುರಿಟೀಸ್ ಮಾರುಕಟ್ಟೆಯ ವ್ಯಾಪ್ತಿಯಲ್ಲಿರುವ ಯಾವುದೇ ಹೂಡಿಕೆದಾರರ ರಕ್ಷಣಾ ಕಾರ್ಯವಿಧಾನಗಳು ಡಿಜಿಟಲ್ ಬಂಗಾರ ಅಥವಾ ಇ-ಚಿನ್ನದ ಉತ್ಪನ್ನಗಳಲ್ಲಿನ ಹೂಡಿಕೆಗಳಿಗೆ ಲಭ್ಯವಿರುವುದಿಲ್ಲ. ಆದರೆ ಇಟಿಎಫ್, ಮ್ಯೂಚುವಲ್ ಫಂಡ್‌ಗಳು ಮುಂತಾದ ವಿವಿಧ ನಿಯಂತ್ರಿತ ಪ್ರೊಡಕ್ಟ್‌ಗಳನ್ನು ಬಂಗಾರ ಅಥವಾ ಚಿನ್ನಕ್ಕೆ ಸಂಬಂಧಿಸಿದ ಹೂಡಿಕೆಗಳನ್ನು ನೋಂದಾಯಿತ ಘಟಕಗಳ ಮೂಲಕ ರಕ್ಷಿಸಲಾಗಿದೆ.
"ಸೆಬಿ-ನಿಯಂತ್ರಿತ ಬಂಗಾರದ ಹೂಡಿಕೆಗಳನ್ನು ಸೆಬಿ-ನೋಂದಾಯಿತ ಮಧ್ಯವರ್ತಿಗಳ ಮೂಲಕ ಮಾಡಬಹುದು, ಸೆಬಿಯ ನಿಯಂತ್ರಕ ಚೌಕಟ್ಟಿನಿಂದ ನಿಯಂತ್ರಿಸಲ್ಪಡುತ್ತವೆ..
ಟಾಟಾ ಗ್ರೂಪ್‌ನ ಉದ್ಯಮವಾಗಿರುವ ಕ್ಯಾರಟ್‌ಲೇನ್ ದತ್ತಾಂಶದ ಪ್ರಕಾರ, ಕಂಪನಿಗಳು ಮೊಬೈಲ್-ಫಸ್ಟ್ ಡಿಜಿಟಲ್ ಬಂಗಾರದ ಆಯ್ಕೆಗಳನ್ನು ನೀಡುತ್ತಿವೆ, ಅಲ್ಲಿ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು ಚಿನ್ನವನ್ನು ಖರೀದಿಸಲು ಹೂಡಿಕೆ ಮಾಡಬಹುದು.
ಡಿಜಿಟಲ್ ಬಂಗಾರವು ಆನ್‌ಲೈನ್‌ನಲ್ಲಿ ಬಂಗಾರವನ್ನು ಖರೀದಿಸುವ ವಿಧಾನವಾಗಿದ್ದು, ಇದನ್ನು ಸುರಕ್ಷಿತ, ವಿಮೆ ಮಾಡಿದ ವಾಲ್ಟ್‌ಗಳಲ್ಲಿ ಇರಿಸಲಾಗಿರುವ ಭೌತಿಕ ಬಂಗಾರವನ್ನು ಬೆಂಬಲಿಸಲಾಗುತ್ತದೆ. ಸೆಬಿ ಇತ್ತೀಚೆಗೆ ಹೇಳಿದಂತೆ, ಈ ವಸ್ತುಗಳನ್ನು ಸೆಬಿಯ ಹೂಡಿಕೆದಾರರ ರಕ್ಷಣಾ ಮಾನದಂಡಗಳ ಅಡಿಯಲ್ಲಿ ಕಂಟ್ರೋಲ್ ಮಾಡಲಾಗೋದಿಲ್ಲ. ಇದರಿಂದ ನಿಮ್ಮ ಹಿಡುವಳಿಗಳು ಡಿಜಿಟಲ್ ಮೂಲಕ ಹೂಡಿಕೆ ಮಾಡಲು, ಟ್ರ್ಯಾಕ್ ಮಾಡಲು ನಿಮಗೆ ಅನುಮತಿ ಕೊಡುತ್ತದೆ. ನಾಣ್ಯಗಳು / ಆಭರಣಗಳಾಗಿ ಅವುಗಳನ್ನು ರಿಡೀಮ್ ಮಾಡಬಹುದು" ಎಂದಿದ್ದಾರೆ.
ಫೋನ್‌ಪೇ, ಗೂಗಲ್ ಪೇ, ಪೇಟಿಎಂನಂತಹ ಕಂಪನಿಗಳು, ಸೇಫ್‌ಗೋಲ್ಡ್, ಕ್ಯಾರಟ್‌ಲೇನ್, ತನಿಷ್ಕ್ ಮತ್ತು ಎಂಎಂಟಿಸಿ-ಪಿಎಎಂಪಿ ವೆಬ್‌ಸೈಟ್‌ಗಳ ಜೊತೆ ಕೊಲೇಬರೇಟ್ ಆಗಿದೆ.
ಡಿಜಿಟಲ್ ಚಿನ್ನದ ಉತ್ಪನ್ನಗಳನ್ನು ಖರೀದಿ ಮಾಡಿದಾಗ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಬಂಡವಾಳ ಲಾಭಾಂಶ ತೆರಿಗೆ ಮತ್ತು ಅಲ್ಪಾವಧಿಯ ಲಾಭಾಂಶ ತೆರಿಗೆ ಪರಿಣಾಮಗಳು ಸಹ ಬರುತ್ತವೆ ಎಂಬುದನ್ನು ಹೂಡಿಕೆದಾರರು ತಿಳಿದಿರಬೇಕು.
ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವ ಮೊದಲು ಹೂಡಿಕೆದಾರರು ಎಚ್ಚರಿಕೆ ವಹಿಸಬೇಕು, ಸೆಬಿ ನಿಯಂತ್ರಿತ ಪ್ರೊಡಕ್ಟ್‌ಗಳನ್ನು ಪರಿಗಣಿಸಬೇಕು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.