
ನವದೆಹಲಿ(ಡಿ.28): ಎಟಿಎಂನಿಂದ ಹಣ ವಿತ್‌ಡ್ರಾ ಮಾಡಲು ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಹೊಸ ವರ್ಷದಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಎಸ್‌ಬಿಐ ತಿಳಿಸಿದೆ.
ಹಣ ವಿತ್‌ಡ್ರಾ ವ್ಯವಸ್ಥೆಯನ್ನು ಒನ್ ಟೈಂ ಪಾಸ್ವರ್ಡ್(OTP) ಆಧಾರಿತ ಸೇವೆಯನ್ನಾಗಿ ಮಾರ್ಪಡಿಸುವುದಾಗಿ ಎಸ್‌ಬಿಐ ಸ್ಪಷ್ಟಪಡಿಸಿದೆ.
SBI ಕ್ಯಾಶ್ ವಿತ್ ಡ್ರಾ ಲಿಮಿಟ್: ಒಂದೊಂದು ಕಾರ್ಡ್‌ಗೆ ಒಂದೊಂದು ಮೆರಿಟ್!
ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ 10,000 ರೂ.ಗಳಿಗಿಂತಲೂ ಹೆಚ್ಚು ಹಣ ವಿತ್‌ಡ್ರಾ ಮಾಡುವವರಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. ಎಟಿಎಂ ಕಾರ್ಡ್‌ಗಳ ದುರುಪಯೋಗ ತಡೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಸ್‌ಬಿಐ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಎಟಿಎಂನಿಂದ ಹಣ ವಿತ್‌ಡ್ರಾ ಮಾಡುವವರು ಎಟಿಎಂ ಯಂತ್ರದಲ್ಲಿ ತಮ್ಮ ಪಿನ್ ಸಂಖ್ಯೆ ನಮೂದಿಸಿದ ಬಳಿಕ, 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಮೂದಿಸಿ ಗ್ರಾಹಕರ ಖಾತೆಯೊಂದಿಗೆ ಸೇರಿರುವ ಮೊಬೈಲ್ ಸಂಖ್ಯೆಗೆ ನಾಲ್ಕು ಅಂಕಿಗಳ ಒಟಿಪಿ ರವಾನೆಯಾಗಲಿದೆ.
ಹಂತ ಹಂತವಾಗಿ SBI ಡೆಬಿಟ್ ಕಾರ್ಡ್ ರದ್ದು!
ನಂತರ ಆ ಸಂಖ್ಯೆಯನ್ನು ಎಟಿಎಂನಲ್ಲಿ ನಮೂದಿಸಿದ ನಂತರವಷ್ಟೇ ಗ್ರಾಹಕರು ಹಣ ಪಡೆಯಲು ಸಾಧ್ಯವಾಗಲಿದೆ ಎಂದು ಎಸ್‌ಬಿಐ ಸ್ಪಷ್ಟಪಡಿಸಿದೆ. ಈ ಹೊಸ ನಿಯಮ ಇದೇ ಜನವರಿ 1, 2020ರಿಂದ ಜಾರಿಗೆ ಬರಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.