
ಮುಂಬೈ[ಡಿ.28]: 2019-20ನೇ ಹಣಕಾಸು ವರ್ಷದಲ್ಲಿ ಸಾಲ ಪ್ರಗತಿ ಪ್ರಮಾಣ 58 ವರ್ಷಗಳಲ್ಲೇ ಕನಿಷ್ಠ ಪ್ರಮಾಣಕ್ಕೆ ಕುಸಿಯುವ ಸಾಧ್ಯತೆ ಇದೆ ಹಣಕಾಸು ರೇಟಿಂಗ್ ಸಂಸ್ಥೆಯಾದ ಇಕ್ರಾ ತನ್ನ ವರದಿಯಲ್ಲಿ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ದರ ಶೇ.4.5ಕ್ಕೆ ಕುಸಿಯುವ ಮೂಲಕ 6 ವರ್ಷಗಳಲ್ಲೇ ಕನಿಷ್ಠ ದರ ದಾಖಲಿಸಿದ ಬೆನ್ನಲ್ಲೇ ಹೊರಬಿದ್ದ ಈ ವರದಿ ಆರ್ಥಿಕ ಕುಸಿತದ ಭೀತಿಯನ್ನು ಮತ್ತಷ್ಟು ದಟ್ಟವಾಗಿಸಿದೆ.
ಇಕ್ರಾ ಶುಕ್ರವಾರ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ 2019-20ನೇ ಹಣಕಾಸು ವರ್ಷದಲ್ಲಿ ದೇಶದ ಸಾಲ ಪ್ರಗತಿ ದರ ಶೇ.6.5- ಶೇ.7ಕ್ಕೆ ಕುಸಿಯಬಹುದು. ಇದು ನಿಜವಾದಲ್ಲಿ ಇದು 1962ರಲ್ಲಿ ದಾಖಲಾಗಿದ್ದ ಶೇ.5.4ರ ಬಳಿಕದ ಅತ್ಯಂತ ಕನಿಷ್ಠ ಪ್ರಮಾಣವಾಗಲಿದೆ ಎಂದು ಹೇಳಿದೆ.
2018-19ನೇ ಸಾಲಿನಲ್ಲಿ ಸಾಲದ ಪ್ರಗತಿ ಪ್ರಮಾಣ ಶೇ.13.3ರಷ್ಟುದಾಖಲಾಗಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.