ಜಿಎಸ್‌ಟಿ ವಂಚಿಸಿದರೆ ಆಸ್ತಿಗೆ ಕತ್ತರಿ: ಕೇಂದ್ರದ ಹೊಸ ನಿರ್ಧಾರ!

By Suvarna News  |  First Published Dec 28, 2019, 10:46 AM IST

ಜಿಎಸ್‌ಟಿ ವಂಚಿಸಿದರೆ ಆಸ್ತಿ ಮುಟ್ಟುಗೋಲು| ಕೇಂದ್ರೀಯ ನೇರ ತೆರಿಗೆ ಮಂಡಳಿಯಿಂದ ಕಠಿಣ ಕ್ರಮ


ನವದೆಹಲಿ[ಡಿ.28]: ಇತ್ತೀಚಿನ ದಿನಗಳಲ್ಲಿ ಜಿಎಸ್‌ಟಿ ತೆರಿಗೆ ಸಂಗ್ರಹ ಇಳಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಎಸ್‌ಟಿ ವಂಚನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರೀಯ ನೇರ ತೆರಿಗೆಗಳು ಮತ್ತು ಸುಂಕ ಮಂಡಳಿ ನಿರ್ಧರಿಸಿದೆ.

ಯಾರಾದರೂ ಒಂದು ವೇಳೆ ತೆರಿಗೆ ಬಾಕಿ ಉಳಿಸಿಕೊಂಡಿದ್ದು ಕಂಡು ಬಂದರೆ ಅಂಥವರ ಬ್ಯಾಂಕ್‌ ಖಾತೆಗಳು, ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ನೋಂದಣಿ ರದ್ದುಪಡಿಸಬಹುದಾಗಿದೆ. ಆದರೆ, ಈ ಕ್ರಮದಿಂದ ಪ್ರಾಮಾಣಿಕ ತೆರಿಗೆದಾರರಿಗೆ ಯಾವುದೇ ತೊಂದರೆ ಇಲ್ಲ ಎಂದು ಕೇಂದ್ರ ಸರ್ಕಾರ ಅಭಯ ನೀಡಿದೆ.

Latest Videos

ಕಠಿಣ ಕ್ರಮ ಏಕೆ?

ಜಿಎಸ್‌ಟಿ ಜಾರಿಯಾಗಿ ಎರಡು ವರ್ಷಗಳು ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಜಿಎಸ್‌ಟಿ ಸಂಗ್ರಹ ಆಗುತ್ತಿಲ್ಲ. ಇದಕ್ಕೆ ತೆರಿಗೆ ವಂಚನೆ ಮತ್ತು ಜಿಎಸ್‌ಟಿ ಪಾವತಿಸದಿರುವುದು ಪ್ರಮುಖ ಕಾರಣವಾಗಿದೆ. ಹೀಗಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಜಿಎಸ್‌ಟಿ ಕಾಯ್ದೆಯ ಸೆಕ್ಷನ್‌ 83ರ ಅಡಿ ಸ್ಟ್ಯಾಂಡರ್ಡ್‌ ಆಪರೇಷನ್‌ ಪ್ರೊಸಿಜರ್‌ ಜಾರಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 28ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!