ಸಾಲಗಾರರಿಗೆ ಗುಡ್​ನ್ಯೂಸ್​: ಕನಿಷ್ಠ ಬಡ್ಡಿದರ ಕಡಿತಗೊಳಿಸಿದ ಎಸ್​ಬಿಐ- ಏನಿದರ ಪ್ರಯೋಜನ?

By Suchethana D  |  First Published Oct 15, 2024, 5:20 PM IST

ಕನಿಷ್ಠ ಬಡ್ಡಿದರ ಕಡಿತಗೊಳಿಸುವ ಮೂಲಕ  ಎಸ್​ಬಿಐ ಸಾಲಗಾರರಿಗೆ ಬಹುದೊಡ್ಡ ಗುಡ್​​ನ್ಯೂಸ್​ ನೀಡಿದೆ. ಇದರಿಂದ ಆಗುವ ಪ್ರಯೋಜನಗಳೇನು? ಇಲ್ಲಿದೆ ವಿವರ...
 


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಸಾಲಗಾರರಿಗೆ ಗುಡ್​ ನ್ಯೂಸ್​ ನೀಡಿದೆ. ಅದೇನೆಂದರೆ,  ಕನಿಷ್ಠ ವೆಚ್ಚದ ನಿಧಿ ಆಧರಿತ ಸಾಲ (MCLR) ದರವನ್ನು  25 ಬೇಸಿಸ್ ಪಾಯಿಂಟ್‌ಗಳಿಗೆ (0.25%) ಕಡಿತಗೊಳಿಸಿದೆ. ಈ ಕುರಿತು  ವೆಬ್‌ಸೈಟ್ ಮಾಹಿತಿ ನೀಡಿರುವ ಎಸ್​ಬಿಐ, ಹಾಲಿ ಇರುವ ಕನಿಷ್ಠ ವೆಚ್ಚದ ನಿಧಿ ಆಧರಿತ ಸಾಲವನ್ನು 8.45% ರಿಂದ 8.20% ಕ್ಕೆ ಇಳಿಸಿದೆ. ಅಷ್ಟಕ್ಕೂ ಕನಿಷ್ಠ ವೆಚ್ಚದ ನಿಧಿ ಆಧರಿತ ಸಾಲ ಎಂದರೆ, ಒಂದು ಬ್ಯಾಂಕ್​ನ ಕನಿಷ್ಠ ಬಡ್ಡಿದರ.  ಇದಕ್ಕಿಂತ ಕಡಿಮೆ ಬಡ್ಡಿಗೆ ಯಾವುದೇ ಬ್ಯಾಂಕ್​ಗಳು ಸಾಲ ಕೊಡುವಂತಿಲ್ಲ. ಭಾರತೀಯ ರಿಸರ್ವ್​ ಬ್ಯಾಂಕ್​ 2016ರಲ್ಲಿ  ಎಂಸಿಎಲ್​ಆರ್ ನಿಯಮವನ್ನು  ಜಾರಿಗೆ ತಂದಿದೆ. ಇದರ ಅನ್ವಯ ಪ್ರತಿ ಬ್ಯಾಂಕ್​ಗಳು ಇದರಲ್ಲಿ ವ್ಯತ್ಯಾಸ ಮಾಡುತ್ತಲೇ ಇರುತ್ತವೆ. ಎಂಸಿಎಲ್​ಆರ್​ ಜಾರಿಗೂ  ಮುಂಚೆ ಬೇಸ್ ರೇಟ್ ಎಂಬುದಿತ್ತು.  ಆದರೆ ಎಂಸಿಎಲ್​ಆರ್​ ಜಾರಿಯಿಂದ ಸಾಲದಾತರಿಗೆ ಉಪಯೋಗ ಆಗುತ್ತಿದೆ. ಇದರ ದರದಲ್ಲಿ ವ್ಯತ್ಯಾಸವಾದರೆ ಸಾಲದ ದರವೂ ವ್ಯತ್ಯಾಸವಾಗುತ್ತದೆ. ಅಂದರೆ ಬಡ್ಡಿ ದರ ಏರಿಕೆ ಅಥವಾ ಇಳಿಕೆಯಾಗುತ್ತದೆ.  

ಇನ್ನು ಎಸ್​ಬಿಐ ವಿಷಯಕ್ಕೆ ಬರುವುದಾದರೆ, ಈ ಮೊದಲು ಶೇಕಡಾ 8.45ರಷ್ಟು ಬಡ್ಡಿದರಕ್ಕಿಂತ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವಂತೆ ಇರಲಿಲ್ಲ. ಇದೀಗ ಅದನ್ನು ಶೇಕಡಾ 8.20ಕ್ಕೆ ಇಳಿಕೆ  ಮಾಡಿರುವ ಹಿನ್ನೆಲೆಯಲ್ಲಿ ಸಾಲಗಾರರಿಗೆ ಒಂದಿಷ್ಟು ನೆಮ್ಮದಿ ಸಿಕ್ಕಿದೆ. ಎಂಸಿಎಲ್‌ಆರ್‌ ವ್ಯವಸ್ಥೆಯು ಆರ್‌ಬಿಐ ನೀತಿಯಿಂದ ಆಗುವ ಬಡ್ಡಿ ಇಳಿಕೆಯ ಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಲು ನೆರವಾಗುತ್ತದೆ. ಅಂದರೆ ಒಂದು ವೇಳೆ ಠೇವಣಿಯ ಬಡ್ಡಿಯನ್ನು ಬ್ಯಾಂಕ್‌ ಕಡಿಮೆ ಮಾಡಿದರೆ, ಆಗ ಸಹಜವಾಗಿಯೇ ಬ್ಯಾಂಕ್‌ಗಳ ವೆಚ್ಚ ತಗ್ಗುವುದರಿಂದ ಸಾಲದ ಮೇಲಿನ ಬಡ್ಡಿಯನ್ನೂ ಇಳಿಕೆಯಾಗುತ್ತದೆ. 

Latest Videos

undefined

ಒಂದು ಲಕ್ಷ ಠೇವಣಿಗೆ 50 ಸಾವಿರ ರೂ. ಬಡ್ಡಿ: ಎಲ್ಲಕ್ಕಿಂತ ಬೆಸ್ಟ್‌ ಅಂಚೆ ಇಲಾಖೆಯ ಎಫ್‌ಡಿ!

 ಈ ಯೋಜನೆಯು ಇಂದಿನಿಂದ ಅಂದ್ರೆ ಅಕ್ಟೋಬರ್​ 15ರಿಂದ ಜಾರಿಗೆ ಬರಲಿದೆ. ಅಂದಹಾಗೆ MCRL ಎಂದರೆ Marginal Cost of Funds Based Lending Rate. ಕನ್ನಡದಲ್ಲಿ ಅದನ್ನು ಕನಿಷ್ಠ ವೆಚ್ಚದ ನಿಧಿ ಆಧರಿತ ಸಾಲ ಎನ್ನಲಾಗುತ್ತದೆ. ಈಗ ಕನಿಷ್ಠ ಬಡ್ಡಿದರವನ್ನು  ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಮನೆ ಮತ್ತು ವಾಹನ ಸಾಲಗಳು ಸೇರಿದಂತೆ ಹೆಚ್ಚಿನ ಚಿಲ್ಲರೆ ಸಾಲಗಳನ್ನು ಮಾಡಿದವರಿಗೂ ಅನುಕೂಲ ಆಗಲಿದೆ.  ಅಂದರೆ ಸಾಲಗಾರರು ಈ ದರವನ್ನು ಸರಿಹೊಂದಿಸಿದಂತೆ ಅವರ EMI ಗಳಲ್ಲಿ ಇಳಿಕೆಯನ್ನು ಕಾಣುತ್ತಾರೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ವಿತ್ತೀಯ ನೀತಿ ಸಮಿತಿ (ಎಂಪಿಸಿ) ಘೋಷಿಸಿದಂತೆ, ಸತತ ಹತ್ತನೇ ಬಾರಿಗೆ ರೆಪೊ ದರವನ್ನು 6.5% ನಲ್ಲಿ ಬದಲಾಗದೆ ಇರಿಸಲು ಭಾರತೀಯ ರಿಸರ್ವ್ ಬ್ಯಾಂಕ್  ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ,  ಈ ಬೆಳವಣಿಗೆ ಕಂಡಿರುವುದಾಗಿ ಎಸ್​ಬಿಐ ಹೇಳಿದೆ. ಅಂದಹಾಗೆ ಈಗ ಬದಲಾಗಿರುವ ರಿವೈಸ್ಡ್​ MCRL ಪ್ರಕಾರ ಶೇಕಡಾವಾರು ಎಸ್​ಬಿಐ ವೆಬ್​ಸೈಟ್​ ಅನ್ವಯ ಬಡ್ಡಿದರ ಈ ರೀತಿ ಇದೆ. ಒಂದು ದಿನದಿಂದ  ಒಂದು ತಿಂಗಳವರೆಗೆ  8.20%, ಮೂರು ತಿಂಗಳು 8.50%, ಆರು ತಿಂಗಳು 8.85%, ಒಂದು ವರ್ಷ 8.95%, ಎರಡು ವರ್ಷಗಳು 9.05%, ಮೂರು ವರ್ಷಗಳು 9.10%.  

21 ವರ್ಷಕ್ಕೆ 71 ಲಕ್ಷ ರೂಪಾಯಿ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಹೇಗೆ?

click me!