
ದೆಹಲಿ(ಫೆ.19): SBI ಗ್ರಾಹಕರಿಗೊಂದು ಸಿಹಿ ಸುದ್ದಿ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI ಎಕ್ಸ್ಪ್ರೆಸ್ ಕ್ರೆಡಿಟ್ ಪರ್ಸನಲ್ ಲೋನ್ ಸೇವೆ ಒದಗಿಸುತ್ತಿದೆ.
ಎಸ್ಬಿಐ ಸ್ಯಾಲರಿ ಎಕೌಂಟ್ ಇರುವವರಿಗೆ ಈ ಸೌಲಭ್ಯ ಸಿಗಲಿದೆ. ಒಂದು ಮೆಸೇಜ್ ಕಳುಹಿಸುವುದು ಅಥವಾ ಮಿಸ್ ಕಾಲ್ ಕೊಡುವ ಮೂಲಕ ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದು.
ಚಿನ್ನ 8 ತಿಂಗಳ ಕನಿಷ್ಠದತ್ತ: ಭಾರೀ ದರ ಇಳಿಕೆಯಿಂದ ಗ್ರಾಹಕನಿಗೆ ಸಂತಸ!
ಎಸ್ಬಿಐನಲ್ಲಿ ಖಾತೆ ಹೊಂದಿರುವವರು 25 ಸಾವಿರದಿಂದ ತೊಡಗಿ 20 ಲಕ್ಷದ ತನಕ ಸಾಲ ಪಡೆಯಬಹುದಾಗಿದೆ. ಅರ್ಜಿದಾರರಿಗೆ ಲೋನ್ ಅಪ್ಲೈ ಮಾಡಿದ ಕೂಡಲೇ ಅಪ್ರೂವಲ್ ಆಗಿ, ಇನ್ಸ್ಟೆಂಟ್ ಲೋನ್ ಪಾಸ್ ಆಗಲಿದ್ದು, ಶೀಘ್ರವೇ ಸಾಲದ ಮೊತ್ತ ಗ್ರಾಹಕನ ಸೇವಿಂಗ್ ಎಕೌಂಟ್ಗೆ ಜಮೆಯಾಗುತ್ತದೆ ಎಂದ ಎಸ್ಬಿಐ ತಿಳಿಸಿದೆ. ಅತ್ಯಂತ ಕಡಿಮೆ ದಾಖಲೆಳಲ್ಲಿಯೇ ಈ ಸಾಲ ಸಾಂಕ್ಷನ್ ಆಗಲಿದೆ.
ಬಡ್ಡಿ ದರ ಹೇಗೆ..?
ಹೀಗೆ ಪಡೆಯುವ ಇನ್ಸ್ಟೆಂಟ್ ಸಾಲದ ಮೇಲಿನ ಬಡ್ಡಿ ದರವು 9.60% ಇರಲಿದೆ. ಭಾರತದ ಬ್ಯಾಂಕ್ಗಳಲ್ಲಿ ಇದು ಅತ್ಯಂತ ಕಡಿಮೆ ಬಡ್ಡಿ ದರ ಎಂದಿದೆ ಎಸ್ಬಿಐ.
ಲಿಂಕ್ ಟ್ವೀಟ್ ಮಾಡಿದ ಎಸ್ಬಿಐ ಅಧಿಕೃತ ಟ್ವಿಟರ್ ಖಾತೆ, ನಿಮ್ಮ ಮದುವೆ, ವೆಕೇಷನ್, ಅನಿರೀಕ್ಷಿತ ಎಮರ್ಜೆನ್ಸಿ ಅಥವಾ ಯಾವುದಾದರೂ ಖರೀದಿ ಇದ್ದರೆ ಕಡಿಮೆ ದಾಖಲೆಗಳ ಮೂಲಕ ಎಸ್ಬಿಐ ಎಕ್ಸ್ಪ್ರೆಸ್ ಕ್ರೆಡಿಟ್ ಲೋನ್ ಮೂಲಕ ಇನ್ಸ್ಟೆಂಟ್ ಲೋನ್ ಪಡೆಯಬಹುದು ಎಂದು ಬರೆದಿದೆ.
7208933142 ಮಿಸ್ ಕಾಲ್ ಅಥವಾ 7208933142 ಸಂಖ್ಯೆಗೆ PERSONAL ಎಂದು ಮೆಸೇಜ್ ಕಳುಹಿಸಿ ಎಂದು ಟ್ವೀಟ್ನಲ್ಲಿ ಬರೆಯಲಾಗಿದೆ.
ಅರ್ಹತೆ ಏನು..?
1. SBIನಲ್ಲಿ ಸ್ಯಾಲರಿ ಎಕೌಂಟ್ ಹೊಂದಿರಬೇಕು
2. ತಿಂಗಳಿಗೆ ಕನಿಷ್ಠ 15 ಸಾವಿರ ವೇತನ ಇರಬೇಕು
3. ಇಎಂಐ/ಎನ್ಎಂಐ ರೇಷಿಯೋ 50%ಗಿಂತ ಕಡಿಮೆ ಇರಬೇಕು
4. ಎಸ್‌ಬಿಐ ಖಾತೆದಾರರು ಕೇಂದ್ರ/ರಾಜ್ಯ/ಅರೆ ಸರ್ಕಾರಿ, ಕೇಂದ್ರ PSUS ಮತ್ತು ಲಾಭದಾಯಕ ರಾಜ್ಯ PSU, ರಾಷ್ಟ್ರೀಯ ಖ್ಯಾತಿಯ ಶಿಕ್ಷಣ ಸಂಸ್ಥೆಗಳು, ಬ್ಯಾಂಕ್ ಜೊತೆ ಸಂಬಂಧವಿರುವ ಅಥವಾ ಇಲ್ಲದ ಆಯ್ದ ಕಾರ್ಪರೇಟ್‌ಗಳು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.