*ವಂಚನೆ ಚಟುವಟಿಕೆಗೆ ಬ್ರೇಕ್ ಹಾಕಲು ಪಿಐಬಿ ಯತ್ನ
*ನಕಲಿ ಎಸ್ ಎಂಎಸ್ ಗಳ ಬಗ್ಗೆ ಎಚ್ಚರ ವಹಿಸುವಂತೆ ಗ್ರಾಹಕರಿಗೆ ಸಲಹೆ
* ವಂಚನೆ ತಡೆ ಕುರಿತು ಗ್ರಾಹಕರಿಗೆ ನಿರಂತರ ಜಾಗೃತಿ ಮೂಡಿಸುತ್ತಿರುವ ಎಸ್ ಬಿಐ
ನವದೆಹಲಿ (ಮೇ 24): ಭಾರತೀಯ ಸ್ಟೇಟ್ ಬ್ಯಾಂಕ್ ಗೆ (SBI) ಸಂಬಂಧಿಸಿ ಖಾತೆಗಳನ್ನು ಬ್ಲಾಕ್ (Block) ಮಾಡಲಾಗಿದೆ ಎಂಬ ನಕಲಿ (Fake) ಎಸ್ ಎಂಎಸ್ (SMS) ಹರಿದಾಡುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರುವಂತೆ ಕೇಂದ್ರ ಸರ್ಕಾರದ ಮಾಧ್ಯಮ ವಿಭಾಗ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಗ್ರಾಹಕರಿಗೆ ಸೂಚಿಸಿದೆ. ವೈಯಕ್ತಿಕ ಮಾಹಿತಿ ಅಥವಾ ಬ್ಯಾಂಕಿಂಗ್ ವಿವರಗಳನ್ನು ಹಂಚಿಕೊಳ್ಳುವಂತೆ ಕೋರುವ ಎಸ್ ಎಂಎಸ್ (SMS) ಹಾಗೂ ಇ-ಮೇಲ್ ಗಳಿಗೆ (emails) ಪ್ರತಿಕ್ರಿಯಿಸದಂತೆ ಎಸ್ ಬಿಐ (SBI) ಖಾತೆದಾರರಿಗೆ ಮನವಿ ಮಾಡಿದೆ. ಹೀಗೆ ಮಾಡುವುದರಿಂದ ವಂಚನೆ ಚಟುವಟಿಕೆಗಳನ್ನು ತಡೆಯಲು ಸಾಧ್ಯವಿದೆ ಎಂದು ಪಿಐಬಿ (PIB) ಹೇಳಿದೆ.
ನಕಲಿ ಎಸ್ಎಂಎಸ್ ಹರಿದಾಟದ ಬಗ್ಗೆ ಇತ್ತೀಚೆಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪಿಐಬಿ 'ನಿಮ್ಮ ಎಸ್ ಬಿಐ ಅಧಿಕೃತ ಖಾತೆ ಬ್ಲಾಕ್ ಮಾಡಲಾಗಿದೆ ಎಂಬ ಸಂದೇಶವೊಂದು ಹರಿದಾಡುತ್ತಿದ್ದು,ಇದು ನಕಲಿ' ಎಂದು ಹೇಳಿದೆ. ಇಂಥ ವಂಚನೆ ಚಟುವಟಿಕೆಗಳ ವಿರುದ್ಧದ ಹೋರಾಟದ ಭಾಗವಾಗಿ ಪ್ರತಿಕ್ರಿಯೆ ನೀಡಿರುವ ಪಿಐಬಿ 'ನಿಮ್ಮ ವೈಯಕ್ತಿಕ ಮಾಹಿತಿಗಳು ಅಥವಾ ಬ್ಯಾಂಕಿಂಗ್ ವಿವರಗಳನ್ನು ಕೋರುವ ಎಸ್ಎಂಎಸ್ ಅಥವಾ ಇಮೇಲ್ ಗಳಿಗೆ ಪ್ರತಿಕ್ರಿಯಿಸಬೇಡಿ. ಒಂದು ವೇಳೆ ನೀವು ಇಂಥ ಯಾವುದೇ ಸಂದೇಶ ಸ್ವೀಕರಿಸಿದರೆ ತಕ್ಷಣ report.phishing@sbi.co.in ಇಲ್ಲಿಗೆ ವರದಿ ಮಾಡಿ.
SBI Interest Rate Hike:ಮತ್ತೆ ಬಡ್ಡಿದರ ಹೆಚ್ಚಳ ಮಾಡಿದ ಎಸ್ ಬಿಐ; ಮುಂದಿನ ತಿಂಗಳಿಂದ ಗೃಹಸಾಲದ ಇಎಂಐ ಏರಿಕೆ
ನಕಲಿ ಎಸ್ ಎಂಎಸ್ ಹಾಗೂ ಇ-ಮೇಲ್ ಗಳ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರಂತರವಾಗಿ ಎಚ್ಚರಕೆ ನೀಡುತ್ತಲೇ ಬಂದಿದೆ. 'ಒಂದು ವೇಳೆ ಯಾರಾದ್ರೂ ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ವಂಚನೆಯಿಂದ ವಿತ್ ಡ್ರಾ ಮಾಡಿದ್ರೆ, ತಕ್ಷಣ ನಿಮ್ಮ ಬ್ಯಾಂಕಿಗೆ ಮಾಹಿತಿ ನೀಡಿ' ಎಂದು ಆರ್ ಬಿಐ (RBI) ಸಲಹೆ ನೀಡಿದೆ.
ವಂಚಕರು ಹೇಗೆ ತಮ್ಮ ವ್ಯವಹಾರ ನಡೆಸುತ್ತಾರೆ ಹಾಗೂ ಗ್ರಾಹಕರು ವಂಚನೆ ತಡೆಗೆ ಏನು ಮಾಡಬೇಕು ಎಂಬ ಬಗ್ಗೆ ಆರ್ ಬಿಐ ಮಾರ್ಚ್ ನಲ್ಲಿ ಕೂಡ ಜಾಗೃತಿ ಮೂಡಿಸುವ ಭಿತ್ತಿ ಪತ್ರ ಬಿಡುಗಡೆ ಮಾಡಿತ್ತು.
'ಸರ್ಚ್ ಇಂಜಿನ್ ಗಳಲ್ಲಿ ಲಿಸ್ಟ್ ಮಾಡಲಾಗಿರುವ ನಕಲಿ ಕಸ್ಟಮರ್ ಕೇರ್ ಸಂಖ್ಯೆಗಳ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು. ಸರಿಯಾದ ಸಂಪರ್ಕ ವಿವರಗಳಿಗೆ ಸದಾ ಅಧಿಕೃತ ವೆಬ್ ಸೈಟ್ ಗೆ ಬೇಟಿ ನೀಡುವಂತೆ' ಎಸ್ ಬಿಐ ಇನ್ಫೋಸೆಕ್ ತಂಡ ಎಸ್ ಎಂಎಸ್ ಮೂಲಕ ಗ್ರಾಹಕರಿಗೆ ಮೇ 21ರಂದು ಮಾಹಿತಿ ನೀಡಿತ್ತು.
ನಕಲಿ ಸಂದೇಶಗಳ ಬಗ್ಗೆ ಎಚ್ಚರದಿಂದ ಇರುವಂತೆ ಎಸ್ ಬಿಐ ಕಳೆದ ತಿಂಗಳು ಕೂಡ ಗ್ರಾಹಕರಿಗೆ ಸೂಚನೆ ನೀಡಿತ್ತು. 'ಅಂಥ ಎಸ್ ಎಂಎಸ್ ವಂಚನೆಗೆ ಕಾರಣವಾಗಬಲ್ಲದು ಹಾಗೂ ನೀವು ನಿಮ್ಮ ಉಳಿತಾಯವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇಂಥ ಎಸ್ ಎಂಎಸ್ ಗಳಲ್ಲಿರುವ ಎಂಬೆಡ್ದ್ ಲಿಂಕ್ ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕಿಸಬೇಡಿ. ನೀವು ಎಸ್ ಎಂಎಸ್ ಸ್ವೀಕರಿಸಿದ ತಕ್ಷಣ ಸರಿಯಾದ ಎಸ್ ಬಿಐ ಶಾರ್ಟ್ ಕೋಡ್ ಗಾಗಿ ನೋಡಿ. ಎಚ್ಚರಿಕೆಯಿಂದ ಇರಿ ಹಾಗೂ #SafeWithSBI'ಎಂದು ಟ್ವೀಟ್ ಮಾಡಿತ್ತು.
Crypto Market:ಮತ್ತೆ ಕುಸಿದ ಕ್ರಿಪ್ಟೋ ಮಾರುಕಟ್ಟೆ; ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
'ಸ್ಟೇಟ್ ಬ್ಯಾಂಕ್ ಅಥವಾ ಅದರ ಯಾವುದೇ ಪ್ರತಿನಿಧಿಗಳು ನಿಮ್ಮ ವೈಯಕ್ತಿಕ ಮಾಹಿತಿ, ಪಾಸ್ ವರ್ಡ್ ಅಥವಾ ಒನ್ ಟೈಮ್ ಎಸ್ಎಂಎಸ್ ಪಾಸ್ ವರ್ಡ್ ಕೇಳಿ ಇಮೇಲ್/ ಎಸ್ ಎಂಎಸ್ ಅಥವಾ ಕರೆ ಮಾಡೋದಿಲ್ಲ. ಒಂದು ವೇಳೆ ನಿಮಗೆ ಅಂಥ ಯಾವುದೇ ಇ-ಮೇಲ್, ಎಸ್ ಎಂಎಸ್ ಅಥವಾ ಫೋನ್ ಕರೆ ಬಂದರೆ ಅದಕ್ಕೆ ಪ್ರತಿಕ್ರಿಯಿಸಬೇಡಿ. ಇಂಥ ಎಸ್ ಎಂಎಸ್ ,ಇ-ಮೇಲ್ ಅಥವಾ ಕರೆ ನಿಮಗೆ ಬಂದಿದ್ದರೆ ಆ ಬಗ್ಗೆ phishing@sbi.co.in ಸಂಪರ್ಕಿಸಿ. ಒಂದು ವೇಳೆ ತಿಳಿಯದೆ ನೀವು ಪಾಸ್ ವರ್ಡ್ ನೀಡಿದ್ದರೆ ತಕ್ಷಣ ಅದನ್ನು ಬದಲಾಯಿಸಿ' ಎಂದು ಎಸ್ ಬಿಐ ವೆಬ್ ಸೈಟ್ ನಲ್ಲಿ ಗ್ರಾಹಕರಿಗೆ ಸಲಹೆ ನೀಡಲಾಗಿದೆ.