
ವಿದ್ಯಾಭ್ಯಾಸ (Education) ಮುಗಿದು ಕೆಲಸ (Work) ಶುರು ಮಾಡ್ತಿದ್ದಂತೆ, ಮನೆಯ ಹಿರಿಯರು,ಪಾಲಕರು,ಸಂಬಂಧಿಕರು, ಸಹೋದ್ಯೋಗಿಗಳು ಸೇರಿ ಅನೇಕರಿಂದ ಅನೇಕ ಸಲಹೆಗಳು ಬರಲು ಶುರುವಾಗುತ್ತವೆ. ಹಣ (Money) ವ್ಯರ್ಥ ಮಾಡ್ಬೇಡಿ. ಮುಂದಿನ ದಿನಕ್ಕೆ ಅಗತ್ವಿಯ ಇರುವ ಕಾರಣ ಈಗ್ಲಿಂದಲೇ ಉಳಿತಾಯ (Savings) ಮಾಡುವುದನ್ನು ಕಲಿ ಎನ್ನುವುದು ಅದ್ರಲ್ಲಿ ಮುಖ್ಯವಾದದ್ದು. ಮನೆ ಖರೀದಿ (Home), ಆಸ್ತಿ ಖರೀದಿ ಅಥವಾ ಕಾರು ಸೇರಿ ಐಷಾರಾಮಿ ವಸ್ತುಗಳ (Luxurious Items) ಖರೀದಿ, ಮದುವೆ (Wedding), ಮಕ್ಕಳ ವಿದ್ಯಾಭ್ಯಾಸ ಹೀಗೆ ಮುಂದೆ ಖರ್ಚು ಹೆಚ್ಚಿರುವ ಕಾರಣ ಈಗ್ಲೇ ಒಳ್ಳೆ ಯೋಜನೆಯಲ್ಲಿ ಹಣ ಹೂಡಿಕೆ ಮಾಡು ಎನ್ನುವವರು ಹೆಚ್ಚು. ಎಲ್ಲಕ್ಕಿಂತ ಮುಖ್ಯವಾಗಿ ನಿವೃತ್ತಿ ಸಮಯದಲ್ಲಿ ಹಣದ ಅಗತ್ಯ ಮತ್ತಷ್ಟಿರುತ್ತದೆ. ಆದ್ರೆ ಹಣ ಹೂಡಿಕೆ ಮಾಡು ಎಂದು ಸಲಹೆ ನೀಡುವ ಜನರು ಎಲ್ಲಿ ಹೂಡಿಕೆ ಮಾಡ್ಬೇಕು ಎನ್ನುವ ಬಗ್ಗೆ ಸರಿಯಾದ ಮಾಹಿತಿ ನೀಡೋದಿಲ್ಲ. ಹೂಡಿಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕೆಲವರು, ಶೀಘ್ರದಲ್ಲಿಯೇ ಹಣ ಡಬಲ್ ಆಗುತ್ತೆ ಎಂಬ ಸ್ಕೀಂನಲ್ಲಿ ಹಣ ಹೂಡಲು ಮನಸ್ಸು ಮಾಡ್ತಾರೆ. ಆದ್ರೆ ಸರಿಯಾಗಿ ರಿಟರ್ನ್ (Returns) ಬರದೆ ಮೋಸ ಹೋಗ್ತಾರೆ. ಅದ್ರ ಬದಲು ಸರ್ಕಾರದ ಭದ್ರತೆಯುಳ್ಳು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಭದ್ರತೆ ಜೊತೆ ಒಳ್ಳೆ ರಿಟರ್ನ್ ಸಿಗುತ್ತದೆ. ಅನೇಕರಿಗೆ ಅಂಚೆ ಇಲಾಖೆಯ ಯೋಜನೆಗಳ ಬಗ್ಗೆ ತಿಳಿದಿಲ್ಲ. ಇಂದು ನಾವು ಅಂಚೆ ಇಲಾಖೆಯ ಯೋಜನೆಯೊಂದರ ಬಗ್ಗೆ ಮಾಹಿತಿ ನೀಡ್ತೇವೆ.
ಪೋಸ್ಟ್ ಆಫೀಸ್ (Post Office) ಸಣ್ಣ ಉಳಿತಾಯ ಯೋಜನೆಗಳು ಹೂಡಿಕೆಗೆ ಉತ್ತಮ ಆಯ್ಕೆ. ಇದರಲ್ಲಿ ಅಪಾಯದ ಅಂಶವೂ ಕಡಿಮೆ ಮತ್ತು ಅದೇ ಸಮಯದಲ್ಲಿ ಆದಾಯವೂ ಉತ್ತಮವಾಗಿರುತ್ತದೆ. ಅಂತಹ ಹೂಡಿಕೆಯಲ್ಲಿ ಅಂಚೆ ಕಚೇರಿಯ 'ಗ್ರಾಮ ಸುರಕ್ಷಾ ಯೋಜನೆ' (Gram Suraksha Yojane) ಕೂಡ ಒಂದು. ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡಬೇಕು. ಈ ಮೊತ್ತವನ್ನು ನಿಯಮಿತವಾಗಿ ಠೇವಣಿ ಮಾಡಿದರೆ ಮುಂಬರುವ ಸಮಯದಲ್ಲಿ ನಿಮಗೆ 31 ರಿಂದ 35 ಲಕ್ಷ ರೂಪಾಯಿವರೆಗೆ ಲಾಭ ಸಿಗುತ್ತದೆ.
ಗ್ರಾಮ ಸುರಕ್ಷಾ ಯೋಜನೆ ಹೂಡಿಕೆಯ ನಿಯಮಗಳು :
• 19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
• ಈ ಯೋಜನೆ ಕನಿಷ್ಠ ವಿಮಾ ಮೊತ್ತ 10,000 ರೂಪಾಯಿಯಿಂದ 10 ಲಕ್ಷ ರೂಪಾಯಿಯಾಗಿರುತ್ತದೆ.
• ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ರೂಪದಲ್ಲಿ ನೀವು ಈ ಯೋಜನೆಯ ಪ್ರೀಮಿಯಂ ಪಾವತಿ ಮಾಡಬಹುದು.
• ಪ್ರೀಮಿಯಂ ಪಾವತಿಸಲು ನಿಮಗೆ 30 ದಿನಗಳ ಅವಕಾಶವಿರುತ್ತದೆ.
• ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದವರಿಗೆ ಸಾಲ ಸೌಲಭ್ಯ ಕೂಡ ಸಿಗುತ್ತದೆ.
• ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ 3 ವರ್ಷಗಳ ನಂತರ ಅದನ್ನು ಸರೆಂಡರ್ ಮಾಡಬಹುದು. ಆದರೆ ಯೋಜನೆಯ ಯಾವುದೇ ಲಾಭ ನಿಮಗೆ ಸಿಗುವುದಿಲ್ಲ.
ಖಾಸಗಿ ಪೆಟ್ರೋಲ್ ಬಂಕ್‌ಗಳಿಗೆ ಕುತ್ತು, ಈ ರೀತಿ ಆದರೆ ಉದ್ಯಮ ನಡೆಸಲಾಗದು!
ಲಾಭದಾಯಕ ಹೂಡಿಕೆ : ಮೊದಲೇ ಹೇಳಿದಂತೆ ಉತ್ತಮ ಆದಾಯ ಬೇಕು ಹಾಗೂ ಸುರಕ್ಷತೆ ಬೇಕು ಎನ್ನುವವರು ಇದ್ರಲ್ಲಿ ಹೂಡಿಕೆ ಮಾಡಬಹುದು. 19ನೇ ವಯಸ್ಸಿನಲ್ಲಿಯೇ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದಿರಿ ಎಂದಿಟ್ಟುಕೊಳ್ಳೋಣ. 10 ಲಕ್ಷ ರೂಪಾಯಿಗಳ ಪಾಲಿಸಿಯನ್ನು ನೀವು ಖರೀದಿಸಿದ್ದರೆ, ಮಾಸಿಕ ಪ್ರೀಮಿಯಂ 55 ವರ್ಷಗಳಿಗೆ 1515 ರೂಪಾಯಿ ಪಾವತಿ ಮಾಡ್ಬೇಕು. 58 ವರ್ಷಗಳಿಗಾದ್ರೆ 1463 ರೂಪಾಯಿ ಮತ್ತು 60 ವರ್ಷಗಳಿಗೆ 1411 ರೂಪಾಯಿ ಆಗಿರುತ್ತದೆ. ಪಾಲಿಸಿ ಖರೀದಿದಾರರು 55ನೇ ವರ್ಷದಲ್ಲಿ 31.60 ಲಕ್ಷ ರೂಪಾಯಿ,58ನೇ ವರ್ಷದಲ್ಲಿ 33.40 ಲಕ್ಷ ಮತ್ತು 60 ವರ್ಷಗಳಿಗೆ 34.60 ಲಕ್ಷ ರೂಪಾಯಿ ಮೆಚುರಿಟಿ ಲಾಭವನ್ನು ಪಡೆಯುತ್ತಾರೆ.
Steel Stocks Fall: ಷೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಸ್ಟೀಲ್ ಕಂಪನಿಗಳ ಷೇರುಗಳು; ಶೇ.13.2ರಷ್ಟು ಕುಸಿದ JSW
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.