20 ಲಕ್ಷ ರೂಪಾಯಿ ಉಚಿತ ಇನ್ಶೂರೆನ್ಸ್, ಇದಕ್ಕಾಗಿ ಒಂದು ರೂಪಾಯಿಯೂ ಕಟ್ಟಬೇಕಿಲ್ಲ. ಕೇವಲ ನಿಮ್ಮಲ್ಲಿ ಎಸ್‌ಬಿಐ ಎಟಿಎಂ ಕಾರ್ಡ್ ಇದ್ದರೆ ಸಾಕು. ಈ ವಿಶೇಷ ಸೌಲಭ್ಯ ಸಿಗಲಿದೆ.
ನವದೆಹಲಿ(ನ.05) ವಿಮೆ ಅತ್ಯಂತ ಅವಶ್ಯಕ. ಜೀವ ವಿಮೆ, ಆರೋಗ್ಯ ವಿಮೆ ಸೇರಿದಂತೆ ಹಲವು ಬಗೆಯ ಇನ್ಶೂರೆನ್ಸ್ ಲಭ್ಯವಿದೆ. ಆದರೆ ಎಲ್ಲದ್ದಕ್ಕೂ ಪಾವತಿಸಬೇಕು. ಕಂತು ಪಾವಿತಿಸಬೇಕು. ಆದರೆ 20 ಲಕ್ಷ ರೂಪಾಯಿ ಇನ್ಶೂರೆನ್ಸ್ ಯಾವುದೇ ಪಾವತಿ ಮಾಡದೆ, ಕಂತು ಪಾವತಿಸದೆ ಲಭ್ಯ. ನಿಮ್ಮಲ್ಲಿ ಎಸ್‌ಬಿಐ ಬ್ಯಾಂಕ್ ಎಟಿಎಂ ಕಾರ್ಡ್ ಇದ್ದರೆ ಸಾಕು. ಎಸ್‌ಬಿಐ ಎಟಿಎಂ ಕಾರ್ಡ್ ಹೊಂದಿರುವ ಎಲ್ಲರಿಗೂ ಈ ಇನ್ಶೂರೆನ್ಸ್ ಸಿಗಲಿದೆ. ಎಸ್‌ಬಿಐ ಎಟಿಂ ಕಾರ್ಡ್ ಬಳಸುವ ಹಲವು ಗ್ರಾಹಕರಿಗೆ ಈ ಉಚಿತ ವಿಮೆ ಕುರಿತು ಗೊತ್ತಿರುವುದಿಲ್ಲ.
ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ಇದ್ದ ಬಹುತೇಕ ಗ್ರಾಹಕರಲ್ಲಿ ಎಟಿಎಂ ಕಾರ್ಡ್ ಇದ್ದೆ ಇರುತ್ತೆ. ಎಟಿಎಂ ಮಶಿನ್‌ನಿಂದ ನಗದು ಹಣ ತೆಗೆಯಲು, ಶಾಪಿಂಗ್ ಸೇರಿದಂತೆ ಇತರ ಸಂದರ್ಭಗಳಲ್ಲಿ ಪಾವತಿಸಲು ಎಟಿಎಂ ಕಾರ್ಡ್ ಬಳಸುತ್ತಾರೆ. ಸಾಮಾನ್ಯ ಎಸ್‌ಬಿಐ ಎಟಿಂ ಕಾರ್ಡ್ ಇದ್ದವರಿಗೆ ಈ ವಿಮೆ ಲಭ್ಯವಾಗಲಿದೆ. ಹೌದು, ಇದು ಎಸ್‌ಬಿಐ ಬ್ಯಾಂಕ್ ನೀಡುತ್ತಿರುವ ಅಪಘಾತ ವಿಮೆ. ಎಸ್‌ಬಿಐ ಎಟಿಎಂ ಕಾರ್ಡ್ ಬಳಕೆದಾರನಿಗೆ ಅಪಘಾತ ಅಥವಾ ಅಪಘಾತದಿಂದ ಮೃತಪಟ್ಟರೆ ಕುಟುಂಬಸ್ಥರಿಗೆ ಈ ವಿಮೆ ಮೊತ್ತ ಸಿಗಲಿದೆ.
ಅಭಿಷೇಕ್ ಬಚ್ಚನ್‌ಗೆ ಎಸ್‌ಬಿಐ ಬ್ಯಾಂಕ್‌ನಿಂದ ಪ್ರತಿ ತಿಂಗಳು ಬರುತ್ತೆ 18.9 ಲಕ್ಷ ರೂ!
25,000 ರೂಪಾಯಿಂದ ಗರಿಷ್ಠ 20 ಲಕ್ಷ ರೂಪಾಯಿವರೆಗೆ ಆ್ಯಕ್ಸಿಡೆಂಟರ್ ವಿಮೆ ಲಭ್ಯವಾಗಲಿದೆ. ಅಪಘಾತ ಸಂಭವಿಸಿದೆ 90 ದಿನಗಳ ಒಳಗಾಗಿ ಈ ವಿಮೆ ಮೊತ್ತ ಜಮೆ ಆಗಲಿದೆ. ಎಸ್‌ಬಿಐ ಎಂಟಿಎಂ ಬಳಕೆದಾರ ಕನಿಷ್ಠ ಒಂದು ಬಾರಿಯಾದರೂ ಎಟಿಎಂ ಕಾರ್ಡ್ ಬಳಸಿರಬೇಕು. ಇನ್ನು ಮೊತ್ತ ನೀವು ಯಾವ ಎಟಿಎಂ ಕಾರ್ಡ್ ಬಳಸುತ್ತಿದ್ದೀರಿ ಅನ್ನೋದರ ಮೇಲೆ ನಿರ್ಧಾರವಾಗಲಿದೆ. ಎಸ್‌ಬಿಐ ಕ್ಲಾಸಿಕ್ ಎಟಿಎಂ ಕಾರ್ಡ್ ಬಳಕೆದಾರರಿಗೆ 1 ಲಕ್ಷ ರೂಪಾಯಿ ಅಪಘಾತ ವಿಮೆ, ಪ್ಲಾಟಿನಂ ಕಾರ್ಡ್ ಬಳಕೆದಾರರಿಗೆ 2 ಲಕ್ಷ ರೂಪಾಯಿ ವಿಮೆ, ಸಾಮಾನ್ಯ ಮಾಸ್ಟರ್ ಕಾರ್ಡ್ ಬಳಕೆದಾರರಿಗೆ 50,000 ರೂಪಾಯಿ ವಿಮೆ ಮೊತ್ತ, ಪ್ಲಾಟಿನಂ ಮಾಸ್ಟರ್ ಕಾರ್ಡ್ ಬಳಕೆದಾರರಿಗೆ 5ಲಕ್ಷ ರೂಪಾಯಿ, ವಿಸಾ ಕಾರ್ಡ್ ಬಳಕೆದಾರರಿಗೆ 1.50 ಲಕ್ಷ ರೂಪಾಯಿಂದ 2 ಲಕ್ಷ ರೂಪಾಯಿ, ರೂಪೇ ಕಾರ್ಡ್ ಬಳಕೆದಾರರಿಗೆ 1 ರಿಂದ 2 ಲಕ್ಷ ರೂಪಾಯಿ ವಿಮೆ ಲಭ್ಯವಾಗಲಿದೆ.
ಎಸ್‌ಬಿಐ ಎಟಿಎಂ ಕಾರ್ಡ್ ಬಳಕೆದಾರರ ವಿಮೆಯಲ್ಲಿ ಅಪಘಾತದಿಂದ ಸಂಭವಿಸುವ ಮೃತ್ಯು ಹಾಗೂ ಗಾಯಗೊಂಡವರಿಗೆ ವಿಮೆ ಮೊತ್ತ ಲಭ್ಯವಾಗಲಿದೆ. ಗಾಯಗೊಂಡ ಬಳಕೆದಾರರಿಗೂ, ಎಟಿಎಂ ಕಾರ್ಡ್ ಆಧಾರ ಹಾಗೂ ಚಿಕಿತ್ಸೆ ಪ್ರಮಾಣದ ಆಧಾರದಲ್ಲಿ ಮೊತ್ತ ನೀಡಲಾಗುತ್ತದೆ. ಎಸ್‌ಬಿಐ ಬ್ಯಾಂಕ್ ಖಾತೆ ತೆರೆದು ಎಟಿಎಂ ಕೈಸೇರಿದ ಬೆನ್ನಲ್ಲೇ ಈ ಉಚಿತ ಅಪಘಾತ ವಿಮೆ ಸಕ್ರಿಯಗೊಳ್ಳಲಿದೆ. ಇನ್ನು ಬಳಕೆದಾರ ಎಟಿಎಂ ಕಾರ್ಡ್ ಬಳಸಲು ಆರಂಭಿಸಿದ ಬೆನ್ನಲ್ಲೇ ಅಪಘಾತ ವಿಮೆಗೆ ಅರ್ಹರಾಗಿರುತ್ತಾರೆ.
ಎಸ್‌ಬಿಐ ಭಾರತದಲ್ಲಿ ಸರಿಸುಮಾರು 63,580 ಎಟಿಎಂ ಕೇಂದ್ರಗಳನ್ನು ಹೊಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತೀ ದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಿದೆ. ವಿಶ್ವದಲ್ಲಿ 48ನೇ ಅತೀ ದೊಡ್ಡ ಬ್ಯಾಂಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. 2.5 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಕೇಂದ್ರ ಕಚೇರಿ ಮುಂಬೈನಲ್ಲಿದೆ. ಭಾರತದಲ್ಲಿ ಅತೀ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳ ಪೈಕಿ ಸ್ಟೇಟ್ ಆಫ್ ಬ್ಯಾಂಕ್ ಇಂಡಿಯಾ 10ನೇ ಸ್ಥಾನದಲ್ಲಿದೆ. ಭಾರತದಲ್ಲಿ ಮಾತ್ರವಲ್ಲ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಚೀನಾ, ಕೆನಡಾ, ಮಾರಿಷಸ್, ನೇಪಾಳ ಸೇರಿದಂತೆ ಎಸ್‌ಬಿಐ 36 ದೇಶಗಳಲ್ಲಿ 191 ಕಚೇರಿಗಳನ್ನು ಹೊಂದಿದೆ.
ಸಾಲಗಾರರಿಗೆ ಗುಡ್ನ್ಯೂಸ್: ಕನಿಷ್ಠ ಬಡ್ಡಿದರ ಕಡಿತಗೊಳಿಸಿದ ಎಸ್‌ಬಿಐ- ಏನಿದರ ಪ್ರಯೋಜನ?