ವೈರಿ ರಾಷ್ಟ್ರವಾದ್ರೂ ಪಾಕಿಸ್ತಾನದಿಂದ ಭಾರತಕ್ಕೆ ಬರೋ 10 ವಸ್ತುಗಳು; ಬರೋಬ್ಬರಿ 2.5 ಬಿಲಿಯನ್ ವ್ಯಾಪಾರ

By Mahmad Rafik  |  First Published Nov 5, 2024, 2:49 PM IST

ಭಾರತ ಮತ್ತು ಪಾಕಿಸ್ತಾನದ ನಡುವಿನ ವ್ಯಾಪಾರ ಸಂಬಂಧಗಳು ಸಂಕೀರ್ಣವಾಗಿವೆ. ರಾಜಕೀಯ ಉದ್ವಿಗ್ನತೆಗಳ ಹೊರತಾಗಿಯೂ, ಎರಡೂ ದೇಶಗಳ ನಡುವೆ ಗಮನಾರ್ಹ ವ್ಯಾಪಾರ ಮುಂದುವರೆದಿದೆ.


ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ದಿನದ 24 ಗಂಟೆಯೂ ಕಟ್ಟೆಚ್ಚರ ವಹಿಸಲಾಗಿರುತ್ತದೆ. ಪಾಕಿಸ್ತಾನದ ಉಗ್ರರು ಯಾವುದೇ ಕ್ಷಣದಲ್ಲಿಯೂ ಭಾರತದ ಗಡಿ ಪ್ರವೇಶ ಮಾಡುವ ಸಾಧ್ಯತೆ ಇರೋ ಕಾರಣ ಭಾರತೀಯ ಸೈನಿಕರು ಕಾವಲು ಕಾಯುತ್ತಿರುತ್ತಾರೆ. ಎರಡೂ ದೇಶಗಳ ನಡುವಿನ ವ್ಯವಹಾರಿಕ ಸಂಬಂಧವನ್ನು 2019ರಿಂದಲೇ ನಿಲ್ಲಿಸಲಾಗಿದೆ. ಅಷ್ಟು ಮಾತ್ರವಲ್ಲ ಭಾರತ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ರದ್ದುಗೊಳಿಸಿದ ನಿರ್ಧಾರವನ್ನು ಪಾಕಿಸ್ತಾನಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ನಿರ್ಧಾರದ ಬಳಿಕ ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಮೇಲೆ ನಿಷೇಧ ವಿಧಿಸಿತು. 

ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಸರ್ಕಾರ ಶೇ.200ರಷ್ಟು ತೆರಿಗೆ ಹೇರಿದೆ. ಇದರ ಜೊತೆಯಲ್ಲಿ ಪಾಕಿಸ್ತಾನವನ್ನು ಮೋಸ್ಟ್ ಫೇವರ್ಡ್ ನೇಷನ್ ಸ್ಥಾನವನ್ನು ಭಾರತ ಸರ್ಕಾರ ರದ್ದುಗೊಳಿಸಿತು. ಇಷ್ಟೆಲ್ಲಾ ಆದ್ರೂ ಭಾರತ ಮತ್ತು ಪಾಕಿಸ್ತಾನ ನಡುವಿನ ವ್ಯವಹಾರಿಕ ಸಂಬಂಧ ಮುಂದುವರಿದಿದೆ. ಕೆಲ ವಸ್ತುಗಳನ್ನು ಭಾರತ ಇಂದಿಗೂ ಪಾಕಿಸ್ತಾನದದಿಂದ ಆಮದು ಮಾಡಿಕೊಳ್ಳುತ್ತದೆ. ಭಾರತ ಆಮದು ಮಾಡಿಕೊಳ್ಳುವ ಪ್ರಮುಖ 10 ವಸ್ತುಗಳು ಇಲ್ಲಿವೆ.

Tap to resize

Latest Videos

undefined

2022ರ ಅವಧಿಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಅಂದಾಜು 2.5 ಬಿಲಿಯನ್ ಡಾಲರ್‌ ಗಳಷ್ಟು ವ್ಯಾಪಾರ ಆಗಿದೆ. ಈ ಸಂಖ್ಯೆಯಲ್ಲಿ ಕೊಂಚ ವ್ಯತ್ಯಾಸ ಆಗಬಹುದು. ಹಾಗಾದ್ರೆ ವೈರಿ ರಾಷ್ಟ್ರವಾಗಿರುವ ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುವ ಪ್ರಮುಖ ವಸ್ತುಗಳು ಯಾವವು ಎಂಬುದನ್ನು ನೋಡೋಣ ಬನ್ನಿ. 

ಪಾಕಿಸ್ತಾನದಿಂದ ಹೆಚ್ಚು ಪ್ರಮಾಣದಲ್ಲಿ ಡ್ರೈಫ್ರೂಟ್ಸ್ ಖರೀದಿಸುತ್ತದೆ. ಇಷ್ಟು ಮಾತ್ರವಲ್ಲದೇ ಪಾಕಿಸ್ತಾನದ ತಾಜಾ ಹಣ್ಣುಗಳು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ಬಿನಾನಿ ಸಿಮೆಂಟ್ ಭಾರತದಲ್ಲಿ ಅತಿಹೆಚ್ಚು ಮಾರುಕಟ್ಟೆಯನ್ನು ಹೊಂದಿದೆ. ಬಹುಬೇಡಿಕೆಯ ಸಿಮೆಂಟ್‌ಗಳಲ್ಲಿ ಇದು ಸಹ ಒಂದಾಗಿದೆ. ಆದ್ರೆ ಬಹುತೇಕರಿಗೆ ಬಿನಾನಿ ಸಿಮೆಂಟ್ ಉತ್ಪಾದನೆ ಪಾಕಿಸ್ತಾನದಲ್ಲಾಗುತ್ತೆ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ.

ಇದನ್ನೂ ಓದಿ: ಈ ಯಂತ್ರ ಅಳವಡಿಸಿ ಬ್ಯುಸಿನೆಸ್ ಆರಂಭಿಸಿದ್ರೆ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಲಾಭ

ಭಾರತದಲ್ಲಿ ಸಿಗುವ ಕೆಂಪುಉಪ್ಪು (ಹಿಮಾಲಯನ್ ಉಪ್ಪು) ಸಹ ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಪಾಕಿಸ್ತಾನ ಈ ಉಪ್ಪು ಉತ್ಪಾದನೆಯಲ್ಲಿ ನಿರ್ಭರವಾಗಿದೆ. ಭಾರತ ಮಾತ್ರವಲ್ಲದೇ ಹಲವು ದೇಶಗಳಿಗೆ ಪಾಕಿಸ್ತಾನ ಈ ಉಪ್ಪನ್ನು ರಫ್ತು ಮಾಡುತ್ತದೆ. ತ್ವಚೆಯ ರಕ್ಷಣೆಗಾಗಿ ಬಳಸುವ  ಮುಲ್ತಾನಿ ಮಟ್ಟಿಯನ್ನು ಸಹ ಪಾಕಿಸ್ತಾನದಿಂದಲೇ ತರಿಸಿಕೊಳ್ಳಲಾಗುತ್ತದೆ. ಮುಲ್ತಾನಿ ಮಟ್ಟಿಯೂ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಒಂದಾಗಿದೆ.

ಕನ್ನಡಕಗಳಲ್ಲಿ ಬಳಸಲಾಗುವ ಆಫ್ಟಿಕಲ್‌  ಸಹ ಅಧಿಕ ಪ್ರಮಾಣದಲ್ಲಿ ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತದೆ. ಇದರ ಜೊತೆಗೆ   ಬಟ್ಟೆ, ಪೇಶ್ವಾರಿ ಚಪ್ಪಲಿಯೂ ಪಾಕಿಸ್ತಾನದಿಂದ ಬರುತ್ತದೆ. ಉಪ್ಪು ಮತ್ತು ಸಿಮೆಂಟ್ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಆಮದು ಆದ್ರೆ, ಪಾಕಿಸ್ತಾನದ ಚರ್ಮದ ಉತ್ಪನ್ನಗಳಿಗೂ ಭಾರತದಲ್ಲಿ ಮಾರುಕಟ್ಟೆ ಇದೆ. ಕಾಟನ್, ಸ್ಟೀಲ್, ತಾಮ್ರ, ಕಾರ್ಬನಿಕ್ ಕೆಮಿಕಲ್, ಮೆಟಲ್ ಕಾಂಪೌಂಡ್ ಪಾಕಿಸ್ತಾನದಿಂದ ಭಾರತಕ್ಕೆ ಬರುತ್ತದೆ. ಚೀನಾದಿಂದ ಕನ್ಫೆಕ್ಷನರಿ ಪ್ರೊಡಕ್ಟ್‌ಗಳು ಭಾರತಕ್ಕೆ ಬರುತ್ತವೆ.

ಇದನ್ನೂ ಓದಿ: ಬಾಂಗ್ಲಾಗೆ ಕರೆಂಟ್ ಶಾಕ್ ಕೊಟ್ಟ ಅದಾನಿ; 72 ಸಾವಿರ ಕೋಟಿ ಬಿಡುಗಡೆಗೆ ಡೆಡ್‌ಲೈನ್ ನೀಡಿದ ಉದ್ಯಮಿ

click me!