ಕೇಂದ್ರ ಸರ್ಕಾರವು 43 ಗ್ರಾಮೀಣ ಬ್ಯಾಂಕ್‌ಗಳನ್ನು 28ಕ್ಕೆ ಇಳಿಸಲು ಚಿಂತಿಸುತ್ತಿದೆ. ಈ ಪ್ರಸ್ತಾವನೆಯು 15 ಬ್ಯಾಂಕ್‌ಗಳನ್ನು ಮುಚ್ಚುವ ಸಾಧ್ಯತೆಯನ್ನು ಹೆಚ್ಚಿಸಿದೆ.
ನವದೆಹಲಿ: ಕೇಂದ್ರ ಸರ್ಕಾರ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆಯನ್ನು ಇಳಿಕೆ ಮಾಡಲು ಮುಂದಾಗಿದ್ದು, ಈ ಬಗ್ಗೆ ಚರ್ಚೆಗಳು ನಡೆದಿವೆ ಎಂದು ವರದಿಯಾಗಿದೆ. ನಿಮ್ಮ ಖಾತೆ ಗ್ರಾಮೀಣ ಬ್ಯಾಂಕ್‌ನಲ್ಲಿದ್ದರೆ ಈ ಕುರಿತಾದ ವಿಷಯವನ್ನು ನೀವು ತಿಳಿದುಕೊಳ್ಳುವುದು ಕಡ್ಡಾಯವಾಗಿದೆ. ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆಯನ್ನು ಇಳಿಸುವ ಕುರಿತು ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ. ಬ್ಯಾಂಕ್‌ಗಳನ್ನು ವಿಲೀನ ಮಾಡುವ ಮೂಲಕ ರಾಜ್ಯದಲ್ಲಿ ಒಂದೇ ಗ್ರಾಮೀಣ ಬ್ಯಾಂಕ್ ಇರಬೇಕೆಂಬ ಚಿಂತನೆಯಲ್ಲಿ ಕೇಂದ್ರ ಸರ್ಕಾರವಿದೆಯಂತೆ.
ಸದ್ಯ ಭಾರತದಲ್ಲಿ ಒಟ್ಟು 43 ಆರ್‌ಆರ್‌ಬಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು 28ಕ್ಕೆ ಇಳಿಸಲು ಚಿಂತಿಸಲಾಗುತ್ತಿದೆ. ಅಂದ್ರೆ 15 ಗ್ರಾಮೀಣ ಬ್ಯಾಂಕ್‌ಗಳು ಮುಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
1975ರ ಸೆಪ್ಟೆಂಬರ್ 27ರಂದು ಕ್ಷೇತ್ರದ ಗ್ರಾಮೀಣ ಬ್ಯಾಂಕ್‌ಗಳ ಸ್ಥಾಪನೆಯಾಯ್ತು. 1975 ರಲ್ಲಿ ಹೊರಡಿಸಲಾದ ಆರ್ಡಿನೆನ್ಸ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಕಾಯಿದೆ, 1976 ರ ನಿಬಂಧನೆಗಳ ಅಡಿಯಲ್ಲಿ ಕೃಷಿ ಮತ್ತು ವ್ಯಾಪಾರವನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಗ್ರಾಮೀಣ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಗ್ರಾಮೀಣ ಬ್ಯಾಂಕ್‌ಗಳ ಸ್ಥಾಪನೆ ಮಾಡಲಾಯ್ತು.
ಸಂಖ್ಯೆ | Name of Regional Rural Bank | Sponsor Bank | State |
1 | ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್ | ಕೆನರಾ ಬ್ಯಾಂಕ್ | ಆಂಧ್ರ ಪ್ರದೇಶ |
2 | ಚೈತನ್ಯ ಗೋಧಾವರಿ ಗ್ರಾಮೀಣ ಬ್ಯಾಂಕ್ | ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ | ಆಂಧ್ರ ಪ್ರದೇಶ |
3 | ಸಪ್ತಗಿರಿ ಗ್ರಾಮೀಣ ಬ್ಯಾಂಕ್ | ಇಂಡಿಯನ್ ಬ್ಯಾಂಕ್ | ಆಂಧ್ರ ಪ್ರದೇಶ |
4 | ಅರುಣಾಚಲ ಪ್ರದೇಶ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಅರುಣಾಚಲ ಪ್ರದೇಶ |
5 | ಅಸ್ಸಾಂ ಗ್ರಾಮೀಣ ಬ್ಯಾಂಕ್ | ಪಂಜಾಬ್ ನ್ಯಾಷನಲ್ ಬ್ಯಾಂಕ್ | ಅಸ್ಸಾಂ |
6 | ದಕ್ಷಿಣ ಬಿಹಾರ ಗ್ರಾಮೀಣ ಬ್ಯಾಂಕ್ | ಪಂಜಾಬ್ ನ್ಯಾಷನಲ್ ಬ್ಯಾಂಕ್ | ಬಿಹಾರ |
7 | ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್ | ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | ಬಿಹಾರ |
8 | ಛತ್ತೀಸಗಢ ರಾಜ್ಯ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಛತ್ತೀಸಗಢ |
9 | ಬರೋಡಾ ಗುಜರಾತ ಗ್ರಾಮೀಣ ಬ್ಯಾಂಕ್ | ಬ್ಯಾಂಕ್ ಆಫ್ ಬರೋಡಾ | ಗುಜರಾತ್ |
10 | ಸೌರಾಷ್ಟ್ರ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಗುಜರಾತ್ |
11 | ಸರ್ವ ಹರಿಯಾಣ ಗ್ರಾಮೀಣ ಬ್ಯಾಂಕ್ | ಪಂಜಾಬ್ ನ್ಯಾಷನಲ್ ಬ್ಯಾಂಕ್ | ಹರಿಯಾಣ |
12 | ಹಿಮಾಚಲ ಪ್ರದೇಶ ಗ್ರಾಮೀಣ ಬ್ಯಾಂಕ್ | ಪಂಜಾಬ್ ನ್ಯಾಷನಲ್ ಬ್ಯಾಂಕ್ | ಹಿಮಾಚಲ ಪ್ರದೇಶ |
13 | ಎಲೆಕ್ವೈ ದೇಹತಿ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಜಮ್ಮು ಕಾಶ್ಮೀರ |
14 | ಜಮ್ಮು-ಕಾಶ್ಮೀರ ಗ್ರಾಮೀಣ ಬ್ಯಾಂಕ್ | ಜೆ ಆಂಡ್ ಕೆ ಬ್ಯಾಂಕ್ ಲಿಮಿಟೆಡ್ | ಜಮ್ಮು ಕಾಶ್ಮೀರ |
15 | ಜಾರ್ಖಂಡ್ ರಾಜ್ಯ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಜಾರ್ಖಂಡ್ |
16 | ಕರ್ನಾಟಕ ಗ್ರಾಮೀಣ ಬ್ಯಾಂಕ್ | ಕೆನರಾ ಬ್ಯಾಂಕ್ | ಕರ್ನಾಟಕ |
17 | ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ | ಕೆನರಾ ಬ್ಯಾಂಕ್ | ಕರ್ನಾಟಕ |
18 | ಕೇರಳ ಗ್ರಾಮೀಣ ಬ್ಯಾಂಕ್ | ಕೆನರಾ ಬ್ಯಾಂಕ್ | ಕೇರಳ |
19 | ಮಧ್ಯ ಪ್ರದೇಶ ಗ್ರಾಮೀಣ ಬ್ಯಾಂಕ್ | ಬ್ಯಾಂಕ್ ಆಫ್ ಇಂಡಿಯಾ | ಮಧ್ಯ ಪ್ರದೇಶ |
20 | ಮಧ್ಯಾಂಚಲ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಮಧ್ಯ ಪ್ರದೇಶ |
21 | ಮಹಾರಾಷ್ಟ್ರ ಗ್ರಾಮೀಣ ಬ್ಯಾಂಕ್ | ಬ್ಯಾಂಕ್ ಆಫ್ ಮಹಾರಾಷ್ಟ್ರ | ಮಹಾರಾಷ್ಟ್ರ |
22 | ವಿದರ್ಭ ಕೊಂಕಣ ಗ್ರಾಮೀಣ ಬ್ಯಾಂಕ್ | ಬ್ಯಾಂಕ್ ಆಫ್ ಇಂಡಿಯಾ | ಮಹಾರಾಷ್ಟ್ರ |
23 | ಮಣಿಪುರ ಗ್ರಾಮೀಣ ಬ್ಯಾಂಕ್ | ಪಂಜಾಬ್ ನ್ಯಾಷನಲ್ ಬ್ಯಾಂಕ್ | ಮಣಿಪುರ |
24 | ಮೇಘಾಲಯ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಮೇಘಾಲಯ |
25 | ಮಿಜೊರಾಂ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಮಿಜೊರಾಂ |
26 | ನಾಗಾಲ್ಯಾಂಡ್ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ನಾಗಾಲ್ಯಾಂಡ್ |
27 | ಓಡಿಶಾ ಗ್ರಾಮೀಣ ಬ್ಯಾಂಕ್ | ಇಂಡಿಯನ್ ಓವರ್‌ಸೀಸ್ ಬ್ಯಾಂಕ್ | ಓಡಿಶಾ |
28 | ಉತ್ಕಲ್ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಓಡಿಶಾ |
29 | ಪುದವೈ ಭಾರತೀಯರ್ ಗ್ರಾಮೀಣ ಬ್ಯಾಂಕ್ | ಇಂಡಿಯನ್ ಬ್ಯಾಂಕ್ | ಪುದುಚೇರಿ |
30 | ಪಂಜಾಬ್ ಗ್ರಾಮೀಣ ಬ್ಯಾಂಕ್ | ಪಂಜಾಬ್ ನ್ಯಾಷನಲ್ ಬ್ಯಾಂಕ್ | ಪಂಜಾಬ್ |
31 | ಬರೋಡಾ ರಾಜಸ್ಥಾನ ಕ್ಷೇತ್ರಿಯ ಗ್ರಾಮೀಣ ಬ್ಯಾಂಕ್ | ಬ್ಯಾಂಕ್ ಆಫ್ ಬರೋಡಾ | ರಾಜಸ್ಥಾನ |
32 | ರಾಜಸ್ಥಾನ ಮರೂಧರಾ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ರಾಜಸ್ಥಾನ |
33 | ತಮಿಳುನಾಡು ಗ್ರಾಮ್ ಬ್ಯಾಂಕ್ | ಇಂಡಿಯನ್ ಬ್ಯಾಂಕ್ | ತಮಿಳುನಾಡು |
34 | ಆಂಧ್ರ ಪ್ರದೇಶ ಗ್ರಾಮೀಣ ವಿಕಾಸ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಆಂಧ್ರ ಪ್ರದೇಶ |
35 |
ತೆಲಂಗಾಣ ಗ್ರಾಮೀಣ ಬ್ಯಾಂಕ್ |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ತೆಲಂಗಾಣ |
36 | ತ್ರಿಪುರ ಗ್ರಾಮೀಣ ಬ್ಯಾಂಕ್ | ಪಂಜಾಬ್ ನ್ಯಾಷನಲ್ ಬ್ಯಾಂಕ್ | ತ್ರಿಪುರ |
37 | ಆರ್ಯವರ್ತ ಬ್ಯಾಂಕ್ | ಬ್ಯಾಂಕ್ ಆಫ್ ಇಂಡಿಯಾ | ಉತ್ತರ ಪ್ರದೇಶ |
38 | ಬರೋಡಾ ಯುಪಿ ಬ್ಯಾಂಕ್ | ಬ್ಯಾಂಕ್ ಆಫ್ ಇಂಡಿಯಾ | ಉತ್ತರ ಪ್ರದೇಶ |
39 | ಪಶ್ಚಿಮ ಯುಪಿ ಗ್ರಾಮೀಣ ಬ್ಯಾಂಕ್ | ಪಂಜಾಬ್ ನ್ಯಾಷನಲ್ ಬ್ಯಾಂಕ್ | ಉತ್ತರ ಪ್ರದೇಶ |
40 | ಉತ್ತರಾಖಂಡ ಗ್ರಾಮೀಣ ಬ್ಯಾಂಕ್ | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಉತ್ತರಾಖಂಡ |
41 | ಬಂಗೀಯ ಗ್ರಾಮೀಣ ಬ್ಯಾಂಕ್ | ಪಂಜಾಬ್ ನ್ಯಾಷನಲ್ ಬ್ಯಾಂಕ್ | ಪಶ್ಚಿಮ ಬಂಗಾಳ |
42 | ಪಶ್ಚಿಮ ಬಂಗಾ ಗ್ರಾಮೀಣ ಬ್ಯಾಂಕ್ | ಯುಕೊ ಬ್ಯಾಂಕ್ | ಪಶ್ಚಿಮ ಬಂಗಾಳ |
43 | ಉತ್ತರ ಬಂಗ ಕ್ಷೇತ್ರಿಯ ಗ್ರಾಮೀಣ ಬ್ಯಾಂಕ್ | ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ | ಪಶ್ಚಿಮ ಬಂಗಾಳ |
ಇದನ್ನೂ ಓದಿ: ಬ್ಯಾಂಕ್ ಖಾತೆಯಲ್ಲಿ ಮಿನಿಮನ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಕಟ್ಟಬೇಕಾ? ಇಲ್ಲಿದೆ RBI ನಿಯಮ!