Viral: ಎಲಾನ್‌ ಮಸ್ಕ್‌ಗೆ ಸೆಲ್ಯೂಟ್‌ ಎಂದ ಆನಂದ್‌ ಮಹೀಂದ್ರಾ: ರಿಸ್ಕ್‌ ತೆಗೆದುಕೊಳ್ಳೋ ಸಾಮರ್ಥ್ಯಕ್ಕೆ ಮೆಚ್ಚುಗೆ

By BK AshwinFirst Published Apr 22, 2023, 3:05 PM IST
Highlights

ಅವರ ವ್ಯವಹಾರಕ್ಕೆ ಪ್ರಮುಖ ಕೊಡುಗೆ ಟೆಸ್ಲಾ ಅಥವಾ ಸ್ಪೇಸ್‌ಎಕ್ಸ್ ಆಗಿರುವುದಿಲ್ಲ. ಆದರೆ ರಿಸ್ಕ್‌ ತೆಗೆದುಕೊಳ್ಳುವ ಅವರ ಸಾಮರ್ಥ್ಯ. ಇಂತಹ 'ವೈಫಲ್ಯ'ದಿಂದ ಹೆಚ್ಚಿನವರು ರಿಸ್ಕ್‌ ತೆಗೆದುಕೊಳ್ಳುವುದನ್ನು ಬಿಡುತ್ತಾರೆ. ಆದರೆ ಎಲಾನ್‌ ಮಸ್ಕ್‌ ಹಾಗಲ್ಲ ಎಂದು ಭಾರತದ ಖ್ಯಾತ ಉದ್ಯಮಿ ಆನಂದ್‌ ಮಹೀಂದ್ರಾ ಹೇಳಿದ್ದಾರೆ. 

ನವದೆಹಲಿ (ಏಪ್ರಿಲ್ 22, 2023): ಖ್ಯಾತ ಉದ್ಯಮಿಗಳಾದ ಎಲಾನ್‌ ಮಸ್ಕ್‌ ಹಾಗೂ ಆನಂದ್‌ ಮಹೀಂದ್ರಾ ಇಬ್ಬರೂ ಸಹ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ಹೆಚ್ಚು ಪ್ರಚಲಿತರಾಗಿರುತ್ತಾರೆ. ಇನ್ನು, ಇತ್ತೀಚೆಗೆ ಎಲಾನ್‌ ಮಸ್ಕ್‌ ಅವರನ್ನು ಭಾರತದ ಆನಂದ್‌ ಮಹೀಂದ್ರಾ ಅವರು ಶ್ಲಾಘಿಸಿದ್ದಾರೆ. ಎಲಾನ್‌ ಮಸ್ಕ್‌ ಅವರು ವ್ಯಾಪಾರದ ಜಗತ್ತಿಗೆ ನೀಡಿದ ಕೊಡುಗೆಗಳನ್ನು ಶ್ಲಾಘಿಸಿದ್ದಾರೆ.

ಎಲಾನ್‌ ಮಸ್ಕ್‌ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ನಾನಾ ಬದಲಾವಣೆಗಳನ್ನು ತಂದಿದ್ದಾರೆ. ನಿನ್ನೆಯಷ್ಟೇ ಚಂದಾದಾರರಿಗೆ ಮಾತ್ರ ಬ್ಲೂ ಟಿಕ್‌ ಎಂಬ ನಿಯಮ ಜಾರಿಗೆ ತಂದಿದ್ದು, ಈ ಮೊದಲು ಸೆಲೆಬ್ರಿಟಿಗಳು, ಪತ್ರಕರ್ತರಿಗೆ ನೀಡುತ್ತಿದ್ದ ಉಚಿತ ಬ್ಲೂಟಿಕ್‌ ಸೌಲಭ್ಯವನ್ನು ಕಿತ್ತುಹಾಕಿದ್ದಾರೆ. ಈ ಹಿನ್ನೆಲೆ ಹಲವರು ಎಲಾನ್‌ ಮಸ್ಕ್‌ ನಡೆಗೆ ಟೀಕೆ ಮಾಡುತ್ತಿದ್ದಾರೆ ಹಾಗೂ ಟ್ರೋಲ್‌ ಮಾಡುತ್ತಿದ್ದಾರೆ. ಆದರೆ, ಇದೇ ಸಮಯದಲ್ಲಿ ಆನಂದ್‌ ಮಹೀಂದ್ರಾ ಇವರನ್ನು ಶ್ಲಾಘಿಸಿದ್ದಾರೆ. ಆದರೆ, ಇದು ಟ್ವಿಟ್ಟರ್‌ ಕಾರಣಕ್ಕಲ್ಲ. ಅಲ್ಲದೆ, ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಅಥವಾ ಸ್ಪೇಸ್‌ಎಕ್ಸ್ ಅನ್ನೂ ಉಲ್ಲೇಖಿಸಿಲ್ಲ. ಬದಲಾಗಿ ದಕ್ಷಿಣ ಆಫ್ರಿಕಾದಲ್ಲಿ ಜನಿಸಿ ಅಮೆರಿಕ ಉದ್ಯಮಿಯಾಗಿರುವ ಇವರ ರಿಸ್ಕ್‌ ಅಥವಾ ಅಪಾಯ-ತೆಗೆದುಕೊಳ್ಳುವ ಸಾಮರ್ಥ್ಯವನ್ನು ಉಲ್ಲೇಖಿಸಿದ್ದಾರೆ.

ಇದನ್ನು ಓದಿ:Anand Mahindra: ಇವರೇ ಬೆಸ್ಟ್‌ ಬೊಲೆರೋ ಡ್ರೈವರ್‌; ಆನೆಗೂ ಹೆದರದ ಇವರನ್ನು ಕ್ಯಾಪ್ಟನ್‌ ಕೂಲ್ ಎಂದ ಉದ್ಯಮಿ

ಇದುವರೆಗೆ ನಿರ್ಮಿಸಿದ ಅತ್ಯಂತ ಶಕ್ತಿಶಾಲಿ ರಾಕೆಟ್ ಸ್ಟಾರ್‌ಶಿಪ್‌ನ ಸ್ಪೇಸ್‌ಎಕ್ಸ್ ಇತ್ತೀಚಿನ ಉಡಾವಣೆಯ ವಿಡಿಯೋ ಕ್ಲಿಪ್‌ ಅನ್ನು ಟ್ಯಾಗ್‌ ಮಾಡುವ ಮೂಲಕ ಎಲಾನ್‌ ಮಸ್ಕ್‌ ಅವರ ರಿಸ್ಕ್‌ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆನಂದ್‌ ಮಹೀಂದ್ರಾ ಶ್ಲಾಘಿಸಿದ್ದಾರೆ. ಸ್ಪೇಸ್‌ ಎಕ್ಸ್‌ನ ಮಾನವರಹಿತ ರಾಕೆಟ್ ಯಶಸ್ವಿ ಲಿಫ್ಟ್‌ಆಫ್ ನಂತರ ಹಾಗೂ 39 ಕಿಮೀಗಳ ಅಪೋಜಿಯನ್ನು ತಲುಪಿದ ನಂತರ, ಟೇಕ್-ಆಫ್ ಆದ 2-3 ನಿಮಿಷಗಳ ನಂತರ ಟೆಕ್ಸಾಸ್ ವಾಯುಪ್ರದೇಶದ ಮೇಲೆ ಗಾಳಿಯ ಮಧ್ಯದಲ್ಲಿ ಸ್ಫೋಟವಾಗಿದೆ. ಆದರೂ, ತಮ್ಮ ಕಂಪನಿಯು ಕೆಲವು ತಿಂಗಳುಗಳಲ್ಲಿ ಮತ್ತೆ ಪ್ರಯತ್ನಿಸುತ್ತದೆ ಎಂದು  SpaceX ಸಂಸ್ಥಾಪಕರೂ ಆಗಿರೋ ಎಲಾನ್‌ ಮಸ್ಕ್‌ ಹೇಳಿದ್ದಾರೆ.

@elonmusk ಅವರ ವ್ಯವಹಾರಕ್ಕೆ ಪ್ರಮುಖ ಕೊಡುಗೆ ಟೆಸ್ಲಾ ಅಥವಾ ಸ್ಪೇಸ್‌ಎಕ್ಸ್ ಆಗಿರುವುದಿಲ್ಲ. ಆದರೆ ರಿಸ್ಕ್‌ ತೆಗೆದುಕೊಳ್ಳುವ ಅವರ ಸಾಮರ್ಥ್ಯ. ಇಂತಹ 'ವೈಫಲ್ಯ'ದಿಂದ ಹೆಚ್ಚಿನವರು ರಿಸ್ಕ್‌ ತೆಗೆದುಕೊಳ್ಳುವುದನ್ನು ಬಿಡುತ್ತಾರೆ.  ಆದರೆ ನೀವು ಪ್ರತಿ ಉಪಕ್ರಮವನ್ನು ಕಲಿಕೆಯ ಪ್ರಯೋಗವಾಗಿ ಹೊಂದಿಸಿದಾಗ (ಮತ್ತು ಸಹಜವಾಗಿ, ಹಾಗೆ ಮಾಡಲು ಸಂಪನ್ಮೂಲಗಳನ್ನು ಸಂಗ್ರಹಿಸಿದ್ದೀರಿ!) ನೀವು ಮೂಲಭೂತವಾಗಿ ಜ್ಞಾನ ಮತ್ತು ಪ್ರಗತಿಯ ಗಡಿಗಳನ್ನು ವಿಸ್ತರಿಸುತ್ತೀರಿ. ಸೆಲ್ಯೂಟ್!’’ ಎಂದು ಆನಂದ್‌ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. 

ಇದನ್ನೂ ಓದಿ: FIFA ವಿಶ್ವಕಪ್‌ ಸೋಲಿಗೆ ತಲೆಬಾಗಿದ ಜಪಾನ್ ಕೋಚ್: 2 ಪದಗಳಲ್ಲಿ ಆನಂದ್‌ ಮಹೀಂದ್ರಾ ಬಣ್ಣಿಸಿದ್ದು ಹೀಗೆ..

The most important contribution to business by will not be Tesla, or SpaceX but his powerful attitude to risk. Most would be terminally daunted by such a ‘failure.’ But when you set up each initiative as a learning experiment (and of course, have raised the resources… https://t.co/K81TLbOTMn

— anand mahindra (@anandmahindra)

 

ಇನ್ನು, ಗುರುವಾರದ ಪರೀಕ್ಷಾ ಹಾರಾಟದಿಂದ "ದೊಡ್ಡ ಪ್ರಮಾಣದಷ್ಟು ಪಾಠ ಕಲಿತಿದ್ದು ಭವಿಷ್ಯದ ಲಾಂಚ್‌ಗಳಲ್ಲಿ ಆ ಪಾಠಗಳನ್ನು ಅಳವಡಿಸಿಕೊಳ್ಳುವುದಾಗಿಯೂ ಸ್ಪೇಸ್‌ಎಕ್ಸ್ ಹೇಳಿದೆ. "ಸ್ಟಾರ್‌ಶಿಪ್‌ನ ಉತ್ತೇಜಕ ಪರೀಕ್ಷಾ ಉಡಾವಣೆಗೆ @SpaceX ತಂಡಕ್ಕೆ ಅಭಿನಂದನೆಗಳು! ಮುಂದಿನ ಪರೀಕ್ಷಾ ಉಡಾವಣೆಗೆ ಕೆಲವು ತಿಂಗಳುಗಳಲ್ಲಿ ಬಹಳಷ್ಟು ಕಲಿತಿದ್ದೇನೆ" ಎಂದು ಎಲಾನ್‌ ಮಸ್ಕ್ ಟ್ವೀಟ್ ಮಾಡಿದ್ದಾರೆ.

ಟೆಸ್ಲಾದ ಎಲೆಕ್ಟ್ರಿಕ್ ವಾಹನಗಳೊಂದಿಗೆ ಆಟೋಮೊಬೈಲ್ ಮಾರುಕಟ್ಟೆಯನ್ನು ಅಡ್ಡಿಪಡಿಸುವುದು ಮತ್ತು ಮರುಬಳಕೆ ಮಾಡಬಹುದಾದ ರಾಕೆಟ್‌ಗಳನ್ನು ತಯಾರಿಸುವುದು ಮುಂತಾದ ಅಸಾಧ್ಯವಾದ ಕಾರ್ಯಗಳನ್ನು ಮಾಡುವ ಅವರ ಸಾಮರ್ಥ್ಯಕ್ಕಾಗಿ ಎಲಾನ್‌ ಮಸ್ಕ್ ಅನ್ನು ವಾಣಿಜ್ಯೋದ್ಯಮಿ ಸಮುದಾಯವು ಆಳವಾಗಿ ಮೆಚ್ಚಿಕೊಳ್ಳುತ್ತಾರೆ. 

ಇದನ್ನೂ ಓದಿ: Anand Mahindra: ಭಾರತ ಆರ್ಥಿಕತೆಯಲ್ಲಿ ಬ್ರಿಟನ್‌ ಹಿಂದಿಕ್ಕಿದ್ದು ''ಕರ್ಮ ಸಿದ್ಧಾಂತದ ಫಲ'' ಎಂದ ಉದ್ಯಮಿ

click me!