Personal Finance: ಗೃಹ ಸಾಲವಿದ್ರೂ ಮನೆ ಮಾರಾಟ ಮಾಡೋದು ಹೇಗೆ?

By Suvarna News  |  First Published Apr 22, 2023, 1:59 PM IST

ಮನೆ ಕಟ್ಟೋದಿರಲಿ, ಖರೀದಿ ಮಾಡೋದಿರಲಿ ಮಧ್ಯಮ ವರ್ಗದ ಜನರಿಗೆ ಸಾಲ ಅನಿವಾರ್ಯ. ಸಾಲ ಪಡೆದ್ಮೇಲೆ ಅದನ್ನು ತೀರಿಸೋದು ಸುಲಭವಲ್ಲ. ಸಾಲ ಇಟ್ಟುಕೊಂಡು ಮನೆ ಮಾರಾಟ ಮಾಡುವ ಸಂದರ್ಭ ಬಂದ್ರೆ ಜನರು ಕಂಗಾಲಾಗ್ತಾರೆ. ಜನರು ಭಯಬೀಳೋ ಬದಲು ಈ ಟಿಪ್ಸ್ ಪಾಲಿಸಬೇಕು. 
 


ಮನೆ ಖರೀದಿ ಎಲ್ಲರ ಕನಸು. ಮಧ್ಯಮ ವರ್ಗದ ಜನರಿಗೆ ಮನೆ ಖರೀದಿ ಸುಲಭದ ಮಾತಲ್ಲ.  ಕಷ್ಟಪಟ್ಟು, ಕೂಡಿಟ್ಟ ಹಣವನ್ನೆಲ್ಲ ಹಾಕಿ, ಹೆಚ್ಚಿನ ಹಣವನ್ನು ಸಾಲದ ಮೂಲಕ ಒಗ್ಗೂಡಿಸಿ ಹೇಗೋ ಒಂದು ಫ್ಲಾಟ್ ಖರೀದಿ ಮಾಡಿರ್ತಾರೆ. ಆಸ್ತಿಯ ಮೇಲೆ ಸಾಲವನ್ನು ತೆಗೆದುಕೊಳ್ಳುವಾಗ, ಬ್ಯಾಂಕ್ ಮತ್ತು ಹಣಕಾಸು ಕಂಪನಿಯು ನಿಮ್ಮ ಮನೆಯನ್ನು ಗಿರವಿ ಇಡುತ್ತದೆ. ಸಾಲ ತೀರಿಸಿದ ನಂತ್ರ ಅದನ್ನು ರಿಲೀಸ್ ಮಾಡುತ್ತದೆ. ಕೆಲವರಿಗೆ ಸಾಲ ತೀರಿಸಲಾಗದೆ ಇಲ್ಲವೆ ಬೇರೆ ಯಾವುದೋ ಕಾರಣಕ್ಕೆ ಫ್ಲಾಟ್ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗುತ್ತದೆ. 

ಹೋಮ್ ಲೋನ್ (Home Loan) ಇದ್ದೂ ಫ್ಲಾಟ್ ಮಾರಾಟ ಮಾಡೋದು ಸಾಧ್ಯವಿಲ್ಲ. ಎಲ್ಲ ಸಾಲವನ್ನೂ ಮರುಪಾವತಿ ಮಾಡ್ಬೇಕು. ಆಸ್ತಿಯ ಎಲ್ಲ ಮೂಲ ದಾಖಲೆ ಬ್ಯಾಂಕ್ (Bank) ಬಳಿ ಇರುತ್ತದೆ.  ಹಾಗಾಗಿ ಬ್ಯಾಂಕ್ ಲೋನ್ ಇದ್ದು ಫ್ಲಾಟ್ (Flat) ಮಾರಾಟ ಮಾಡ್ತೀರಿ ಎಂದಾದ್ರೆ ಕೆಲವೊಂದು ವಿಷ್ಯವನ್ನು ನೆನಪಿಟ್ಟುಕೊಳ್ಳಬೇಕು. ನಾವಿಂದು ಹೋಮ್ ಲೋನ್ ಇದ್ದೂ ಫ್ಲಾಟ್ ಮಾರಾಟ ಮಾಡ್ತಿದ್ದರೆ ಏನೆಲ್ಲ ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

Tap to resize

Latest Videos

SBI ಡೆಬಿಟ್ ಕಾರ್ಡ್ ಕಳೆದು ಹೋಗಿದೆಯಾ? ನೆಟ್ ಬ್ಯಾಂಕಿಂಗ್‌ ಬಳಸಿ ಬ್ಲಾಕ್ ಮಾಡೋದು ಹೇಗೆ?

ಸಾಲ ನೀಡಿರುವ ಬ್ಯಾಂಕ್ ಸಂಪರ್ಕಿಸಿ : ನೀವು ಯಾವ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದೀರಿ ಆ ಬ್ಯಾಂಕ್ ಸಂಪರ್ಕಿಸುವುದು ನಿಮ್ಮ ಮೊದಲ ಕೆಲಸ. ನಿಮ್ಮ ಹೋಮ್ ಲೋನ್ ಇನ್ನು ಎಷ್ಟಿದೆ ಎಂಬುದನ್ನು ನೀವು ಮೊದಲು ತಿಳಿಯಬೇಕು. ಫ್ಲಾಟ್ ಮಾರಾಟ ಮಾಡುವ ಮೊದಲು ಸಾಲ ತೀರಿಸುವ ಅವಶ್ಯಕತೆ ಇರೋದ್ರಿಂದ ಇನ್ನೆಷ್ಟು ಹಣ ಪಾವತಿಸುವುದಿದೆ ಎಂಬ ಮಾಹಿತಿ ನಿಮಗಿರಬೇಕು.

ಕ್ರೆಡಿಟ್ ಸ್ಕೋರ್ ಪರಿಶೀಲನೆ ನಡೆಸಿ : ಫ್ಲಾಟ್ ಮಾರಾಟ ಮಾಡಲೂ ನಿಮ್ಮ ಕ್ರೆಡಿಟ್ ಸ್ಕೋರ್ ಅವಶ್ಯಕವಾಗಿರುತ್ತದೆ. ನೀವು ಬ್ಯಾಂಕ್ ನಿಂದ ಕ್ರೆಡಿಟ್ ಸ್ಕೋರ್ ತಿಳಿದುಕೊಳ್ಳಬೇಕು. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ನೀವು ಫ್ಲಾಟ್ ಮಾರಾಟ ಮಾಡೋದು ಸುಲಭವಾಗುತ್ತದೆ. ಅದೇ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ನೀವು ಅದನ್ನು ಸರಿಪಡಿಸಿಕೊಳ್ಳುವ ಅಗತ್ಯವಿರುತ್ತದೆ.

ಉತ್ತಮ ಕ್ರೆಡಿಟ್ ಸ್ಕೋರ್ ಸಾಲ ಪಡೆಯಲು ಮಾತ್ರವಲ್ಲ, ಉಳಿತಾಯಕ್ಕೂ ನೆರವು ನೀಡುತ್ತೆ; ಹೇಗೆ? ಇಲ್ಲಿದೆ ಮಾಹಿತಿ

ಸರಿಯಾದ ಫ್ಲಾಟ್ ರೇಟ್ ನಿರ್ಧರಿಸಿ : ಫ್ಲಾಟ್ ಮಾರಾಟಕ್ಕೆ ಹಾಕುವ ಮುನ್ನ ನೀವು ನಿಮ್ಮ ಫ್ಲಾಟ್ ಎಷ್ಟು ಬೆಲೆಬಾಳುತ್ತದೆ ಎಂಬುದನ್ನು ತಿಳಿಯಬೇಕು. ನೀವೊಬ್ಬರೇ ಇದನ್ನು ತಿಳಿಯಲು ಸಾಧ್ಯವಿಲ್ಲ. ಉತ್ತಮ ಬೆಲೆ ಬೇಕೆಂದ್ರೆ ನೀವು ರಿಯಲ್ ಎಸ್ಟೇಟ್ ಏಜೆಂಟ್ ಜೊತೆ ಮಾತುಕತೆ ನಡೆಸುವುದು ಒಳ್ಳೆಯದು. ಏಜೆಂಟ್ ಗಳಿಗೆ ನಿಮ್ಮ ಏರಿಯಾದಲ್ಲಿ ಎಷ್ಟು ಬೆಲೆ ನಡೆಯುತ್ತಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇರುತ್ತದೆ.  ಒಮ್ಮೆ ನೀವು ಫ್ಲಾಟ್ ಬೆಲೆಯನ್ನು ನಿಗದಿಪಡಿಸಿದ ನಂತ್ರ ಅದನ್ನು ಮಾರಾಟಕ್ಕೆ ಇಡಬೇಕಾಗುತ್ತದೆ. ಸಂಭಾವ್ಯ ಖರೀದಿದಾರರಿಗೆ ನೀವು ಫ್ಲಾಟ್ ಮೇಲೆ ಸಾಲವಿದೆ ಎಂಬುದನ್ನು ತಿಳಿಸಬೇಕಾಗುತ್ತದೆ.

ಖರೀದಿದಾರರ ಜೊತೆ ಮಾತುಕತೆ ಕೂಡ ಮುಖ್ಯ : ಯಾವ ವ್ಯಕ್ತಿ ನಿಮ್ಮ ಫ್ಲಾಟ್ ಖರೀದಿಗೆ ಮುಂದಾಗ್ತಾರೋ ಅವರ ಜೊತೆ ನೀವು ಮಾತುಕತೆ ನಡೆಸಬೇಕು. ನಿಮ್ಮ ಗೃಹ ಸಾಲ ಎಷ್ಟಿದೆ ಎಂಬುದನ್ನು ಹೇಳಬೇಕು. ಖರೀದಿದಾರ ನೀಡಿದ ಹಣದಲ್ಲಿ ನೀವು ಸಾಲವನ್ನು ತೀರಿಸಬಹುದು.

ಒಪ್ಪಂದ ಮಾಡಿಕೊಳ್ಳಿ : ಮಾರಾಟದ ಬಗ್ಗೆ ಮಾತುಕತೆ ಅಂತಿಮವಾದ ಮೇಲೆ ನೀವು ಒಪ್ಪಂದ ಮಾಡಿಕೊಳ್ಳಬೇಕು. ಫ್ಲಾಟ್‌ನ ಮಾಲೀಕತ್ವವನ್ನು ಖರೀದಿದಾರರಿಗೆ ವರ್ಗಾಯಿಸುವ ಮೊದಲು ನೀವು ಬಾಕಿ ಇರುವ ಸಾಲವನ್ನು ಪಾವತಿಸಬೇಕಾಗುತ್ತದೆ. ಸಾಲ ತೀರಿದ ಮೇಲೆ ಬ್ಯಾಂಕ್ ಆಸ್ತಿಯ ಎಲ್ಲಾ ಮೂಲ ದಾಖಲೆಗಳನ್ನು ಮನೆಯ ಮಾಲೀಕರಿಗೆ ನೀಡುತ್ತದೆ. ಬಾಕಿ ಇಲ್ಲದ ಪ್ರಮಾಣಪತ್ರ ಮತ್ತು ಮೂಲ ಆಸ್ತಿ ದಾಖಲೆಗಳನ್ನು ಪಡೆದ ನಂತರ, ನೀವು ಆಸ್ತಿ ಖರೀದಿದಾರರಿಗೆ ಮಾರಾಟ ಮಾಡಬಹುದು. 
 

click me!