ಮಂಗಳಸೂತ್ರ ಪ್ರಚಾರಕ್ಕೆ ಅರೆ ನಗ್ನ ಫೋಟೋ: ವಿನ್ಯಾಸಕಗೆ ಹಿಡಿಶಾಪ!

By Kannadaprabha NewsFirst Published Oct 29, 2021, 11:18 AM IST
Highlights

*ಸಬ್ಯಸಾಚಿ ಮುಖರ್ಜಿ ನೂತನ ಮಂಗಳಸೂತ್ರ ಜಾಹೀರಾತು!
*ಮಂಗಳಸೂತ್ರದ ಜಾಹೀರಾತೋ ಅಥವಾ ಒಳ ಉಡುಪಿನ ಜಾಹೀರಾತೋ ಎಂದು ನೆಟ್ಟಿಗರು
*ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ 

ನವದೆಹಲಿ(ಅ. 29 ) : ಖ್ಯಾತ ವಿನ್ಯಾಸಕಾರ ಸಬ್ಯಸಾಚಿ ಮುಖರ್ಜಿ (Sabyasachi Mukherjee) ವಿನ್ಯಾಸ ಮಾಡಿರುವ ನೂತನ ಮಂಗಳಸೂತ್ರ (Mangalasutra) ಜಾಹೀರಾತೊಂದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ನೂತನ ವಿನ್ಯಾಸದ ‘ರಾಯಲ್‌ ಬೆಂಗಾಲ್‌’ ಮಂಗಳಸೂತ್ರ ಜಾಹೀರಾತನ್ನು ಸಬ್ಯಸಾಚಿ ವಿನ್ಯಾಸ ಮಾಡಿದ್ದು, ಅದರಲ್ಲಿ ಮಹಿಳೆಯರನ್ನು ಅರೆನಗ್ನ ರೀತಿಯಲ್ಲಿ ತೋರಿಸಲಾಗಿದೆ. ಈ ಜಾಹೀರಾತಿನಲ್ಲಿ ಮಂಗಳಸೂತ್ರಕ್ಕಿಂತ ಮಹಿಳೆಯರ ಒಳವಸ್ತ್ರಗಳೇ ಹೆಚ್ಚು ಪ್ರದರ್ಶಿತವಾಗಿದೆ. ಹೀಗಾಗಿ ಜಾಲತಾಣಗಳಲ್ಲಿ ಇದು ಮಂಗಳಸೂತ್ರದ ಜಾಹೀರಾತೋ ಅಥವಾ ಒಳ ಉಡುಪಿನ ಜಾಹೀರಾತೋ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಲ್ಲದೆ ಇದು ಹಿಂದೂ ಧರ್ಮದ ಸಂಸ್ಕೃತಿ ಮೇಲಿನ ದಾಳಿಯಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಕಿಡಿಕಾರಲಾಗಿದೆ.

ಕೋಲಾಹಲಕ್ಕೆ ಕಾರಣವಾದ ಕರ್ವಾ ಚೌತ್ ಜಾಹೀರಾತು? ಸಲಿಂಗ ಸಂಬಂಧ!

ಸಬ್ಯಸಾಚಿಯವರ ಅಧಿಕೃತ ಇನ್ಸ್ಟಾಗ್ರಾಮ್ (Instagram) ಖಾತೆಯಿಂದ ಬ್ರ್ಯಾಂಡ್‌ನ ಹೊಸದಾಗಿ ವಿನ್ಯಾಸ ಮಾಡಿರುವ ಮಂಗಳಸೂತ್ರಗಳನ್ನು ಪ್ರದರ್ಶಿಸುವ ಮಾದರಿಗಳನ್ನು ಒಳಗೊಂಡ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಈ ಜಾಹೀರಾತಿನಲ್ಲಿ ಭಿನ್ನಲಿಂಗೀಯ ಮತ್ತು ಸಲಿಂಗ ದಂಪತಿಗಳು ರಾಯಲ್ ಬೆಂಗಾಲ್ ಮಂಗಳಸೂತ್ರವನ್ನು ಧರಿಸಿ ಚಿತ್ರಗಳಿಗೆ ಪೋಸ್ ನೀಡುತ್ತಿದ್ದಾರೆ. ಇದು ವಿನ್ಯಾಸಕರ  ಆಭರಣ ಸಂಗ್ರಹದ ಭಾಗವಾಗಿದೆ. ಈ ಫೋಟೋಗಳು ಒಳ ಉಡುಪುಗಳನ್ನು ಮಾತ್ರ ಧರಿಸಿರುವ ಮಾಡೆಲ್‌ಗಳು ಮಂಗಳಸೂತ್ರವನ್ನು ಧರಿಸಿ ಪೋಸ್ (Pose) ನೀಡಿರುವ ಚಿತ್ರಗಳನ್ನು ಸಹ ಒಳಗೊಂಡಿವೆ.

 

 

ಈ ಜಾಹೀರಾತು ಈಗ ಭಾರೀ ವಿವಾದ ಸೃಷ್ಟಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವೀಟರ್‌ ಮತ್ತು ಇನ್ಸ್ಟಾಗ್ರಾಮ್‌ ಗಳಲ್ಲಿ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು ವಿನ್ಯಾಸಕ ಸಬ್ಯಸಾಚಿ ಮುಖರ್ಜಿಯವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರಿತೀಯ ಉಡುಪುಗಳೊಂದಿಗೆ ನೀವು ಮಂಗಳಸೂತ್ರದ ಜಾಹೀರಾತು ನೀಡಿದರೆ ನಿಮ್ಮ ಆಭರಣಗಳನ್ನು ಯಾರೂ ಖರೀದಿಸುವುದಿಲ್ಲ ಎಂದು ಹಲವರು ಹೇಳಿದ್ದಾರೆ.

ಮಂಗಳಸೂತ್ರ ಮಹತ್ವ!

ಸನಾತನ ಸಂಸ್ಕೃತಿ ಮತ್ತು ಹಿಂದೂ ಸಂಪ್ರದಾಯದ ಸಂಸ್ಕಾರಗಳಲ್ಲಿ ವಿವಾಹವು ಒಂದು. ವಿವಾಹ ಸಮಯದಲ್ಲಿ ಪತಿ ಪತ್ನಿಯಾಗುವವಳಿಗೆ ಹಾಕುವ ಮಾಂಗಲ್ಯಕ್ಕೆ ವಿಶೇಷ ಮಹತ್ವವಿದೆ. ಮಾಂಗಲ್ಯವು ಸ್ತ್ರೀಗೆ ಸೌಭಾಗ್ಯ, ಮುತ್ತೈದೆಯ ಸಂಕೇತ. ಮಂಗಳಸೂತ್ರವನ್ನು ಶಿವ ಮತ್ತು ಶಕ್ತಿಯ ಐಕ್ಯತೆಯ ಪ್ರತೀಕವೆಂದು ಹೇಳುತ್ತಾರೆ.

ಮಾಂಗಲ್ಯಧಾರಣೆ ಮಹತ್ವ, ಪ್ರಯೋಜನಗಳು!

ಧಾರ್ಮಿಕ ನಂಬಿಕೆಯ ಪ್ರಕಾರ ಕರಿಮಣಿ ಅಥವಾ ಮಂಗಳಸೂತ್ರವನ್ನು ಧರಿಸುವುದರಿಂದ ಪತಿ-ಪತ್ನಿಯರಲ್ಲಿ ಅನ್ಯೋನ್ಯ ಬಾಂಧವ್ಯ ಏರ್ಪಡುತ್ತದೆ. ವಿವಾಹಿತೆ ಯಾವಾಗಲೂ ಮಾಂಗಲ್ಯ ಧರಿಸಿರುವುದರಿಂದ ಆಕೆಯ ಪತಿಯ ಆರೋಗ್ಯ, ಆಯುಷ್ಯ ಮತ್ತು ಸಂಸಾರದ ಏಳಿಗೆಗೆ ಉತ್ತಮ ಎಂಬುದು ಧಾರ್ಮಿಕ ನಂಬಿಕೆ.

ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್!

ಕರ್ವಾ ಚೌತ್‌  ಹಿನ್ನೆಲೆ ಡಾಬರ್‌ ಇಂಡಿಯಾ (Dabur India) ಬಿಡುಗಡೆ ಮಾಡಿದ್ದ ಜಾಹೀರಾತು (Advertisement) ಸಲಿಂಗ (same sex couple)  ಸಂಬಂಧಕ್ಕೆ ಪುಷ್ಠಿ ನೀಡುವಂತೆ ಇದೆ ಎಂಬ ಮಾತು ಕೇಳಿಬಂದಿತ್ತು. ಸೋಷಿಯಲ್‌ ಮಿಡೀಯಾದಲ್ಲಿ ಈ ಜಾಹೀರಾತು ಕೂಡ ಭಾರೀ ಸದ್ದು ಮಾಡಿತ್ತು.

ಎಚ್ಚರಿಕೆ ನಂತ್ರ ಕ್ಷಮೆ ಕೇಳಿ ಕರ್ವಾ ಚೌತ್ ಜಾಹೀರಾತು ಹಿಂಪಡೆದ ಡಾಬರ್! 

ಈ ಬೆನ್ನಲ್ಲೆ ಮಧ್ಯಪ್ರದೇಶದ ಸಚಿವರು ಸಂಸ್ಥೆ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ಕೂಡ ನೀಡಿದ್ದರು. ಈ ಜಾಹೀರಾತಿನ ವಿರುದ್ಧ ವಾಗ್ದಾಳಿ ನಡೆಸಿದ್ದ ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ, ಕೂಡಲೇ ಈ ಜಾಹೀರಾತನ್ನು ಡಾಬರ್‌ ಇಂಡಿಯಾ ಲಿಮಿಟೆಡ್‌ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ನಂತರ ಕ್ಷಮೆ ಕೇಳಿದ್ದ ಡಾಬರ್‌ ಇಂಡಿಯಾ ಲಿಮಿಟೆಡ್‌ ಸಲಿಂಗಿ ಜೋಡಿಯು ಕರ್ವಾ ಚೌತ್ ನಡೆಸುವ ವಿಡಿಯೋವನ್ನು ಹಿಂದಕ್ಕೆ ಪಡೆದಿತ್ತು. ಉದ್ದೇಶಪೂರ್ವಕವಲ್ಲದೇ ಜನರ ಭಾವನೆಗಳಿಗೆ ನೋವುಂಟು ಮಾಡಿದ ಕಾರಣಕ್ಕೆ ನಾವು ಕ್ಷಮೆಯಾಚಿಸುತ್ತೇವೆ ಎಂದು ಸಂಸ್ಥೆ ತಿಳಿಸಿತ್ತು.

click me!