ಜಿಡಿಪಿ ವರದಿ ಮುನ್ನವೇ ರೂಪಾಯಿ ಕುಸಿತ: ಎಲ್ಲಿ ತಪ್ಪಿತು ಮೋದಿ ಕಾಗುಣಿತ?

By Web Desk  |  First Published Nov 29, 2019, 3:10 PM IST

ಮೋದಿ ಸರ್ಕಾರವನ್ನು ಕಾಡುತ್ತಿರುವ ಆರ್ಥಿಕ ಕುಸಿತದ ಭೀತಿ| ಮೋದಿ ಸರ್ಕಾರದ ಕದ ತಟ್ಟಿದ ಕಹಿ ಸುದ್ದಿ| ಜಿಡಿಪಿ ವರದಿ ಬಿಡುಗಡೆಗೂ ಮುನ್ನವೇ ರೂಪಾಯಿ ಮೌಲ್ಯ ಕುಸಿತ| ಡಾಲರ್ ಎದುರು 11 ಪೈಸೆ ಕುಸಿತ ಕಂಡ ರೂಪಾಯಿ ಮೌಲ್ಯ| 71.73 ರೂ. ಆಸುಪಾಸು ವ್ಯವಾಹಾರ ನಡೆಸಿದ ಭಾರತೀಯ ರೂಪಾಯಿ ಮೌಲ್ಯ|


ಮುಂಬೈ(ನ.29): ಆರ್ಥಿಕ ಕುಸಿತದ ಭೂತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಾಡುತ್ತಲೇ ಇದೆ. ಆರ್ಥಿಕ ಹಿನ್ನಡೆಯಾಗಿರುವುದು ನಿಜ ಎಂದು ಖುದ್ದು ಕೇಂದ್ರ ಹಣಕಾಸು ಸಚಿವೆ ಒಪ್ಪಿಕೊಂಡಿರುವುದು ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸಿದೆ.

ಈ ಮಧ್ಯೆ ಮತ್ತೊಂದು ಕಹಿ ಸುದ್ದಿ ಮೋದಿ ಸರ್ಕಾರದ ಕದ ತಟ್ಟಿದ್ದು, ಎರಡನೆ ತ್ರೈಮಾಸಿಕ ಜಿಡಿಪಿ ವರದಿ ಪ್ರಕಟವಾಗುವ ಮುನ್ನವೇ ರೂಪಾಯಿ ಮೌಲ್ಯ ದಿಢೀರ್ ಕುಸಿತ ಕಂಡಿದೆ.

Tap to resize

Latest Videos

undefined

ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!

ಇಂದಿನ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು 11 ಪೈಸೆ ಕುಸಿತ ಕಂಡಿದ್ದು, 71.73 ರೂ. ಆಸುಪಾಸು ವ್ಯವಾಹಾರ ನಡೆಸಿದೆ. ಇಂಟರ್ ಬ್ಯಾಂಕ್ ಫಾರಿನ್​ ಎಕ್ಸ್​ಚೇಂಜ್​ನಲ್ಲಿ ಬೆಳಗ್ಗೆ ಅಮೆರಿಕನ್ ಡಾಲರ್​ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿತು.

ಹೂಡಿಕೆದಾರರು ಅಮೆರಿಕ-ಚೀನಾ ವಾಣಿಜ್ಯ ವಹಿವಾಟಿನಲ್ಲಿ ಸ್ಪಷ್ಟತೆಯನ್ನು ಹುಡುಕುತ್ತಿದ್ದು, ನಿಧಾನಗತಿಯ ಹೂಡಿಕೆಯ ಮೊರೆ ಹೋಗಿದ್ದಾರೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಆರ್ಥಿಕ ಪುನಶ್ಚೇತನ ಒಂದು ಊಹೆ: ಆ್ಯಕ್ಟೀವ್ ಆಯ್ತು ಆರ್‌ಬಿಐ ಗವರ್ನರ್ ಗುಹೆ!

ಇನ್ನು ಕಚ್ಚಾ ತೈಲ ಬೆಲೆ ಕೂಡ ಶೇ.0.41ರಷ್ಟು ಕುಸಿದಿದ್ದು, ಬ್ಯಾರೆಲ್ ಕಚ್ಚಾ ತೈಲ ದರ 63.61 ಡಾಲರ್ ಆಗಿದೆ.

click me!