41,020 ಅಂಕಗಳಲ್ಲಿ ಮುಕ್ತಾಯ: ಸೆನ್ಸೆಕ್ಸ್‌ ಹೊಸ ದಾಖಲೆ ನಿರ್ಮಾಣ

By Web DeskFirst Published Nov 28, 2019, 8:06 AM IST
Highlights

ಮೊದಲ ಬಾರಿ 41000 ಅಂಕಗಳ ಗಡಿ ದಾಟಿ ದಾಖಲೆ ನಿರ್ಮಿಸಿದ್ದ ಬಾಂಬೆ ಷೇರುಪೇಟೆ| ಬುಧವಾರ ಮತ್ತೊಂದು ದಾಖಲೆ|

ಮುಂಬೈ[ನ.28]: ಮಂಗಳವಾರ ಮೊದಲ ಬಾರಿ 41000 ಅಂಕಗಳ ಗಡಿ ದಾಟಿ ದಾಖಲೆ ನಿರ್ಮಿಸಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ ಮತ್ತೆ 199 ಅಂಕ ಏರಿಕೆ ಕಂಡು 41,020ಕ್ಕೆ ತನ್ನ ದಿನದ ವಹಿವಾಟು ಮುಗಿಸಿದೆ.

ಸೆನ್ಸೆಕ್ಸ್‌ 41000 ಅಂಕಗಳ ಮೇಲೇ ಮುಕ್ತಾಯವಾಗಿದ್ದು ಹೊಸ ದಾಖಲೆಯಾಗಿದೆ. ಇನ್ನು ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಕೂಡ 63 ಅಂಕ ಏರಿಕೆ ಕಂಡು 12,100ರ ದಾಖಲೆಯ ಅಂಕಗಳಿಗೆ ದಿನ ಮುಗಿಸಿತು.

ಭಾರತದಲ್ಲಿ ಆರ್ಥಿಕ ಕುಸಿತ ಇಲ್ಲ, ಹಿಂಜರಿಕೆ ಅಷ್ಟೇ: ನಿರ್ಮಲಾ ಸೀತಾರಾಮನ್

ಚೀನಾ ಹಾಗೂ ಅಮೆರಿಕದ ನಡುವೆ ಹೊಸ ವ್ಯಾಪಾರ ವಹಿವಾಟು ನಡೆಯುವ ಸಾಧ್ಯತೆ ಇದ್ದು, ಇದರಿಂದ ಜಾಗತಿಕ ಮಾರುಕಟ್ಟೆತೇಜಿಯಾಗಿತ್ತು. ಹೀಗಾಗಿ ಬ್ಯಾಂಕಿಂಗ್‌, ತೈಲ, ಅನಿಲ ಹಾಗೂ ಆಟೋಮೊಬೈಲ್‌ ಷೇರುಗಳ ಭಾರೀ ಪ್ರಮಾಣದ ಖರೀದಿ ನಡೆದ ಕಾರಣ ಷೇರುಪೇಟೆ ಏರಿತು.

ಬ್ಯಾಂಕ್‌ ಬಡ್ಡಿದರವನ್ನು ಆರ್‌ಬಿಐ ಮತ್ತೆ ಇಳಿಸುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯಿಂದಾಗಿ ಬ್ಯಾಂಕ್‌ ಷೇರುಗಳ ದರ ಕೂಡ ಏರಿತು.

click me!