152 ಪೈಸೆಯಷ್ಟು ಜಿಗಿದ ₹: 12 ವರ್ಷದಲ್ಲೇ ಅಧಿಕ

Sujatha NR   | Kannada Prabha
Published : Apr 03, 2026, 06:03 AM IST
indian rupee

ಸಾರಾಂಶ

ಡಾಲರ್‌ ಎದುರು ಸಾರ್ವಕಾಲಿಕ ಪಾತಾಳಕ್ಕೆ ಕುಸಿದಿದ್ದ ರುಪಾಯಿ ಮೌಲ್ಯ, ಗುರುವಾರ ಒಂದೇ ದಿನ 152 ಪೈಸೆ ಏರಿಕೆ ಕಂಡು 93.18 ರು.ನಲ್ಲಿ ಮುಕ್ತಾಯವಾಗಿದೆ. ರುಪಾಯಿ ಮೌಲ್ಯ ಒಂದೇ ದಿನದಲ್ಲಿ ಇಷ್ಟು ಚೇತರಿಕೆ ಕಂಡಿದ್ದು 12 ವರ್ಷಗಳಲ್ಲೇ ಇದೇ ಮೊದಲು.

ಮುಂಬೈ: ಡಾಲರ್‌ ಎದುರು ಸಾರ್ವಕಾಲಿಕ ಪಾತಾಳಕ್ಕೆ ಕುಸಿದಿದ್ದ ರುಪಾಯಿ ಮೌಲ್ಯ, ಗುರುವಾರ ಒಂದೇ ದಿನ 152 ಪೈಸೆ ಏರಿಕೆ ಕಂಡು 93.18 ರು.ನಲ್ಲಿ ಮುಕ್ತಾಯವಾಗಿದೆ. ರುಪಾಯಿ ಮೌಲ್ಯ ಒಂದೇ ದಿನದಲ್ಲಿ ಇಷ್ಟು ಚೇತರಿಕೆ ಕಂಡಿದ್ದು 12 ವರ್ಷಗಳಲ್ಲೇ ಇದೇ ಮೊದಲು.

ಹಲವು ನಿರ್ಬಂಧಗಳ ಹಿನ್ನೆಲೆ

ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನಿಂದ ಕರೆನ್ಸಿ ಮಾರುಕಟ್ಟೆಯಲ್ಲಿ ರುಪಾಯಿ ಟ್ರೇಡಿಂಗ್‌ಗೆ ಸಂಬಂಧಿಸಿ ಬ್ಯಾಂಕುಗಳ ಮೇಲೆ ಹೇರಿದ ಹಲವು ನಿರ್ಬಂಧಗಳ ಹಿನ್ನೆಲೆಯಲ್ಲಿ ದೇಶೀಯ ಕರೆನ್ಸಿಯ ಬಲವರ್ಧನೆಯಾಗಿದೆ ಎಂದು ಹೇಳಲಾಗಿದೆ.

94.62 ರು.ನಲ್ಲಿ ವ್ಯವಹಾರ

ಅಂತರ್‌ ಬ್ಯಾಂಕ್‌ ವಿದೇಶಿ ವಿನಿಮಯದಲ್ಲಿ ಗುರುವಾರ ರುಪಾಯಿಯು ಡಾಲರ್‌ ಎದುರು 94.62 ರು.ನಲ್ಲಿ ವ್ಯವಹಾರ ಆರಂಭಿಸಿ, ಬಳಿಕ 188 ಪೈಸೆ ಏರಿಕೆ ಕಂಡು ರುಪಾಯಿ ಮೌಲ್ಯ 92.82ಕ್ಕೇರಿತು. ಕೊನೆಗೆ ದಿನದ ಅಂತ್ಯಕ್ಕೆ 93.18 ಪೈಸೆಗಳಲ್ಲಿ ವ್ಯವಹಾರ ಮುಕ್ತಾಯಗೊಳಿಸಿತು. ಈ ಮೂಲಕ ಡಾಲರ್‌ ಎದುರು ರುಪಾಯಿ ಮೌಲ್ಯ ಒಂದೇ ದಿನ ಶೇ.1.6ರಷ್ಟು ಏರಿಕೆ ದಾಖಲಿಸಿತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಚಿನ್ನದ ಬೆಲೆ ₹ 3980, ಬೆಳ್ಳಿ ₹ 5,000 ಕುಸಿತ
ಟಿಕೆಟ್​ ರದ್ದತಿ ಸೇರಿ ರೈಲ್ವೆ ಪ್ರಯಾಣದಲ್ಲಿ ಇಂದಿನಿಂದಲೇ ಭಾರಿ ಬದಲಾವಣೆ- ಫುಲ್​ ಡಿಟೇಲ್ಸ್​ ಇಲ್ಲಿದೆ