
ನವದೆಹಲಿ: ಏರಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರವು ಗುರುವಾರ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಬುಧವಾರ 1,52,950 ಇದ್ದ 24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 3980 ರು. ಕಡಿಮೆಯಾಗಿ 1,48,970ಕ್ಕೆ ಕುಸಿದಿದೆ.
ಇದೇ ಪ್ರಮಾಣದ 22 ಕ್ಯಾರಟ್ ಹೊನ್ನು ಕೂಡ 3650 ರು. ಇಳಿಕೆಯೊಂದಿಗೆ 1,36,550 ರು. ಆಗಿದೆ. ಅತ್ತ 1 ಕೆ.ಜಿ. ಬೆಳ್ಳಿಯ ಬೆಲೆಯಲ್ಲಿ 5,000 ರು. ಇಳಿಕೆಯಾಗಿ 2,50,000 ರು. ಆಗಿದೆ.
ದೆಹಲಿಯಲ್ಲೂ ಇದೇ ಟ್ರೆಂಡ್ ಕಂಡುಬಂದಿದ್ದು, ರಜತದ ದರ 9,000 ರು. ಕುಸಿತದೊಂದಿಗೆ 2.37 ಲಕ್ಷ ರು. ಆಗಿದೆ. ಚಿನ್ನದ ಬೆಲೆಯಲ್ಲಿ 3,500 ರು. ತಗ್ಗಿ 10 ಗ್ರಾಂಗೆ 1.51 ಲಕ್ಷ ರು.ನಲ್ಲಿ ನಿಂತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.