ಜನವರಿಯಲ್ಲಿ ಈ ನಿಯಮಗಳಲ್ಲಿ ಬದಲಾವಣೆ; ಗ್ರಾಹಕರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ

By Suvarna News  |  First Published Dec 24, 2022, 4:04 PM IST

ಹೊಸ ವರ್ಷದಲ್ಲಿ ಕೆಲವೊಂದು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹಾಗೆಯೇ ಕೆಲವು ಹೊಸ ನಿಯಮಗಳು ಕೂಡ ಜಾರಿಗೆ ಬರಲಿವೆ. ಹಾಗಾದ್ರೆ ಜನವರಿ 1ರಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ? ಇಲ್ಲಿದೆ ಮಾಹಿತಿ. 
 


ನವದೆಹಲಿ (ಡಿ.24): ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷದ ಜೊತೆಗೆ ಹೊಸ ತಿಂಗಳಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗೋದು, ಇನ್ನು ಕೆಲವು ಹೊಸ ನಿಯಮಗಳು ಜಾರಿಯಾಗೋದು ಸಾಮಾನ್ಯ. ಅದರಂತೆ ಜನವರಿಯಲ್ಲಿ ಕೂಡ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಕೆಲವು ನಿಯಮಗಳಲ್ಲಿನ ಬದಲಾವಣೆ ಅಥವಾ ಹೊಸ ನಿಯಮ ಜಾರಿ ಜನಸಾಮಾನ್ಯರ ನಿತ್ಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಬ್ಯಾಂಕ್, ತೆರಿಗೆ, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಸೇರಿದಂತೆ ನಿತ್ಯ ಬದುಕಿಗೆ ಅಗತ್ಯವಾಗಿರುವ  ವಸ್ತು ಅಥವಾ ವಿಷಯಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾದಾಗ ಅದು ಜನಸಾಮಾನ್ಯರ ತಿಂಗಳ ಖರ್ಚಿನ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ನಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಬದಲಾವಣೆಗಳ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದರೆ, ಆ ತಿಂಗಳ ಹೆಚ್ಚುವರಿ ವೆಚ್ಚವನ್ನು ಸರಿದೂಗಿಸಲು ಮೊದಲೇ ಸೂಕ್ತ ಯೋಜನೆ ರೂಪಿಸಬಹುದು.  ಜನವರಿಯಲ್ಲಿ ಕಾರು, ಸ್ಮಾರ್ಟ್ ಫೋನ್ , ಬ್ಯಾಂಕ್ ಲಾಕರ್, ಗೃಹಸಾಲ, ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಹಾಗಾದ್ರೆ 2023ರ ಜನವರಿ 1ರಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ? ಇಲ್ಲಿದೆ ಮಾಹಿತಿ. 

1.ಬ್ಯಾಂಕ್ ಲಾಕರ್ ನಿಯಮ
2023ರ ಜನವರಿ 1ರಿಂದ ಬ್ಯಾಂಕ್ ಲಾಕರ್ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ.  2023 ಜನವರಿ 1ರಿಂದ ಬ್ಯಾಂಕ್ ಗಳು  ಹೊಸ ಲಾಕರ್ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಹಾಗೂ  ಗ್ರಾಹಕರಿಗೆ ಲಾಕರ್ ಒಪ್ಪಂದಗಳನ್ನು ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನಿರ್ದೇಶನ ನೀಡಿದೆ.  ಲಾಕರ್ ಹೊಂದಿರುವ ಎಲ್ಲ ಗ್ರಾಹಕರು ಲಾಕರ್ ಒಪ್ಪಂದದ ನವೀಕರಣ ಪತ್ರಕ್ಕೆ ಸಹಿ ಹಾಕುವ ಜೊತೆಗೆ ಅರ್ಹತ ದಾಖಲೆಗಳನ್ನು 2023ರ ಜನವರಿ 1ರೊಳಗೆ ನೀಡಬೇಕು ಎಂದು ಆರ್ ಬಿಐ ಸೂಚಿಸಿದೆ. ಒಂದು ವೇಳೆ  ಬ್ಯಾಂಕ್‌ ಲಾಕರ್‌ ನಲ್ಲಿರುವ ವಸ್ತು ಕಳೆದು ಹೋದ್ರೆ ಬ್ಯಾಂಕ್ ಲಾಕರ್ ಬಾಡಿಗೆಯ 100 ಪಟ್ಟು ಮೊತ್ತದ ಹಣವನ್ನು ಪರಿಹಾರವಾಗಿ ನೀಡುವುದು ಸೇರಿದಂತೆ ಅನೇಕ ಸುರಕ್ಷಿತ ಕ್ರಮಗಳನ್ನು ಈ ನಿಯಮ ಒಳಗೊಂಡಿದೆ.

Tap to resize

Latest Videos

ಈಗ ಖರೀದಿಸಿ, ನಂತರ ಪಾವತಿಸಿ, ಏನಿದು BNPL?ಇ-ಕಾಮರ್ಸ್ ತಾಣಗಳಲ್ಲಿ ಇದರ ಬಳಕೆ ಹೇಗೆ?

2.ಕ್ರೆಡಿಟ್ ಕಾರ್ಡ್ ನಿಯಮ ಬದಲು
ನೀವು ಬಿಲ್ ಪಾವತಿ ಹಾಗೂ ಶಾಪಿಂಗ್ ಗೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ರೆ ಜನವರಿಯಿಂದ ಇದಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಬದಲಾಗಲಿವೆ. ಮಾಧ್ಯಮ ವರದಿಗಳ ಪ್ರಕಾರ ಕ್ರೆಡಿಟ್ ಕಾರ್ಡ್ ಪಾವತಿಗಳ ಮೇಲೆ ಗಳಿಸಿದ ರಿವಾರ್ಡ್ ಪಾಯಿಂಟ್ ಗಳನ್ನು ಕೆಲವು ಬ್ಯಾಂಕ್ ಗಳು ಬದಲಾಯಿಸುವ ನಿರೀಕ್ಷೆಯಿದೆ. ಎಸ್ ಬಿಐ ಕೂಡ ರಿವಾರ್ಡ್ ಪಾಯಿಂಟ್ ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲಿದೆ ಎಂದು ಹೇಳಲಾಗಿದೆ. ಹೀಗಾಗಿ ನೀವು ಕೂಡ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ಸ್ ಹೊಂದಿದ್ರೆ ಡಿಸೆಂಬರ್ 31ರೊಳಗೆ ರಿಡೀಮ್ ಮಾಡೋದು ಉತ್ತಮ.

3.ಜಿಎಸ್ ಟಿ ಇನ್ ವಾಯ್ಸ್ ಬದಲಾವಣೆ
ಜಿಎಸ್ ಟಿ ಇ-ಇನ್ ವಾಯ್ಸ್ ಅಥವಾ ಎಲೆಕ್ಟ್ರಾನಿಕ್ ಬಿಲ್ ಗೆ ಸಂಬಂಧಿಸಿ ಜನವರಿ 1ರಿಂದ ಕೆಲವು ಬದಲಾವಣೆಗಳಾಗುವ ಸಾಧ್ಯತೆಯಿದೆ. ಇ-ಇನ್ ವಾಯ್ಸ್ ಸೃಷ್ಟಿಸುವ ಮಿತಿ 20 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಇಳಿಕೆಯಾಗಿದೆ. ಹೀಗಾಗಿ ಐದಕ್ಕಿಂತ ಹೆಚ್ಚಿನ ಉದ್ಯಮ ಹೊಂದಿರೋರು ಜಿಎಸ್ ಟಿ ಪೋರ್ಟಲ್ ನಿಂದ ಇ-ಬಿಲ್ ಗಳನ್ನು ಸೃಷ್ಟಿಸಬೇಕು.

ಜನವರಿಯಲ್ಲಿ ಎಷ್ಟು ದಿನ ಬ್ಯಾಂಕಿಗೆ ರಜೆ? ಇಲ್ಲಿದೆ ಮಾಹಿತಿ

4.ಕಾರು ಬೆಲೆ
ಸಾಮಾನ್ಯವಾಗಿ ಹೊಸ ವರ್ಷದ ಪ್ರಾರಂಭದಲ್ಲಿ ಕಾರು ಕಂಪನಿಗಳು ಬೆಲೆ ಹೆಚ್ಚಳ ಮಾಡುತ್ತವೆ. ಅದರಂತೆ 2023ರ ಜನವರಿಯಲ್ಲಿ ಕೂಡ ಕಾರಿನ ಬೆಲೆಗಳು ಹೆಚ್ಚಾಗಲಿವೆ. ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟಾರ್ಸ್, ಆಡಿ, ಮರ್ಸಿಡಿಸ್ ಬೆಂಜ್, ಹೋಂಡಾ ಮತ್ತು ಮಹೀಂದ್ರಾ ಕಂಪನಿಗಳು ತಮ್ಮ ಬ್ರ್ಯಾಂಡ್ ಕಾರುಗಳ ಬೆಲೆ ಹೆಚ್ಚಳ ಮಾಡೋದಾಗಿ ಈಗಾಗಲೇ ಘೋಷಿಸಿವೆ.  

5.ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ
ಪ್ರತಿ ತಿಂಗಳ 1ನೇ ದಿನಾಂಕದಂದು ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಿಸಲಾಗುತ್ತದೆ. ಕೆಲವೊಮ್ಮೆ ಬೆಲೆ ಹೆಚ್ಚಳ ಅಥವಾ ಇಳಿಕೆಯಾದ್ರೆ, ಇನ್ನೂ ಕೆಲವೊಮ್ಮೆ ಬೆಲೆ ಸ್ಥಿರವಾಗಿರುತ್ತದೆ. ಹೀಗಾಗಿ ಹೊಸ ವರ್ಷದ ಮೊದಲ ದಿನ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳವಾಗುತ್ತ ಅಥವಾ ಇಳಿಕೆಯಾಗುತ್ತ ಎಂಬುದನ್ನು ಕಾದು ನೋಡಬೇಕಿದೆ. 

click me!