ಈಗ ಖರೀದಿಸಿ, ನಂತರ ಪಾವತಿಸಿ, ಏನಿದು BNPL?ಇ-ಕಾಮರ್ಸ್ ತಾಣಗಳಲ್ಲಿ ಇದರ ಬಳಕೆ ಹೇಗೆ?

By Suvarna News  |  First Published Dec 24, 2022, 2:17 PM IST

ಇ-ಕಾಮರ್ಸ್ ತಾಣಗಳಲ್ಲಿ ನೀವು ಶಾಪಿಂಗ್ ನಡೆಸೋರಾದ್ರೆ ನಿಮಗೆ ಬಿಎನ್ ಪಿಎಲ್ ಬಗ್ಗೆ ತಿಳಿದಿರುವ ಸಾಧ್ಯತೆ ಇದೆ. ಏನಿದು ಬಿಎನ್ ಪಿಎಲ್? ಹಣವಿಲ್ಲದಿದ್ರೂ ಖರೀದಿಗೆ ಅವಕಾಶ ನೀಡುವ ಇದನ್ನು ಯಾರು ಬಳಸಬಹುದು? ಇಲ್ಲಿದೆ ಮಾಹಿತಿ. 
 


Business Desk:ಇಂದು ಮನೆಯಲ್ಲೇ ಕುಳಿತು ಶಾಪಿಂಗ್ ಮಾಡುವ ಟ್ರೆಂಡ್ ಹೆಚ್ಚಿದೆ. ಇದಕ್ಕೆ ಕಾರಣ ಇ-ಕಾಮರ್ಸ್ ತಾಣಗಳು. ಹೌದು, ಕೋವಿಡ್ ನಮ್ಮ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ಶಾಪಿಂಗ್ ವಿಧಾನ ಕೂಡ ಈ ಬದಲಾವಣೆಗಳಲ್ಲಿ ಒಂದು. ಆನ್ ಲೈನ್ ಶಾಪಿಂಗ್ ಹೆಚ್ಚು ಜನಪ್ರಿಯತೆ ಗಳಿಸಿದ್ದು ಕೊರೋನಾ ಸಮಯದಲ್ಲೇ. ಆ ಬಳಿಕ ಕೂಡ ಜನ ಅದನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ ಕೂಡ. ಇ-ಕಾಮರ್ಸ್ ತಾಣಗಳು ಗ್ರಾಹಕರನ್ನು ಸೆಳೆಯಲು ಅನೇಕ ಆಫರ್, ಡಿಸ್ಕೌಂಟ್ ಗಳನ್ನು ಆಗಾಗ ಘೋಷಿಸುತ್ತಲೇ ಇರುತ್ತವೆ. ಇಂಥ ಮಾರುಕಟ್ಟೆ ತಂತ್ರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರೋದು 'ಈಗ ಖರೀದಿಸಿ, ನಂತರ ಪಾವತಿಸಿ' ಅಥವಾ ಬಿಎನ್ ಪಿಲ್. ಈ ವಿಧಾನದಲ್ಲಿ ಗ್ರಾಹಕರಿಗೆ ಇ-ಕಾಮರ್ಸ್ ತಾಣಗಳು ವಸ್ತುಗಳ ಖರೀದಿಗೆ ಬಡ್ಡಿರಹಿತ ಕಿರು ಅವಧಿಯ ಸಾಲಗಳನ್ನು ಒದಗಿಸುತ್ತಿವೆ. ಹೀಗಾಗಿ ಈ ಸಾಲ ಬಳಸಿಕೊಂಡು ಗ್ರಾಹಕರು ವಸ್ತುಗಳನ್ನು ಖರೀದಿಸಿ, ಆ ಬಳಿಕ ಬಡ್ಡಿರಹಿತ ಇಎಂಐಗಳ ಮೂಲಕ ಪಾವತಿ ಮಾಡಬಹುದು. ಬಿಎನ್ ಪಿಎಲ್ ಪ್ಲ್ಯಾನ್ ಗಳು ಕ್ರೆಡಿಟ್ ಕಾರ್ಡ್ ಅಥವಾ ಇತರ ಕ್ರೆಡಿಟ್ ವಿಧಾನಗಳಿಗಿಂತ ಹೆಚ್ಚು ಪ್ರಯೋಜನಕಾರಿ. ಏಕೆಂದ್ರೆ ಇದಕ್ಕೆ ಯಾವುದೇ ಬಡ್ಡಿ ಪಾವತಿಸಬೇಕಾಗಿಲ್ಲ.

ಭಾರತದ ಪ್ರಮುಖ ಬಿಎನ್ ಪಿಎಲ್ ಬ್ರ್ಯಾಂಡ್ ಗಳು ಇವೇ ನೋಡಿ
ಲೇಜಿ ಪೇ, ಸಿಂಪ್ಲ, ಅಮೆಜಾನ್ ಪೇ ಲೇಟರ್, ಫ್ಲಿಪ್ ಕಾರ್ಟ್ ಪೇ ಲೇಟರ್ ಹಾಗೂ ಝೆಸ್ಟ್ ಮನಿ ಭಾರತದ ಪ್ರಮುಖ ಬಿಎನ್ ಪಿಎಲ್ ಬ್ರ್ಯಾಂಡ್ ಗಳಾಗಿವೆ. ಈ ಎಲ್ಲ ಬ್ರ್ಯಾಂಡ್ ಗಳು ಸಾಮಾನ್ಯವಾಗಿ ಒಂದೇ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ. ನಿರ್ದಿಷ್ಟ ಇ-ಕಾಮರ್ಸ್ ತಾಣದಿಂದ ಖರೀದಿಸುವಾಗ ಗ್ರಾಹಕ 'buy now, pay later' ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಒಂದು ಬಾರಿ ಅವರು 'ಬಿಎನ್ ಪಿಎಲ್' ಆಯ್ಕೆ ಆರಿಸಿಕೊಂಡ ಬಳಿಕ ಒಟ್ಟು ಮೊತ್ತದಲ್ಲಿ ಸಣ್ಣ ಮೊತ್ತವನ್ನು ಡೌನ್ ಪೇಮೆಂಟ್ ಮಾಡಬೇಕು. ಉಳಿದ ಮೊತ್ತವನ್ನು ಬಡ್ಡಿರಹಿತ ಇಎಂಐ ಮೂಲಕ ನಿರ್ದಿಷ್ಟ ಅವಧಿಯೊಳಗೆ ಪಾವತಿಸಬೇಕು. ವಿವಿಧ ಬ್ರ್ಯಾಂಡ್ ಗಳು ಸಾಲ ಮರುಪಾವತಿಗೆ ಸಂಬಂಧಿಸಿ ಭಿನ್ನ ನಿಯಮಗಳು ಹಾಗೂ ಷರತ್ತುಗಳನ್ನು ವಿಧಿಸುತ್ತವೆ.

Tap to resize

Latest Videos

ಜನವರಿಯಲ್ಲಿ ಎಷ್ಟು ದಿನ ಬ್ಯಾಂಕಿಗೆ ರಜೆ? ಇಲ್ಲಿದೆ ಮಾಹಿತಿ

ಬಿಎನ್ ಪಿಎಲ್ ಸಾಲಗಳಿಗೆ ಯಾರು ಅರ್ಹರು?
ಭಾರತದಲ್ಲಿ ಬಿಎನ್ ಪಿಎಲ್ (BNPL) ಸಾಲ ಪಡೆಯಲು ನೀವು ಕೆಲವು ಅರ್ಹತೆಗಳನ್ನು ಹೊಂದಿರೋದು ಅಗತ್ಯ. ಬಿಎನ್ ಪಿಎಲ್ (BNPL) ಸಾಲ ಪಡೆಯುವ ವ್ಯಕ್ತಿ ಭಾರತದ ಟೈರ್ 1 (Tier -1) ಅಥವಾ ಟೈರ್ 2 (Tier-2) ನಗರದ ನಿವಾಸಿಯಾಗಿರಬೇಕು. ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆತ ವೇತನ (Salary) ಪಡೆಯುವ ವ್ಯಕ್ತಿಯಾಗಿರಬೇಕು. ಇದರೊಂದಿಗೆ ಅವರು ಬ್ಯಾಂಕ್ ಖಾತೆ (Bank account) ಹಾಗೂ ಇತರ ಕೆವೈಸಿ (KYC) ದಾಖಲೆಗಳನ್ನು ಹೊಂದಿರಬೇಕು.

ಹೊಸ ವರ್ಷದಲ್ಲಿ ಸಾಲಮುಕ್ತರಾಗಲು ಬಯಸಿದ್ದೀರಾ? ಹಾಗಾದ್ರೆ ಈ 5 ಟಿಪ್ಸ್ ಪಾಲಿಸಿ

ಬಿಎನ್ ಪಿಎಲ್ ಸಾಲ (BNPL Loan) ಪಡೆಯುವ ಪ್ರಕ್ರಿಯೆ ತುಂಬಾ ಸರಳ ಹಾಗೂ ಪಾರದರ್ಶಕವಾಗಿದೆ. ಹಾಗೆಯೇ ನೋ ಕಾಸ್ಟ್ ಇಎಂಐ (NO cost EMI) ಸೌಲಭ್ಯ ಕೂಡ ಸಿಗಲಿದೆ. ಆದರೆ, ಈ ಸೌಲಭ್ಯದಿಂದ ಜನರಲ್ಲಿ ಅನಗತ್ಯವಾಗಿ ಖರ್ಚು ಮಾಡುವ ಹವ್ಯಾಸ ಹೆಚ್ಚುವ ಸಾಧ್ಯತೆಯಿದೆ. ಹಣವಿಲ್ಲದಿದ್ರೂ ವಸ್ತುಗಳನ್ನು ಖರೀದಿಸುವ ಅಭ್ಯಾಸ ಹೆಚ್ಚುವ ಸಾಧ್ಯತೆಯಿದೆ. ಹಾಗೆಯೇ ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ವಿಳಂಬ ಪಾವತಿ ಶುಲ್ಕ (Late payment fees) ಭರಿಸುವ ಮೂಲಕ ಜೇಬಿನ ಮೇಲಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಸಾಧ್ಯತೆಯೂ ಇದೆ. 

click me!