2 ಸಾವಿರ ರೂ. ನೋಟು ಬದಲಾವಣೆ ನಿಯಮ: ಎಸ್ ಬಿಐ ಸೇರಿದಂತೆ ಪ್ರಮುಖ ಬ್ಯಾಂಕ್ ಗಳಲ್ಲಿ ಹೀಗಿದೆ

By Suvarna News  |  First Published May 26, 2023, 5:37 PM IST

2 ಸಾವಿರ ರೂ. ನೋಟು ಬದಲಾವಣೆಗೆ ಸೆ.30ರ ತನಕ ಕಾಲಾವಕಾಶವಿದೆ. ಆದರೂ ನೋಟು ಬದಲಾವಣೆಗೆ ಸಂಬಂಧಿಸಿ ಅನೇಕ ಗೊಂದಲಗಳು ಜನಸಾಮಾನ್ಯರನ್ನು ಕಾಡುತ್ತಿವೆ. ಹಾಗಾದ್ರೆ ಎಸ್ ಬಿಐ, ಪಿಎನ್ ಬಿ, ಎಚ್ ಡಿಎಫ್ ಸಿ ಸೇರಿದಂತೆ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ನೋಟು ಬದಲಾವಣೆಗೆ ಸಂಬಂಧಿಸಿದ ನಿಯಮಗಳು ಹೇಗಿವೆ? ಇಲ್ಲಿದೆ ಮಾಹಿತಿ.


ನವದೆಹಲಿ (ಮೇ 26): 2 ಸಾವಿರ ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ)  ನಿರ್ಧಾರ ಪ್ರಕಟಿಸಿದೆ. ಇನ್ನು ಈ ನೋಟುಗಳನ್ನು ಬ್ಯಾಂಕ್ ನಲ್ಲಿ ಠೇವಣಿಯಿಡಲು ಅಥವಾ ವಿನಿಮಯಕ್ಕೆ ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ಆದರೆ, ಈ ರೀತಿ 2  ಸಾವಿರ ರೂ. ನೋಟುಗಳನ್ನು ಠೇವಣಿಯಿಡಲು ಅಥವಾ ವಿನಿಮಯ ಮಾಡಿಕೊಳ್ಳಲು ಅರ್ಹ ಐಡಿ ಅಥವಾ ಠೇವಣಿ ಅರ್ಜಿ ಸಲ್ಲಿಕೆಯನ್ನು ಆರ್ ಬಿಐ ಕಡ್ಡಾಯ ಮಾಡಿರಲಿಲ್ಲ. ಈ ನಡುವೆ ಕೆಲವು ಕಡೆ ಬ್ಯಾಂಕ್ ಗಳು 2 ಸಾವಿರ ರೂ. ನೋಟುಗಳನ್ನು ಠೇವಣಿಯಿಡುವ ಸಂದರ್ಭದಲ್ಲಿ ಗುರುತು ದೃಢೀಕರಣ ದಾಖಲೆಗಳನ್ನು ಕೇಳುತ್ತಿವೆ ಎಂಬ ದೂರುಗಳಿವೆ. ಕೆಲವು ಬ್ಯಾಂಕ್ ಗಳು ಎಲೆಕ್ಟ್ರಾನಿಕ್ ನೋಂದಣಿ ಮಾಡಿಸಿಕೊಂಡು ನೋಟುಗಳನ್ನು ವಿನಿಮಯ ಮಾಡುತ್ತಿವೆ. ಇನ್ನೂ ಕೆಲವು ಕಡೆ ಹೆಸರು, ನೊಬೈಲ್ ಸಂಖ್ಯೆಯನ್ನು ರಿಜಿಸ್ಟಾರ್ ಪುಸ್ತಕದಲ್ಲಿ ನಮೂದಿಸಲು ಕೇಳಲಾಗುತ್ತಿದೆ. ಇದಕ್ಕೆ ಯಾವುದೇ ಗುರುತು ಪುರಾವೆಗಳನ್ನು ಕೇಳಲಾಗುತ್ತಿಲ್ಲ. 2 ಸಾವಿರ ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಸಂದರ್ಭದಲ್ಲಿ ಆರ್ ಬಿಐ  ಹೊಡಿಸಿರುವ ಮಾರ್ಗಸೂಚಿ ಅನ್ವಯ  ಒಂದು ದಿನ ಒಬ್ಬ ವ್ಯಕ್ತಿ 2,000ರೂ. ನೋಟನ್ನು ಗರಿಷ್ಠ 20 ಸಾವಿರ ರೂ. ತನಕ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹಾಗಾದ್ರೆ ವಿವಿಧ ಬ್ಯಾಂಕ್ ಗಳಲ್ಲಿ 2 ಸಾವಿರ ರೂ. ನೋಟು ವಿನಿಮಯಕ್ಕೆ ಸಂಬಂಧಿಸಿ ಯಾವೆಲ್ಲ ನಿಯಮಗಳನ್ನು ಅನುಸರಿಸಲಾಗುತ್ತಿದೆ? 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ)
ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ)  2 ಸಾವಿರ ರೂ. ನೋಟುಗಳನ್ನು ವಿನಿಮಯ ಅಥವಾ ಠೇವಣಿಯಿಡುವ ಸಂದರ್ಭದಲ್ಲಿ ಯಾವುದೇ ಅರ್ಜಿ ಅಥವಾ ಗುರುತು ದೃಢೀಕರಣದ ಅಗತ್ಯವಿಲ್ಲ ಎಂದು ಅಧಿಕೃತ ಮೆಮೋ ಮೂಲಕ ತನ್ನ ಎಲ್ಲ ಶಾಖೆಗಳಿಗೆ ಸೂಚನೆ ನೀಡಿದೆ.  ಈ ಮೂಲಕ 2,000ರೂ. ನೋಟುಗಳನ್ನು ಬದಲಾಯಿಸುವಾಗ ಅಥವಾ ಠೇವಣಿ ಇಡುವಾಗ ಯಾವುದೇ ನಮೂನೆ ಅಥವಾ ಸ್ಲಿಪ್ ಅಗತ್ಯವಿದೆಯೇ ಎಂಬ ಊಹಾಪೋಹಗಳಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತೆರೆ ಎಳೆದಿದೆ. 

Tap to resize

Latest Videos

2,000ರೂ. ನೋಟು ಹಿಂತೆಗೆತದ ಪರಿಣಾಮ ಠೇವಣಿ, ಬಡ್ಡಿದರಕ್ಕೆ ಹಿತಕಾರಿ: ಎಸ್ ಬಿಐ ಅಧ್ಯಯನ ವರದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ)
2 ಸಾವಿರ ರೂ. ನೋಟು ಬದಲಾವಣೆಗೆ ಆಧಾರ್ ಕಾರ್ಡ್ ಅಥವಾ ಅಧಿಕೃತ ಪರಿಶೀಲಿತ ದಾಖಲೆ (OVD) ಅಗತ್ಯವಿಲ್ಲ ಎಂದು ಪಿಎನ್ ಬಿ ಸ್ಪಷ್ಟಪಡಿಸಿದೆ. ಇನ್ನು ಗ್ರಾಹಕರು ಇದಕ್ಕಾಗಿ ಯಾವುದೇ ಅರ್ಜಿ ಭರ್ತಿ ಮಾಡಬೇಕಾದ ಅಗತ್ಯ ಕೂಡ ಇಲ್ಲ ಎಂದು ಪಿಎನ್ ಬಿ ತಿಳಿಸಿದೆ. 

ಇತರ ಪ್ರಮುಖ ಖಾಸಗಿ ಬ್ಯಾಂಕ್ ಗಳು
ಪ್ರಮುಖ ಖಾಸಗಿ ಬ್ಯಾಂಕ್ ಗಳಾದ ಕೋಟಕ್ ಹಾಗೂ ಎಚ್ ಎಸ್ ಬಿಸಿ ಖಾತೆ ಹೊಂದಿರದ ಗ್ರಾಹಕರ ಬಳಿ 2 ಸಾವಿರ ರೂ. ನೋಟು ಬದಲಾವಣೆಗೆ ಅರ್ಜಿ/ಗುರುತು ದೃಢೀಕರಣ ದಾಖಲೆಗಳನ್ನು ಕೇಳುತ್ತಿವೆ.  ಇನ್ನು ಆಕ್ಸಿಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟೆರ್ಡ್ , ಯೆಸ್ ಬ್ಯಾಂಕ್, ಕೆನರಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಅರ್ಜಿ ಅಥವಾ ಗುರುತು ದೃಢೀರಣ ಪುರಾವೆಯನ್ನು ಕಡ್ಡಾಯಗೊಳಸಿಲ್ಲ. 
2 ಸಾವಿರ ರೂ. ನೋಟು ಬದಲಾವಣೆಗೆ ಎಲ್ಲ ಗ್ರಾಹಕರು ಅರ್ಜಿ ಭರ್ತಿ ಮಾಡೋದು ಕಡ್ಡಾಯ. ಆದರೆ, ಬ್ಯಾಂಕ್ ಖಾತೆ ಹೊಂದಿರದವರು ಮಾತ್ರ ಗುರುತು ದೃಢೀಕರಣ ದಾಖಲೆ ನೀಡಬೇಕು ಎಂದು ಐಸಿಐಸಿಐ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಗಳು ತಿಳಿಸಿವೆ. 

ಗುರುತಿನ ಚೀಟಿ ಇಲ್ಲದೆ ನೋಟು ಬದಲಾವಣೆಗೆ ಅವಕಾಶ ಬೇಡ: ಅರ್ಜಿ

ಎಚ್ ಡಿಎಫ್ ಸಿ ಬ್ಯಾಂಕ್: 2 ಸಾವಿರ ರೂ. ನೋಟು ಬದಲಾಣೆಗೆ ಸಂಬಂಧಿಸಿ ಎಚ್ ಡಿಎಫ್ ಸಿ ಬ್ಯಾಂಕ್ ಪ್ರಮುಖ ಮೂರು ವಿಚಾರಗಳನ್ನು ಸ್ಪಷ್ಟಪಡಿಸಿದೆ. ಮೊದಲನೆಯದಾಗಿ 2 ಸಾವಿರ ರೂ. ನೋಟು ಲೀಗಲ್ ಟೆಂಡರ್ ಹೊಂದಿದೆ. ಎಲ್ಲ ವಹಿವಾಟುಗಳಿಗೆ ನೀವು ಇದನ್ನು ಬಳಸಬಹುದು. ಎರಡನೆಯದಾಗಿ 2023ರ ಸೆಪ್ಟೆಂಬರ್ 30ರ ತನಕ  ಎಚ್ ಡಿಎಫ್ ಸಿ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ನಿಮ್ಮ ಖಾತೆಗೆ ಎಷ್ಟು ಪ್ರಮಾಣದ 2 ಸಾವಿರ ರೂ. ನೋಟುಗಳನ್ನು ಬೇಕಾದ್ರೂ ಠೇವಣಿ ಇಡಬಹುದು. ಮೂರನೆಯದಾಗಿ ಸೆ.30ರ ತನಕ ನೀವು 2  ಸಾವಿರ ರೂ. ನೋಟುಗಳನ್ನು ದಿನಕ್ಕೆ 20 ಸಾವಿರ ರೂ. ಮಿತಿಯಲ್ಲಿ ಠೇವಣಿ ಇಡಬಹುದು.

click me!