ದೊಡ್ಡ ಮೊತ್ತವನ್ನು ವರ್ಗಾವಣೆ ಮಾಡ್ಬೇಕಿದ್ರೆ ನಾವು ಚೆಕ್ ಹುಡುಕಾಟ ನಡೆಸ್ತೇವೆ. ಅನೇಕ ಬಾರಿ ಆತುರದಲ್ಲಿ ಚೆಕ್ ಬರೆದುಕೊಟ್ಟಿರ್ತೇವೆ. ಬ್ಯಾಂಕ್ ಗೆ ಚೆಕ್ ನೀಡೋದನ್ನು ಎಂದೂ ಹಗುರವಾಗಿ ತೆಗೆದುಕೊಳ್ಳಬೇಡಿ.
ಈಗಿನ ದಿನಗಳಲ್ಲಿ ಜನರ ಬಳಿ ಕ್ಯಾಶ್ ಇರೋದೇ ಅಪರೂಪ. ಮಾಲ್ ನಲ್ಲಿ ದೊಡ್ಡ ವಸ್ತುವಿನಿಂದ ಹಿಡಿದು ಹೂ ಖರೀದಿವರೆಗೆ ಎಲ್ಲದಕ್ಕೂ ಡಿಜಿಟಲ್ ಪಾವತಿ ಬಂದಿದೆ. ಡಿಜಿಟಲ್ ಪಾವತಿ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಗೂಗಲ್ ಪೇ, ಪೋನ್ ಪೇ, ಪೇಟಿಎಂ ಹೀಗೆ ನಾನಾ ವಿಧಗಳನ್ನು ಅನುಸರಿಸಿ ಜನರು ಹಣ ವರ್ಗಾವಣೆ ಮಾಡ್ತಿದ್ದರೂ ದೊಡ್ಡ ಮೊತ್ತದ ಹಣ ಪಾವತಿ ಮಾಡುವಾಗ ಇಲ್ಲವೆ ಕಂಪನಿಗಳ ವ್ಯವಹಾರದಲ್ಲಿ ಚೆಕ್ ಇನ್ನೂ ಚಾಲ್ತಿಯಲ್ಲಿದೆ. ಚೆಕ್ ಪಾವತಿಯನ್ನು ಸುರಕ್ಷಿತ ವ್ಯವಹಾರ ಎಂದೂ ಪರಿಗಣಿಸಲಾಗುತ್ತದೆ.
ಚೆಕ್ (Check) ಪಾವತಿ ಆರಾಮದಾಯಕವಾಗಿದೆ. ಹೆಚ್ಚಿನ ತಲೆಬಿಸಿ ಇಲ್ಲ. ಚೆಕ್ ಜಮಾ ಮಾಡಿದ ಮೂರ್ನಾಲ್ಕು ದಿನಗಳಲ್ಲಿ ಹಣ (Money) ಖಾತೆಗೆ ಸಂದಾಯವಾಗುತ್ತದೆ. ಹಾಗಂತ ಚೆಕ್ ಪಾವತಿಯಲ್ಲಿ ಸಮಸ್ಯೆ ಇಲ್ವೆ ಇಲ್ಲ ಎಂದಲ್ಲ. ಖಂಡಿತವಾಗಿಯೂ ಸಮಸ್ಯೆ ಇದೆ. ಇತರರಿಗೆ ನೀಡಿದ ಚೆಕ್, ಬೌನ್ಸ್ (Bounce) ಆಗಿದ್ದರೆ ಅಥವಾ ನಿಮಗೆ ನೀಡಿದ ಚೆಕ್ ಬೌನ್ಸ್ ಆದ್ರೂ ಸಮಸ್ಯೆ ಎದುರಿಸಬೇಕಾಗುತ್ತದೆ. ನಾವಿಂದು ಚೆಕ್ ಬೌನ್ಸ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
Recurring Deposit: ಆರ್ ಡಿ ಖಾತೆ ತೆರೆಯುವ ಮುನ್ನ ಈ ವಿಷಯದ ಬಗ್ಗೆ ಗಮನವಿರಲಿ
ಚೆಕ್ ಬೌನ್ಸ್ ಎಂದರೇನು? : ನೀವು ಚೆಕ್ ನೀಡಿದ್ದೀರಿ ಆದ್ರೆ ಖಾತೆಯಲ್ಲಿ ಹಣವಿಲ್ಲ ಎಂದಾಗ ಚೆಕ್ ಬೌನ್ಸ್ ಆಗುತ್ತದೆ. ಅದೇ ರೀತಿ ಯಾವುದೋ ವ್ಯಕ್ತಿ ನಿಮಗೆ 2 ಲಕ್ಷದ ಚೆಕ್ ನೀಡಿದ್ದು, ಚೆಕ್ ಅನ್ನು ಬ್ಯಾಂಕಿಗೆ ಜಮಾ ಮಾಡಿದ ನಂತರವೂ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದಾಗ ಚೆಕ್ ಬೌನ್ಸ್ ಆಗುತ್ತದೆ.
ಚೆಕ್ ಬೌನ್ಸ್ ನಿಯಮ ಏನು ? : ಚೆಕ್ ಬೌನ್ಸ್ ಆಗಿದೆ ಎಂದಾದ್ರೆ ಬೌನ್ಸ್ ಆದ ಒಂದು ತಿಂಗಳ ಒಳಗೆ ನೀವು ಚೆಕ್ ನಲ್ಲಿದ್ದ ಹಣವನ್ನು ವ್ಯಕ್ತಿಗೆ ಪಾವತಿಸಬೇಕು. ಇಲ್ಲವೆಂದ್ರೆ ಲೀಗಲ್ ನೋಟಿಸ್ ಬರುತ್ತದೆ. ಲೀಗಲ್ ನೋಟಿಸ್ ಬಂದ 15 ದಿನಗಳ ನಂತರವೂ ನೀವೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದಾದ್ರೆ ನಿಮ್ಮ ವಿರುದ್ಧ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ 1881 ರ ಸೆಕ್ಷನ್ 138 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತದೆ.
Personal Finance: ಯಾವುದೇ ಕೆಲಸವಿಲ್ಲವೆಂದ್ರೂ ಕ್ರೆಡಿಟ್ ಕಾರ್ಡ್ ಪಡೆಯೋದು ಹೇಗೆ?
ಚೆಕ್ ಬೌನ್ಸ್ ಆದ್ರೆ ಏನಾಗುತ್ತದೆ? : ಚೆಕ್ ಬೌನ್ಸ್ ಗೆ ಸಂಬಂಧಿಸಿದಂತೆ ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ನಿಯಮಗಳಿವೆ. ಭಾರತದಲ್ಲಿ ಒಂದು ವೇಳೆ ಚೆಕ್ ಬೌನ್ಸ್ ಆಗಿದ್ದರೆ, ಚೆಕ್ ನೀಡಿದ ವ್ಯಕ್ತಿಗೆ ದಂಡ ವಿಧಿಸಲಾಗುತ್ತದೆ. ಈ ದಂಡವನ್ನು ಬ್ಯಾಂಕ್ ವಿಧಿಸುತ್ತದೆ. ದಂಡ ಮಾತ್ರವಲ್ಲ ಕೆಲವೊಂದು ಸಂದರ್ಭದಲ್ಲಿ ವ್ಯಕ್ತಿಗೆ ಎರಡು ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಚೆಕ್ ಬೌನ್ಸ್ ಎಷ್ಟು ಬಾರಿ ಆಗಿದೆ ಎಂಬುದು ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಎರಡು ಬಾರಿ ಚೆಕ್ ಬೌನ್ಸ್ ಆಗಿದ್ದರೆ ನಿಮ್ಮ ಖಾತೆಯನ್ನು ಬ್ಯಾಂಕ್ ಮುಚ್ಚುತ್ತದೆ.
ಚೆಕ್ ಕ್ಲಿಯರ್ ಆಗದಿರಲು ಇತರ ಕಾರಣ : ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಮಾತ್ರಕ್ಕೆ ಮಾತ್ರ ಚೆಕ್ ಕ್ಲಿಯರ್ ಆಗೋದಿಲ್ಲ. ನಿಮ್ಮ ಖಾತೆಯಲ್ಲಿ ಹಣವಿದ್ರೂ ಅನೇಕ ಬಾರಿ ಚೆಕ್ ಕ್ಲಿಯರ್ ಆಗೋದಿಲ್ಲ. ಅದಕ್ಕೆ ನಾನಾ ಕಾರಣವಿದೆ.
• ಬ್ಯಾಂಕ್ ಖಾತೆಯಲ್ಲಿನ ಸಹಿ ಮತ್ತು ಚೆಕ್ ಮೇಲಿನ ಸಹಿ ಬೇರೆಯಾಗಿದ್ದರೆ ಚೆಕ್ ಕ್ಲಿಯರ್ ಆಗುವುದಿಲ್ಲ.
• ಚೆಕ್ ಮೇಲೆ ನೀವು ತಪ್ಪಾಗಿ ಬರೆದಿದ್ದರೂ ಚೆಕ್ ಕ್ಲಿಯರ್ ಆಗೋದಿಲ್ಲ.
• ನೀವು ಮೊತ್ತವನ್ನು ಅಂಕಿಯನ್ನು ಒಂದು ರೀತಿ, ಅಕ್ಷರದಲ್ಲಿ ಒಂದು ರೀತಿ ಬರೆದಿದ್ದರೂ ಸಮಸ್ಯೆಯಾಗುತ್ತದೆ.
• ತಪ್ಪಾದ ಹೆಸರು ಕೂಡ ಇದಕ್ಕೆ ಕಾರಣವಾಗುತ್ತದೆ.