ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನ ಪ್ರಮುಖ ನಗರಗಳಲ್ಲಿ ಪ್ರೀಮಿಯಂ ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆ ಇದ್ದು, ಹೆಚ್ಚಿನ ಯೋಜನೆಗಳನ್ನು ಪ್ರಾರಂಭಿಸಲು ಬಿಲ್ಡರ್‌ಗಳನ್ನು ಪ್ರೇರೇಪಿಸಿದೆ.
ಗುರುಗ್ರಾಮ್ (ಜನವರಿ 8, 2024): ಭಾರತದ ಅತಿದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್ ಎನಿಸಿಕೊಂಡಿರುವ ಡಿಎಲ್‌ಎಫ್, ಅಪಾರ್ಟ್‌ಮೆಂಟ್‌ಗಳ ನಿರ್ಮಾಣ ಪ್ರಾರಂಬಿಸುವ ಮೊದಲೇ ರಾಷ್ಟ್ರ ರಾಜಧಾನಿ ನವದೆಹಲಿಯ ಬಳಿ 72 ಬಿಲಿಯನ್ ರೂಪಾಯಿ ಅಂದರೆ 7,200 ಕೋಟಿ ರೂ. ($865 ಮಿಲಿಯನ್) ಯೋಜನೆಯಲ್ಲಿ ಎಲ್ಲಾ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಿದ್ದಾರೆ.
DLF Ltd. ಗುರುಗ್ರಾಮ್‌ನಲ್ಲಿ ಕೇವಲ 3 ದಿನಗಳಲ್ಲಿ 1,113 ಐಷಾರಾಮಿ ನಿವಾಸಗಳನ್ನು ಮಾರಾಟ ಮಾಡಿದೆ. ಈ ಪೈಕಿ, ಕಾಲು ಭಾಗ ಅಪಾರ್ಟ್‌ಮೆಂಟ್‌ಗಳನ್ನು ಅನಿವಾಸಿ ಭಾರತೀಯರು ಖರೀದಿಸಿದ್ದಾರೆ. ಡಿಎಲ್‌ಎಫ್ ಪ್ರಿವಾನಾ ಸೌತ್ ಯೋಜನೆಯ 7 ಟವರ್‌ಗಳಲ್ಲಿರುವ ಎಲ್ಲಾ 4 ಬೆಡ್‌ರೂಮ್ ಮತ್ತು ಪೆಂಟ್‌ಹೌಸ್ ಘಟಕಗಳು ಮಾರಾಟವಾಗಿವೆ ಎಂದು ಡೆವಲಪರ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದ್ದಾರೆ. ಗೂಗಲ್ ಮತ್ತು ಅಮೆರಿಕನ್ ಎಕ್ಸ್‌ಪ್ರೆಸ್ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳಿಗೆ ನೆಲೆಯಾಗಿರುವ ಉಪಗ್ರಹ ನಗರದಲ್ಲಿ ಈ ಅಪಾರ್ಟ್ಮೆಂಟ್ ಸಂಕೀರ್ಣವು 116 ಎಕರೆಗಳಷ್ಟು ವಿಸ್ತೀರ್ಣವಾಗಿದೆ.
ಹೊಸ ವರ್ಷಕ್ಕೆ ಎಫ್‌ಡಿ ಇಡಲು ಬಯಸ್ತಿದ್ದೀರಾ? ಹಾಗಾದ್ರೆ ಪ್ರಮುಖ ಬ್ಯಾಂಕ್‌ಗಳು ಎಷ್ಟು ಬಡ್ಡಿ ದರ ನೀಡ್ತಿವೆ ನೋಡಿ..
DLF ಷೇರುಗಳು 2008ರ ಅತ್ಯಧಿಕ ಮೊತ್ತಕ್ಕಿಂತ ಕಳೆದ ವರ್ಷ ದ್ವಿಗುಣಗೊಂಡಿದ್ದು, BSE ಸೆನ್ಸೆಕ್ಸ್ ಸೂಚ್ಯಂಕದಲ್ಲಿ 18% ಏರಿಕೆ ಕಂಡಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾದ ಭಾರತದಲ್ಲಿ ಐಷಾರಾಮಿ ಕಾರುಗಳಿಂದ ಹಿಡಿದು ಬೆಲೆಬಾಳುವ ಮನೆಗಳವರೆಗೆ ಹೆಚ್ಚುತ್ತಿರುವ ಆದಾಯದ ಮಟ್ಟಗಳೊಂದಿಗೆ ಎಲ್ಲದರಲ್ಲೂ ಉತ್ತಮವಾದ ಮಾರಾಟ ಕಾಣುತ್ತಿದೆ.
ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನ ಪ್ರಮುಖ ನಗರಗಳಲ್ಲಿ ಪ್ರೀಮಿಯಂ ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆ ಇದ್ದು, ಹೆಚ್ಚಿನ ಯೋಜನೆಗಳನ್ನು ಪ್ರಾರಂಭಿಸಲು ಬಿಲ್ಡರ್‌ಗಳನ್ನು ಪ್ರೇರೇಪಿಸಿದೆ. ಈ ಮಧ್ಯೆ, ಈ ಐಷಾರಾಮಿ ಉತ್ಕರ್ಷವು ಇನ್ನೂ ಒಂದೆರಡು ವರ್ಷಗಳವರೆಗೆ ಇರುತ್ತದೆ ಎಂದು ರಿಯಲ್ ಎಸ್ಟೇಟ್ ಬ್ರೋಕರ್ ಮತ್ತು ಸಲಹೆಗಾರ ನೈಟ್ ಫ್ರಾಂಕ್‌ನ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ ಗುಲಾಮ್ ಜಿಯಾ ಹೇಳಿದ್ದಾರೆ. ಅತಿ ಶ್ರೀಮಂತರು ಮಾತ್ರವಲ್ಲ, ಮೇಲ್ಮಧ್ಯಮ ವರ್ಗದವರು ಸಹ ಈ ಯೋಜನೆಗಳನ್ನು ಖರೀದಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.
ಬದುಕಿನ ಭರವಸೆ ಇಲ್ಲ; ಜೈಲಲ್ಲಿ ಸಾಯೋದೇ ಲೇಸು: ಕೋರ್ಟ್‌ನಲ್ಲೇ ಗಳ ಗಳನೇ ಕಣ್ಣೀರಿಟ್ಟ ಜೆಟ್ ಏರ್‌ವೇಸ್ ಸಂಸ್ಥಾಪಕ
ಪ್ರತಿ ಖರೀದಿದಾರರಿಗೆ ಒಂದು ಅಪಾರ್ಟ್‌ಮೆಂಟ್‌ಗೆ ಹಂಚಿಕೆಗಳನ್ನು ಸೀಮಿತಗೊಳಿಸುವುದು ಮತ್ತು ಉದ್ಯಮದ ಗುಣಮಟ್ಟಕ್ಕಿಂತ 5 ಪಟ್ಟು ಬುಕಿಂಗ್ ಮೊತ್ತವನ್ನು ಹೆಚ್ಚಿಸುವುದು ಸೇರಿದಂತೆ ಬೃಹತ್ ಬುಕಿಂಗ್‌ಗಳನ್ನು ನಿರುತ್ಸಾಹಗೊಳಿಸುವ ಕ್ರಮಗಳ ಹೊರತಾಗಿಯೂ DLF ತ್ವರಿತವಾಗಿ ಅಪಾರ್ಟ್‌ಮೆಂಟ್ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಕಳೆದ ವರ್ಷ DLF ಇದೇ ರೀತಿ ಕೇವಲ 3 ದಿನಗಳಲ್ಲಿ ಸುಮಾರು 100 ಕೋಟಿ ಡಾಲರ್ ಮೌಲ್ಯದ 1,100 ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಿತ್ತು.