ಷೇರು ಮಾರುಕಟ್ಟೆ ಏರಿಳಿತ ಅರಿಯೋದು ಸುಲಭವಲ್ಲ. ಇಂದು ಲಾಭ ನೀಡಿದ್ದ ಕಂಪನಿ ನಾಳೆ ನಿಮ್ಮನ್ನು ಮುಳುಗಿಸಬಹುದು. ಷೇರು ಮಾರುಕಟ್ಟೆಯಲ್ಲಿ ನಷ್ಟವಾಗ್ಬಾರದು ಅಂದ್ರೆ ನೀವು ಪ್ಲಾನ್ ನಂತೆ ನಡೆದುಕೊಳ್ಳಬೇಕು.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಾಗ ಹೂಡಿಕೆದಾರರು ಸಣ್ಣ ಹೂಡಿಕೆಗೆ ಹೆಚ್ಚು ಆದ್ಯತೆ ನೀಡ್ತಾರೆ. ಅಂದ್ರೆ ಸ್ಮಾಲ್ ಕ್ಯಾಪ್ ಷೇರುಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಸ್ಮಾಲ್ ಕ್ಯಾಪ್ ಷೇರುಗಳು ಲಾಭದಾಯಕವಾಗಿರುವುದು ಇದಕ್ಕೆ ಕಾರಣ. ಹಿಂದಿನ ವರ್ಷ ಅಂದ್ರೆ 2023 ರಲ್ಲಿ ನಿಫ್ಟಿ ಸ್ಮಾಲ್ ಕ್ಯಾಪ್ 250 ಸೂಚ್ಯಂಕವು ಶೇಕಡಾ 46 ರಷ್ಟು ಉತ್ತಮ ಆದಾಯವನ್ನು ನೀಡಿತ್ತು. ಈ ವರ್ಷವೂ ಸ್ಮಾಲ್ ಕ್ಯಾಪ್ ಉತ್ತಮ ಲಾಭ ನೀಡಲಿದೆ ಎನ್ನುವ ನಿರೀಕ್ಷೆಯಲ್ಲಿ ಹೂಡಿಕೆದಾರರಿದ್ದಾರೆ.
ಸ್ಮಾಲ್ ಕ್ಯಾಪ್ (Smallcap) ಷೇರುಗಳಲ್ಲಿ ಏರಿಳಿತ ಹೆಚ್ಚಿರುತ್ತದೆ. ಅಪಾಯವನ್ನು ಸ್ವೀಕರಿಸಲು ಸಿದ್ಧ ಎನ್ನುವವರು ಇದರ ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ಮಾಲ್ ಕ್ಯಾಪ್ ಷೇರು (Shares) ಗಳಲ್ಲಿ ವೇಗವಾದ ಏರಿಕೆ ಮತ್ತು ವೇಗವಾದ ಇಳಿಕೆಯನ್ನು ನೀವು ಕಾಣ್ಬಹುದು. ಇದ್ರಿಂದಾಗಿ ನಿಮಗೆ ನಷ್ಟವೂ ಆಗ್ಬಹುದು. ವಿಶ್ವದಲ್ಲಿ ಸಣ್ಣ ಬದಲಾವಣೆ ಆದ್ರೂ ಅದು ಸ್ಮಾಲ್ ಕ್ಯಾಪ್ ಮೇಲಾಗುತ್ತದೆ. ಇದ್ರಿಂದಾಗಿ ವೇಗವಾದ ಕುಸಿತವನ್ನೂ ನೀವು ಅನುಭವಿಸಬೇಕಾಗುತ್ತದೆ.
ಸದ್ದಿಲ್ಲದೇ ಕಾರು, ವೈಯಕ್ತಿಕ ಸಾಲ ಬಡ್ಡಿ ದರ ಏರಿಸಿದ ಬ್ಯಾಂಕ್‌ಗಳು : ಗೃಹ ಸಾಲದಲ್ಲಿ ಯಾವುದೇ ವ್ಯತ್ಯಾಸವಿಲ್ಲ
ಇದ್ರಲ್ಲಿ ನೀವು ಎಷ್ಟು ಲಾಭ (Profit) ಪಡೆಯುತ್ತೀರೋ ಅಷ್ಟೇ ನಷ್ಟವನ್ನು ಅನುಭವಿಸುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಹೇಳ್ತಾರೆ. ಅದೇ ಕಾರಣಕ್ಕೆ ಆಲೋಚನೆ ಮಾಡಿ ನೀವು ಸ್ಮಾಲ್ ಕ್ಯಾಪ್ ಷೇರುಗಳನ್ನು ಖರೀದಿ ಮಾಡಬೇಕಾಗುತ್ತದೆ. ಸ್ಮಾಲ್ ಕ್ಯಾಪ್ ಷೇರುಗಳ ಖರೀದಿ ಸಂದರ್ಭದಲ್ಲಿ ನೀವು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸಬೇಕು. ಆಗ ದೊಡ್ಡ ನಷ್ಟದಿಂದ ದೂರ ಇರಬಹುದು.
ಆತುರಪಡದೆ ಖರೀದಿ ಹಾಗೂ ಮಾರಾಟ ಮಾಡಿ : ಷೇರು ಮಾರುಕಟ್ಟೆಯಲ್ಲಿ ನೀವು ಆತುರ ಮಾಡಿದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಹಾಗಾಗಿ ನೀವು ಸಣ್ಣ ಕ್ಯಾಪ್ ನಲ್ಲಿ ಹೂಡಿಕೆ ಮಾಡುವ ಸಮಯದಲ್ಲಿ ಕೆಲ ನಿಯಮ ಪಾಲನೆ ಮಾಡಬೇಕು. ಸರಿಯಾದ ಸಮಯದಲ್ಲಿ ನೀವು ಸ್ಮಾಲ್ ಕ್ಯಾಪ್ ಷೇರಿಗೆ ಪ್ರವೇಶ ಪಡೆಯಬೇಕು. ತಕ್ಷಣ ಅದರ ಮಾರಾಟಕ್ಕೆ ನಿರ್ಧರಿಸಬಾರದು. ಅದಕ್ಕೆ ಒಂದಿಷ್ಟು ಸಮಯ ನೀಡಬೇಕು. ಅಲ್ಲದೆ ಬರುವ ಏರಿಳಿತಗಳನ್ನು ನಿರ್ವಹಿಸಲು ನೀವು ಸಿದ್ಧರಾಗಿರಬೇಕು. ಭೌಗೋಳಿಕ ಹಾಗೂ ರಾಜಕೀಯ ವಿಷ್ಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಮಾಲ್ ಕ್ಯಾಪ್ ಷೇರಿಗೆ ಪ್ರವೇಶ, ಮಾರಾಟದ ನಿರ್ಧಾರ ತೆಗೆದುಕೊಳ್ಳಬೇಕು.
ಅತ್ಯತ್ಸಾಹದ ಅಗತ್ಯವಿಲ್ಲ : ಹಿಂದಿನ ವರ್ಷ ಸ್ಮಾಲ್ ಕ್ಯಾಪ್ ನಲ್ಲಿ ಹೆಚ್ಚು ಏರಿಕೆ ಕಂಡು ಬಂದಿದೆ ಎನ್ನುವ ಕಾರಣಕ್ಕೆ ಈ ಬಾರಿಯೂ ಅದೇ ನಿರೀಕ್ಷೆಯಲ್ಲಿ ನಿಮ್ಮಲ್ಲಿರುವ ಎಲ್ಲ ಹಣವನ್ನು ನೀವು ಇದಕ್ಕೆ ಹಾಕಬೇಕಾಗಿಲ್ಲ. ಇದು ನಿಮ್ಮನ್ನು ಸಂಕಷ್ಟಕ್ಕೆ ನೂಕಬಹುದು. ಮೊದಲೇ ಹೇಳಿದಂತೆ ಸಣ್ಣಪುಟ್ಟ ಬದಲಾವಣೆ ಕೂಡ ಷೇರಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಸ್ವಲ್ಪ ಸ್ವಲ್ಪ ಹಣವನ್ನೇ ನೀವು ಷೇರಿಗೆ ಹಾಕ್ತಾ ನಿಧಾನವಾಗಿ ನಿಮ್ಮ ಮೊತ್ತವನ್ನು ಹೆಚ್ಚಿಸಬೇಕೇ ವಿನಃ ಒಂದೇ ಬಾರಿ ಎಲ್ಲ ಹಣ ಸುರಿಯುವುದು ತಪ್ಪು.
Gautam Adani: ಹೆಚ್ಚುತ್ತಲೇ ಇದೆ ಒಟ್ಟು ಆಸ್ತಿ ಮೌಲ್ಯ..! ಅಂಬಾನಿಯನ್ನೇ ಓವರ್ಟೆಕ್ ಮಾಡಿದ ಅದಾನಿ..!
ಮಾಹಿತಿ ಇಲ್ಲದೆ ಷೇರು ಖರೀದಿ ಬೇಡ : ನೀವು ಯಾವುದೇ ಸ್ಮಾಲ್ ಕ್ಯಾಪ್ ಷೇರು ಖರೀದಿ ಮಾಡ್ತಿದ್ದರೂ ಅದರ ಬಗ್ಗೆ ಒಂದಿಷ್ಟು ಮಾಹಿತಿ ಸಂಗ್ರಹಿಸಿ. ಇಲ್ಲಿ ಸಣ್ಣ ಕಂಪನಿಗಳು ಕೆಲಸ ಮಾಡುತ್ತವೆ. ಆ ಕಂಪನಿಯ ಆರ್ಥಿಕ ಸ್ಥಿತಿ, ಅದರ ಗುರಿಗಳು ಮತ್ತು ಬೆಳವಣಿಗೆಯ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಹೂಡಿಕೆ ಮಾಡುವ ಮೊದಲು ಕನಿಷ್ಠ 2 ವರ್ಷಗಳ ಕಾಲ ಕಂಪನಿಗಳ ವಾರ್ಷಿಕ ವರದಿಗಳನ್ನು ಓದಿ. ಕಂಪನಿ ಆದಾಯದ ಮೂಲ, ಸ್ಪರ್ಧೆ ಎಲ್ಲವನ್ನೂ ತಿಳಿದು ಅದ್ರಲ್ಲಿ ಹೂಡಿಕೆ ಮಾಡಿ. ಯಾವುದೇ ಕಾರಣಕ್ಕೂ ಸ್ಮಾಲ್ ಕ್ಯಾಪ್ ಷೇರಿನಲ್ಲಿ ದೊಡ್ಡ ಹೂಡಿಕೆ ಮಾಡಲು ಹೋಗ್ಬೇಡಿ.