ದೆಹಲಿ ಬಳಿಕ ಮತ್ತೊಂದು ಆಘಾತ: ಮೋದಿ ಸರ್ಕಾರಕ್ಕೆ ದೊಡ್ಡ ಖೋತಾ!

By Suvarna NewsFirst Published Feb 12, 2020, 9:35 PM IST
Highlights

ದೆಹಲಿ ಚುನಾವಣೆಯಲ್ಲಿ ಮುಗ್ಗರಿಸಿದ ಬಿಜೆಪಿ| ಮತ್ತೊಂದು ಹೊಸ ಆಘಾತ ಎದುರಿಸಿದ ಮೋದಿ ಸರ್ಕಾರ| 2020ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 7.59ಕ್ಕೆ ಏರಿಕೆ| ರಾಷ್ಟ್ರೀಯ ಅಂಕಿ-ಅಂಶ ಕಚೇರಿ ವರದಿ ಬಿಡುಗಡೆ| ಆಹಾರ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಚಿಲ್ಲರೆ ಹಣದುಬ್ಬರ|

ನವದೆಹಲಿ(ಫೆ.12): ಆರ್ಥಿಕ ಹಿಂಜರಿಕೆಯ ಆರೋಪ ಎದುರಿಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಚಿಲ್ಲರೆ ಹಣದುಬ್ಬರ ಏರಿಕೆ ಮತ್ತೊಂದು ಸವಾಲಾಗಿ ಪರಿಣಮಿಸಿದೆ.

ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆಯ ಪರಿಣಾಮ 2020ರ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಶೇ. 7.59ಕ್ಕೆ ಏರಿಕೆಯಾಗಿದೆ.

ಈ ಕುರಿತು ರಾಷ್ಟ್ರೀಯ ಅಂಕಿ-ಅಂಶ ಕಚೇರಿ ವರದಿ ಬಿಡುಗಡೆ ಮಾಡಿದ್ದು, ಅಂಕಿ-ಅಂಶಗಳ ಪ್ರಕಾರ ಚಿಲ್ಲರೆ ಹಣದುಬ್ಬರ ಕಳೆದ ಜನವರಿ ಶೇ. 7.59ಕ್ಕೆ ಏರಿಕೆಯಾಗಿದೆ.

Government of India: Retail inflation rises to 7.59 per cent in January 2020 from 7.35 per cent in December 2019. pic.twitter.com/kQHpsS7wrR

— ANI (@ANI)

ಚಿಲ್ಲರೆ ಹಣದುಬ್ಬರವನ್ನು ಗ್ರಾಹಕ ದರ ಸೂಚ್ಯಂಕದ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕಲಾಗಿದ್ದು, ಆಹಾರ ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ  ಕಳೆದ ಜನವರಿಯಲ್ಲಿ ಶೇ 7.59 ಕ್ಕೆ ಏರಿದೆ ಎಂದು ವರದಿ ತಿಳಿಸಿದೆ. 

ಚಿಲ್ಲರೆ ಹಣದುಬ್ಬರ 2019 ರ ಡಿಸೆಂಬರ್‌ನಲ್ಲಿ ಶೇ 7.35ರಷ್ಟಿತ್ತು. ಇದೀಗ ಜನವರಿಯಲ್ಲಿ ಶೇ.7.59ಕ್ಕೆ ಏರಿಕೆಯಾಗುವ ಮೂಲಕ ಸರ್ಕಾರಕ್ಕೆ ಹೊಸ ಸವಾಲನ್ನು ತಂದೊಡ್ಡಿದೆ.

ನಾವು ಮತ್ತೆ ಮೇಲೆದ್ದು ಬರುತ್ತೇವೆ: ಸಣ್ಣ ಧ್ವನಿಯಲ್ಲಿ ಮೋದಿ ಅಂದಿದ್ದೇನು?

ಇನ್ನು ಪ್ರೊಟೀನ್ ಜಾಸ್ತಿ ಇರುವ ಉತ್ಪನ್ನಗಳಾದ ಮಾಂಸ, ಮೀನುಗಳ ಹಣದುಬ್ಬರ ಶೇ.10.50ರಷ್ಟು ಏರಿಕೆಯಾಗಿದ್ದು, ಮೊಟ್ಟೆಯ ಹಣದುಬ್ಬರ ಕೂಡ ಶೇ. 10.41 ಏರಿಕೆಯಾಗಿದೆ.

ಚಿಲ್ಲರೆ ಹಣದುಬ್ಬರವು ಆರ್ಥಿಕತೆ ಅಂಶಗಳಲ್ಲಿ ಪ್ರಮುಖವಾದ ಅಂಶವಾಗಿದ್ದು, ಆರ್‌ಬಿಐ ಉಸ್ತುವಾರಿಯಲ್ಲಿ ಇದನ್ನು ಲೆಕ್ಕ ಹಾಕಲಾಗುತ್ತದೆ.
 

click me!