ಇಕ್ಕಟ್ಟಿನಲ್ಲಿ ಮೋದಿ ಸರ್ಕಾರ: ಶೀಘ್ರ ಬದಲಾವಣೆಗೆ ಮುಂದಾಗ್ತಾರಾ?

By Web DeskFirst Published Jul 12, 2019, 9:17 PM IST
Highlights

ಮೋದಿ 2.0 ಸರ್ಕಾರದ ಮುಂದಿದೆ ಹೊಸ ಚಾಲೆಂಜ್| ಚಾಲೆಂಜ್ ಸ್ವೀಕರಿಸಲಿದೆಯಾ ಮೋದಿ ನೇತೃತ್ವದ ಕೇಂದ್ರ ಸರ್ಕಾರ?| ಏರು ಗತಿಯಲ್ಲಿ ಸಾಗುತ್ತಿರುವ ಚಿಲ್ಲರೆ ಹಣದುಬ್ಬರ| ಜೂನ್ ತಿಂಗಳಲ್ಲಿ ಶೇ.3.18ಕ್ಕೆ ಏರಿಕೆಯಾದ ಚಿಲ್ಲರೆ ಹಣದುಬ್ಬರ|  ಕಳೆದ ಏಳು ತಿಂಗಳಲ್ಲಿನ ಗರಿಷ್ಠ ಮಟ್ಟ ತಲುಪಿದ ಚಿಲ್ಲರೆ ಹಣದುಬ್ಬರ|

ನವದೆಹಲಿ(ಜು.12): ಕಳೆದ ಆರು ತಿಂಗಳಿಂದ ಏರು ಗತಿಯಲ್ಲಿ ಸಾಗುತ್ತಿರುವ ಚಿಲ್ಲರೆ ಹಣದುಬ್ಬರ, ಜೂನ್ ತಿಂಗಳಲ್ಲಿ ಶೇ.3.18ಕ್ಕೆ ಏರಿಕೆಯಾಗಿದೆ.

ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆ ಹಣದುಬ್ಬರದ ಏರಿಕೆಗೂ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕಳೆದ ಜನವರಿಯಲ್ಲಿ ಶೇ. 1.97ರಷ್ಟು ಇದ್ದ ಚಿಲ್ಲರೆ ಹಣದುಬ್ಬರ ಏರುಗತಿಯಲ್ಲಿ ಸಾಗುತ್ತಿದ್ದು, ಮೇ ತಿಂಗಳಲ್ಲಿ ಶೇ.3.05ರಷ್ಟು ಇತ್ತು. ಇದೀಗ ಶೇ.3.18ಕ್ಕೆ ಏರಿಕೆಯಾಗುವ ಮೂಲಕ ಕಳೆದ ಏಳು ತಿಂಗಳಲ್ಲಿನ ಗರಿಷ್ಠ ಮಟ್ಟ ತಲುಪಿದೆ.

ಗ್ರಾಹಕ ದರ ಸೂಚ್ಯಂಕ(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಏಪ್ರಿಲ್‌ನಲ್ಲಿ ಶೇ.2.99ರಷ್ಟಿತ್ತು. 2018ರ ಮೇನಲ್ಲಿ ಶೇ.4.87ರಷ್ಟಿತ್ತು. 2018ರ ಅಕ್ಟೋಬರ್‌ನಲ್ಲಿ ಶೇ.3.38ಕ್ಕೆ ಇಳಿದಿತ್ತು. ಇದಕ್ಕೆ ಹೋಲಿಸಿದರೆ, ಪ್ರಸಕ್ತ ಸಂದರ್ಭದಲ್ಲಿ ಕಡಿಮೆಯಾಗಿದೆ.

click me!