ಒಂದೇ ದಿನ ಚಿನ್ನದ ಬೆಲೆ ಒಂದೇ ದಿನ 930 ರು.ಏರಿಕೆ!

Published : Jul 12, 2019, 09:27 AM ISTUpdated : Jul 12, 2019, 09:28 AM IST
ಒಂದೇ ದಿನ ಚಿನ್ನದ ಬೆಲೆ ಒಂದೇ ದಿನ 930 ರು.ಏರಿಕೆ!

ಸಾರಾಂಶ

ಚಿನ್ನದ ಬೆಲೆ ಒಂದೇ ದಿನ 930 ರು.ಏರಿಕೆ| ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವ

ನವದೆಹಲಿ[ಜು.12]: ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದ ಪರಿಣಾಮ ಚಿನ್ನದ ದರ ಗುರುವಾರ ಬರೋಬ್ಬರಿ 930 ರು. ಏರಿಕೆಯಾಗಿದೆ.

ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 35800 ರು. ಆಗಿದೆ. ಮುಂಬೈನಲ್ಲಿ ಆಭರಣ ಚಿನ್ನ 34,629 ರು. ಹಾಗೂ ಶುದ್ಧ ಚಿನ್ನದ ದರ 38000 ರು. ಆಗಿದೆ. ಬೆಂಗಳೂರಿನಲ್ಲಿ ಇಂದಿನ[ಜು.12] 22 ಕ್ಯಾರೆಟ್, 10 ಗ್ರಾಂ ಚಿನ್ನದ ದರ 32,600 ರು. ಆಗಿದೆ.

ಇದೇ ವೇಳೆ ಬೆಳ್ಳಿಯ ದರ ಕೂಡ ಪ್ರತಿ ಕೆ.ಜಿ.ಗೆ 300 ರು. ಏರಿಕೆಯಾಗಿದ್ದು, 39,200 ರು. ತಲುಪಿದೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ ಮುಖ್ಯಸ್ಥ ಜೆರೊಮ್‌ ಪೊವೆಲ್‌ ಬಡ್ಡಿದರವನ್ನು ಇಳಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದು, ಚೀನಾ ಮತ್ತು ಅಮೆರಿಕ ನಡುವಿನ ವಾಣಿಜ್ಯ ಬಿಕ್ಕಟ್ಟು ಮುಂದುವರೆದಿದ್ದು, ಜಾಗತಿಕ ಆರ್ಥಿಕ ಪರಿಸ್ಥಿತಿಯ ಕುರಿತ ನಕಾರಾತ್ಮಕ ವರದಿಗಳು ಕೂಡಾ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ದಕ್ಷಿಣದ 5 ರಾಜ್ಯಗಳಲ್ಲೇ ದೇಶದ ಶೇ. 80ರಷ್ಟು ಗೋಲ್ಡ್ ಲೋನ್: ತಮಿಳುನಾಡು ಟಾಪ್‌, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?
ಶಾಲೆ ಬಿಟ್ಟ ಹುಡುಗನಿಂದ ₹10,000 ಕೋಟಿ ಸಾಮ್ರಾಜ್ಯ, 10 ಕೆ.ಜಿ ಪನ್ನೀರ್‌ನಿಂದ ಆರಂಭವಾಗಿತ್ತು Milky Mist