ಪ್ಯಾನ್’ಗೆ ಆಧಾರ್ ಲಿಂಕ್ ಮಾಡಿಲ್ವಾ?: ಕೊನೆ ದಿನಾಂಕ ಗೊತ್ತಲ್ವಾ?

Published : Jul 11, 2019, 07:27 PM IST
ಪ್ಯಾನ್’ಗೆ ಆಧಾರ್ ಲಿಂಕ್ ಮಾಡಿಲ್ವಾ?: ಕೊನೆ ದಿನಾಂಕ ಗೊತ್ತಲ್ವಾ?

ಸಾರಾಂಶ

ಪ್ಯಾನ್ ಕಾರ್ಡ್’ಗೆ ನಿಮ್ಮ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯ| ಪ್ಯಾನ್-ಆಧಾರ್’ಗೆ ಇದೇ ಆ.31 ಕೊನೆಯ ದಿನಾಂಕ| ದೇಶದಲ್ಲಿ ಒಟ್ಟು 400 ಮಿಲಿಯನ್ ಪ್ಯಾನ್ ಕಾರ್ಡ್’ಗಳು|  180 ಮಿಲಿಯನ್ ಪ್ಯಾನ್ ಕಾರ್ಡ್’ಗಳು ಆಧಾರ್’ನೊಂದಿಗೆ ಜೋಡಣೆಯಾಗಿಲ್ಲ| ಸೆ.01ರಿಂದ ಆಧಾರ್ ಲಿಂಕ್ ಆಗಿರದ ಪ್ಯಾನ್ ಕಾರ್ಡ್’ಗಳ ಮಾನ್ಯತೆ ರದ್ದು|

ಬೆಂಗಳೂರು(ಜು.11): ನಿಮ್ಮ ಪ್ಯಾನ್ ಕಾರ್ಡ್’ಗೆ ನಿಮ್ಮ ಆಧಾರ್ ಕಾರ್ಡ್ ಜೋಡಣೆ ಕಡ್ಡಾಯವಾಗಿದ್ದು, ಇದೇ ಆ.31 ಕೊನೆಯ ದಿನಾಂಕ ಎಂದು ಆದಾಯ ತೆರಿಗೆ ಇಲಾಖೆ ಆದೇಶ ಹೊರಡಿಸಿದೆ. 

ಆಧಾರ್ ಲಿಂಕ್ ಆಗಿರದ ಪ್ಯಾನ್ ಕಾರ್ಡ್’ಗಳು ಸೆ.01ರಿಂದ ಮಾನ್ಯತೆ ಕಳೆದುಕೊಳ್ಳಲಿವೆ ಎಂದೂ ಇಲಾಖೆ ಸ್ಪಷ್ಟಪಡಿಸಿದೆ. ದೇಶದಲ್ಲಿ ಒಟ್ಟು 400 ಮಿಲಿಯನ್ ಪ್ಯಾನ್ ಕಾರ್ಡ್’ಗಳಿದ್ದು, ಇವುಗಳ ಪೈಕಿ 180 ಮಿಲಿಯನ್ ಪ್ಯಾನ್ ಕಾರ್ಡ್’ಗಳು ಆಧಾರ್’ನೊಂದಿಗೆ ಜೋಡಣೆಯಾಗಿಲ್ಲ.

ಆದರೆ ತೆರಿಗೆ ಕಟ್ಟಲು ಪ್ಯಾನ್ ಕಾರ್ಡ್ ಬದಲಾಗಿ ಆಧಾರ್ ಕಾರ್ಡ್ ಕೂಡ ಬಳಸಬಹುದು ಎಂದು ಕೇಂದ್ರ ಬಜೆಟ್’ನಲ್ಲಿ ತಿಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕೆಲವೊಂದು ರಿಯಾಯ್ತಿ ನೀಡಿದೆ.

ಪ್ರಮುಖವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರದ ಪ್ಯಾನ್ ಕಾರ್ಡ್’ಗಳ ಮಾನ್ಯತೆ ರದ್ದಾಗುವುದಾದರೂ, ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಲೆಕ್ಟ್ರಾನಿಕ್ ಪ್ಯಾನ್ ನಂಬರ್’ಗಳನ್ನು ನೀಡಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಈ ಎಲೆಕ್ಟ್ರಾನಿಕ್ ಪ್ಯಾನ್ ನಂಬರ್’ಗಳನ್ನು ಆನ್’ಲೈನ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಇದರಿಂದ ಪ್ಯಾನ್ ಕಾರ್ಡ್’ಗೆ ಆಧಾರ್ ಲಿಂಕ್ ಮಾಡಿರದವರಿಗೆ ಕೇಂದ್ರದಿಮದ ರಿಲೀಫ್ ಸಿಕ್ಕಂತಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅಂಚೆ ಇಲಾಖೆಯ ಹೊಸ ಯುಗ ಆರಂಭ, ಲಾಜಿಸ್ಟಿಕ್ಸ್ ಸೇವೆಗೆ ಎಂಟ್ರಿ ಮೊದಲ ಡೆಲಿವರಿ ಯಶಸ್ವಿ
ರಿಯಲ್‌ ಆಗಿ, ಜೊತೆಯಾಗಿ ಹೊಸ ಜರ್ನಿ ಆರಂಭಿಸಿದ Neenadhe Naa Serial ದಿಲೀಪ್‌ ಶೆಟ್ಟಿ, ರಮಿಕಾ ಶಿವು; ವೀಕ್ಷಕರಿಂದ ಶುಭಾಶಯ