ಬದ್ರಿನಾಥ ದೇವಾಲಯಕ್ಕೆ ಅಂಬಾನಿ ಬೃಹತ್ ದೇಣಿಗೆ

Published : May 26, 2019, 08:15 PM IST
ಬದ್ರಿನಾಥ ದೇವಾಲಯಕ್ಕೆ ಅಂಬಾನಿ ಬೃಹತ್ ದೇಣಿಗೆ

ಸಾರಾಂಶ

ದೇಶದ ನಂಬರ್ 1 ಶ್ರೀಮಂತ ಮುಖೇಶ್ ಅಂಬಾನಿ ಬದರಿನಾಥ ದೇವಾಲಯಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದ್ದಾರೆ.

ಚಮೋಲಿ[ಮೇ. 26]  ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಶನಿವಾರ ಬದ್ರಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.ಭೇಟಿ ವೇಳೆ ಶ್ರೀಗಂಧ ಮತ್ತು ಕೇಸರಿ ಖರೀದಿಗಾಗಿ 2 ಕೋಟಿ ರೂ. ಕಾಣಿಕೆ ಅರ್ಪಿಸಿದ್ದಾರೆ.

ದೇವಸ್ಥಾನಕ್ಕೆ ಆಗಮಿಸಿದ ಅಂಬಾನಿ ಅವರನ್ನು ಬದ್ರಿನಾಥ ಕೇದಾರನಾಥ ದೇವಸ್ಥಾನ ಸಮಿತಿ (ಬಿಕೆಟಿಸಿ)ಯ ಕಾರ್ಯನಿರ್ವಹಕ ಅಧಿಕಾರಿ ಮೊದಲು ಬರಮಾಡಿಕೊಂಡರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದ ಪೂಜೆಗೆ ಬೇಕಾಗುವ ಶ್ರೀಗಂಧ ಪೂರೈಸಲು ತಮ್ಮ ತಂದೆ ಧೀರೂಭಾಯಿ ಅಂಬಾನಿ ಹೆಸರಲ್ಲಿ ತಮಿಳುನಾಡಿನ ಶ್ರೀಗಂಧ ಅರಣ್ಯದಲ್ಲಿ ಭೂಮಿ ಖರೀದಿಸಿ ನೀಡುತ್ತೇನೆ ಎಂಬ ಭರವಸೆಯನ್ನು ಇದೇ ವೇಳೆ ಅಂಬಾನಿ ನೀಡಿದರು.

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಹ ದೇವಾಲಯಕ್ಕೆ ಭೇಟಿ ನೀಡಿದ್ದರು. ಮೇ. 10 ರಿಂದ ಬದ್ರಿನಾಥ ದೇವಾಲಯ ಪ್ರವಾಸಿಗರ ದರ್ಶನಕ್ಕೆ ತೆರೆದುಕೊಂಡಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಮದುವೆ ವ್ಲಾಗ್ ಪೋಸ್ಟ್ ಮಾಡಿ ಕೋಟಿ ಬಾಚಿಕೊಂಡ ವ್ಲಾಗರ್