ಇನ್ನೂ ಮುಗಿದಿಲ್ಲ ಎಲೆಕ್ಷನ್ ಕನವರಿಕೆ: ಪೆಟ್ರೋಲ್ ದರ ಸೈಲೆಂಟಾಗಿ ಏರಿಕೆ!

Published : May 24, 2019, 01:41 PM IST
ಇನ್ನೂ ಮುಗಿದಿಲ್ಲ ಎಲೆಕ್ಷನ್ ಕನವರಿಕೆ: ಪೆಟ್ರೋಲ್ ದರ ಸೈಲೆಂಟಾಗಿ ಏರಿಕೆ!

ಸಾರಾಂಶ

ಮುಗಿದ ಲೋಕಸಭಾ ಚುನಾವಣೆ ಎಂಬ ಯುದ್ಧ| ಪ್ರಧಾನಿ ಮೋದಿಗೆಆಶೀರ್ವಾದ ನೀಡಿ ಮನೆ ಸೇರಿದ ಮತದಾರ| ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಏರಿಕೆ| ದೇಶದ ಮಹಾನಗರಗಳಲ್ಲಿ ಏರಿಕೆ ಕಂಡ ತೈಲದರ|

ನವದೆಹಲಿ(ಮೇ.24): ಲೋಕಸಭೆ ಗುಂಗಿನಲ್ಲಿದ್ದ ದೇಶ, ಇದೀಗ ಹೊಸ ಸರ್ಕಾರವನ್ನು ಆಯ್ಕೆ ಮಾಡಿ ನಿರಮ್ಮಳವಾಗಿದೆ. ಮುಂದಿನ ಐದು ವರ್ಷಗಳ ಕಾಲ ಪ್ರಧಾನಿ ಮೋದಿ ಅವರಿಗೆ ಆಶೀರ್ವಾದ ನೀಡಿ ಮತದಾರ ಮನೆ ಸೇರಿಕೊಂಡಿದ್ದಾನೆ.

ಈ ಮಧ್ಯೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಏರಿಕೆಯಾಗಿರುವುದೇ ಪೆಟ್ರೋಲ್, ಡೀಸೆಲ್, ಬೆಲೆಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.

ದೇಶದ ಮಹಾನಗರಗಳಲ್ಲಿ ಪೆಟ್ರೋಲ್, ಡಿಸೇಲ್ ದರದತ್ತ ಗಮನಹರಿಸುವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ

ಪೆಟ್ರೋಲ್: 71.39 ರೂ.

ಡೀಸೆಲ್: 66.45 ರೂ.

ವಾಣಿಜ್ಯ ರಾಜಧಾನಿ ಮುಂಬೈ

ಪೆಟ್ರೋಲ್: 77 ರೂ.

ಡೀಸೆಲ್: 69.63 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ

ಪೆಟ್ರೋಲ್: 73.46 ರೂ.

ಡೀಸೆಲ್: 68.21 ರೂ.

ತಮಿಳುನಾಡು ರಾಜಧಾನಿ ಚೆನ್ನೈ

ಪೆಟ್ರೋಲ್: 74.01 ರೂ.

ಡೀಸೆಲ್: 70.07 ರೂ.

ರಾಜ್ಯ ರಾಜಧಾನಿ ಬೆಂಗಳೂರು

ಪೆಟ್ರೋಲ್: 73.57 ರೂ.

ಡೀಸೆಲ್: 68.45 ರೂ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!