
Reliance Jio ದೀಪಾವಳಿಗೆ ಒಂದು ದಿನ ಮೊದಲೇ ಜಿಯೋ ಬಳಕೆದಾರರಿಗೆ ಭರ್ಜರಿ ಗಿಫ್ಟ್ ನೀಡಿದೆ. ಇದೇ ಮೊದಲ ಬಾರಿಗೆ ಬರೋಬ್ಬರಿ 10,000 ರೂ. ಬೆಲೆಯ ಮೂರು ವರ್ಷಗಳ ಅನ್‌ಲಿಮಿಟೆಡ್ ಪ್ಲಾನ್ ಲಾಂಚ್ ಮಾಡಿದೆ. ಅಂದರೆ ಗ್ರಾಹಕರು ಒಮ್ಮೆ ಈ ಪ್ಲಾನ್ ರಿಚಾರ್ಜ್ ಮಾಡಿಸಿದರೆ ಮುಂದಿನ ಮೂರು ವರ್ಷಗಳವರೆಗೆ ಮತ್ತೆ ರಿಚಾರ್ಜ್ ಮಾಡಿಸುವ ಗೊಡವೆಯೇ ಬರೋಲ್ಲ. ನಿರಂತರ ಫೋನ್ ಕಾಲ್, ಮನರಂಜನೆ, ಓಟಿಟಿ ಸ್ಟ್ರೀಮಿಂಗ್, ಸಾಫ್ಟ್‌ವೇರ್ ಅಪ್ಡೇಟ್, ಕ್ಲೌಡ್ ಸ್ಟೋರೇಜ್ ಇನ್ನು ಅನೇಕ ಪ್ರಯೋಜನಗಳನ್ನು ಒಂದೇ ರಿಚಾರ್ಜ್ ಪ್ಲಾನ್‌ನಲ್ಲಿ ಪಡೆಯಬಹುದು.
ಪದೇ ಪದೆ ರಿಚಾರ್ಜ್ ಮಾಡಿಸುವ ಬದಲು ಒಮ್ಮೆ ರಿಚಾರ್ಜ್ ಮಾಡಿಸುವುದರಿಂದ ಮುಂದಿನ ಮೂರು ವರ್ಷಗಳವರೆಗೆ ಮೊಬೈಲ್ ವ್ಯಾಲಿಡಿಟಿ ಮುಗಿತಾ, ಡಾಟಾ ಖಾಲಿ ಆಯ್ತಾ ಅಂತಾ ಚೆಕ್ ಮಾಡುವ ಪ್ರಮೇಯವೇ ಬರುವುವದಿಲ್ಲ. ದೀರ್ಘಾವಧಿಯವರೆಗೆ ವ್ಯಾಲಿಡಿಟಿಗಾಗಿ ಈ ರಿಚಾರ್ಜ್ ಪ್ಲಾನ್ ವಿನ್ಯಾಸಗೊಳಿಸಲಾಗಿದೆ ಎಂದು ಜಿಯೋ ಹೇಳಿದೆ. ಈಗ ರಿಚಾರ್ಜ್ ಮಾಡಿಸುವುದರಿಂದ ಪ್ರಸ್ತುತ ಸುಂಕದ ಬೆಲೆ(Tariff price), ಆಫರ್‌ಗಳನ್ನು ಮುಂದಿನ 36 ತಿಂಗಳವರೆಗೆ ಪಡೆಯಬಹುದು.
ಜಿಯೋ 10,000 ಬೆಲೆಯ ರಿಚಾರ್ಜ್ ಪ್ಲಾನ್ ಹೇಗಿದೆ, ಆಫರ್‌ಗಳೇನು ಎಂದರೆ ಒಮ್ಮೆ 10,000 ರೂಪಾಯಿ ಬೆಲೆ ಪ್ಲಾನ್ ರಿಚಾರ್ಜ್ ಮಾಡಿಸಿದರೆ ಮೂರು ವರ್ಷಗಳವರೆಗೆ ಅನ್‌ಲಿಮಿಟೆಡ್ ಪ್ರಯೋಜನ ಪಡೆಯಬಹುದು. ಇದು ಇಂದಿನಿಂದ ಅಂದರೆ(ನವೆಂಬರ್ 7) ದೇಶಾದ್ಯಂತ ಬಿಡುಗಡೆಯಾಗಿದೆ. Myjio ಅಪ್ಲಿಕೇಶನ್ ಅಥವಾ ಅಧಿಕೃತ jio.com ಪೋರ್ಟಲ್ ಮೂಲಕ ರೀಚಾರ್ಜ್ ಮಾಡಿಸಬಹುದು. ನಿಮಗೆ ಆನ್‌ಲೈನ್ ರೀಚಾರ್ಜ್ ತಿಳಿಯದಿದ್ದರೆ ಸಮೀಪದ ಜಿಯೋ ರಿಚಾರ್ಜ್ ಸೌಲಭ್ಯವಿರುವ ಅಂಗಡಿಗಳು, ಮೊಬೈಲ್ ಸರ್ವಿಸ್, ರಿಚಾರ್ಜ್ ಮಾಡುವ ಅಂಗಡಿಗಳಲ್ಲೂ ಈ ಪ್ಲಾನ್ ರಿಚಾರ್ಜ್ ಮಾಡಿಸಬಹುದು
ರಿಲಯನ್ಸ್ ಜಿಯೋ ಹೊಸ ಪ್ಲಾನ್ 10,000 ರೂಪಾಯಿ ಬೆಲೆ ರಿಚಾರ್ಜ್ ಮಾಡಿಸುವುದರಿಂದ ನೀವು ಮೂರು ವರ್ಷಗಳವರೆಗೆ ವ್ಯಾಲಿಡಿಟಿ ಪಡೆಯುವಿರಿ, ಈ ವ್ಯಾಲಿಡಿಟಿ ಮುಗಿಯುವವರಿಗೆ ಅನಿಯಮಿತ ಕರೆ ಅಷ್ಟೇ ಅಲ್ಲದೆ ಹಲವು ಸೌಲಭ್ಯಗಳನ್ನು ಇದರಲ್ಲಿ ಪಡೆಯಬಹುದು. ಅವುಗಳು ಯಾವ್ಯಾವು ಎಂದು ಕೆಳಗಿನ ಪಟ್ಟಿಯಲ್ಲಿ ವಿವರಿಸಲಾಗಿದೆ.
ಮೂರು ವರ್ಷಗಳ ವ್ಯಾಲಿಡಿಟಿ ಇರುವ ಈ ರಿಚಾರ್ಜ್ ಪ್ಲಾನ್ ಮಾಡಿಸುವುದರಿಂದ ಪದೇಪದೆ ರೀಚಾರ್ಜ್ ಮಾಡಿಸುವುದು ತಪ್ಪುತ್ತದೆ, ಇಂಟರ್‌ನೆಟ್ ಸ್ಲೋ ಸಮಸ್ಯೆ ಇಲ್ಲ, 5G ಹೈ-ಸ್ಪೀಡ್ ನೆಟ್ವರ್ಕ್ ಜೊತೆಗೆ ಜಿಯೋ ಎಐ ಕ್ಲೌಡ್ ಸೌಲಭ್ಯವೂ ಸಿಗುತ್ತದೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.