ಬ್ರಿಟನ್‌ ಐತಿಹಾಸಿಕ ಕಂಟ್ರಿ ಕ್ಲಬ್ ಹಾಗೂ ಗಾಲ್ಫ್ ರೆಸಾರ್ಟ್ ಖರೀದಿಸಿದ ಮುಕೇಶ್ ಅಂಬಾನಿ!

By Suvarna NewsFirst Published Apr 23, 2021, 6:31 PM IST
Highlights

ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್ ಇಂಡಸ್ಟ್ರಿ ಲಿಮಿಟೆಡ್ ತನ್ನ ಉದ್ಯಮವನ್ನು ವಿಸ್ತರಿಸುತ್ತಿದೆ. ಇದೀಗ ಬ್ರಿಟನ್‌ನ ಐಹಿತಾಸಿಕ ಕಂಟ್ರಿ ಕ್ಲಬ್ ಹಾಗೂ ಗಾಲ್ಫ್ ರೆಸಾರ್ಟ್ ಖರೀದಿ ಮಾಡಿದೆ. ಬರೋಬ್ಬರಿ 592 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿವೆ.

ಮುಂಬೈ(ಏ.23): ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಂದಾಗಿರುವ ಭಾರತದ ಮಕೇಶ್ ಅಂಬಾನಿ ಕೊರೋನಾ ಸಂಕಷ್ಟದ ಕಾಲದಲ್ಲೂ ತಮ್ಮ ಆದಾಯ ವೃದ್ಧಿಸುವ ಹಲವು ಉದ್ಯಮಗಳನ್ನು ವಿಸ್ತರಿಸಿದ್ದಾರೆ. ಇದೀಗ ಬ್ರಿಟನ್‌ನ ಐತಿಹಾಸಿಕ ಕಂಟ್ರಿ ಕ್ಲಬ್ ಹಾಗೂ ಐಷರಾಮಿ ಗಾಲ್ಫ್ ರೆಸಾರ್ಟ್ ಸ್ಟೋಕ್ ಪಾರ್ಕ್ ಖರೀದಿಸಿದ್ದಾರೆ. 

ಜಾಕ್‌ ಮಾ ಹಿಂದಿಕ್ಕಿ ಮುಕೇಶ್‌ ಮತ್ತೆ ಏಷ್ಯಾ ನಂ.1 ಶ್ರೀಮಂತ!.

ಮುಕೇಶ್ ಅಂಬಾನಿಯ ರಿಲಾಯನ್ಸ್ ಇಂಡಸ್ಟ್ರಿ ಲಿಮಿಡೆಡ್ ಒಟ್ಟು 57 ಮಿಲಿಯನ್ ಪೌಂಡ್ ಹಣ ನೀಡಿ ಈ ಖರೀದಿ ಮಾಡಲಾಗಿದೆ. ಭಾರತೀಯ ರೂಪಾಯಿಗಳಲ್ಲಿ ಸುಮಾರು 592 ಕೋಟಿ ರೂಪಾಯಿ.  ಈ ಖರೀದಿಯಿಂದ ರಿಲಯನ್ಸ್ ಇಂಡಸ್ಟ್ರಿ ಇದೀಗ ಹೊಟೆಲ್ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿದೆ.

ಹುರನ್ ವಿಶ್ವ ಶ್ರೀಮಂತರ ಪಟ್ಟಿ: 6.09 ಲಕ್ಷ ಕೋಟಿ ಸಂಪತ್ತು ಹೊಂದಿರುವ ಅಂಬಾನಿಗೆ 8ನೇ ಸ್ಥಾನ!

ಸದ್ಯ ಖರೀದಿಸಿರುವ ಬ್ರಿಟನ್‌ನ ಕಂಟ್ರಿ ಕ್ಲಬ್ ಹಾಗೂ ಗಾಲ್ಫ್ ರೆಸಾರ್ಟ್, 27 ಗಾಲ್ಫ್ ಕೋರ್ಸ್, 49 ಕೊಠಡಿಗಳ ಐಷಾರಾಮಿ ಹೊಟೆಲ್, 13 ಟೆನಿಸ್ ಕೋರ್ಟ್ ಹಾಗೂ 14 ಎಕರೆ ಪ್ರದೇಶದಲ್ಲಿನ ಪಾರ್ಕ್ ಒಳಗೊಂಡಿದೆ.  ಉದ್ಯಾನವನದ ಮಧ್ಯದಲ್ಲಿ ಜಾರ್ಜಿಯನ್ ಯುಗದ ಭವನವನ್ನು ಹೊಂದಿದೆ.

ಇತ್ತೀಚೆಗೆ ಮುಕೇಶ್ ಅಂಬಾನಿ ಬ್ರಿಟನ್‌ನ ಹ್ಯಾಮ್ಲಿಸ್ ಆಟಿಕೆ ಮಳಿಗೆ ಖರೀದಿಸಿದ್ದರು. ಇದೀಗ ಬ್ರಿಟನ್‌ನ ಐಷಾರಾಮಿ ರೆಸಾರ್ಟ್ ಕೂಡ ಖರೀದಿಸಿ ತನ್ನ ಉದ್ಯಮ ಸಾಮ್ರಾಜ್ಯ ವಿಸ್ತರಿಸುತ್ತಿದ್ದಾರೆ.

click me!