ಚೀನಾಗೆ ಗುಡ್‌ ಬೈ ಹೇಳ್ತಿವೆ ಕಂಪನಿಗಳು, ಪಲಾಯನ ತಡೆಯಲು ಡ್ರ್ಯಾಗನ್ ಹರಸಾಹಸ!

Published : Apr 20, 2021, 11:29 AM ISTUpdated : Apr 20, 2021, 11:32 AM IST
ಚೀನಾಗೆ ಗುಡ್‌ ಬೈ ಹೇಳ್ತಿವೆ ಕಂಪನಿಗಳು, ಪಲಾಯನ ತಡೆಯಲು ಡ್ರ್ಯಾಗನ್ ಹರಸಾಹಸ!

ಸಾರಾಂಶ

ಚೀನಾದಿಂದ ವಿದೇಶೀ ಕಂಪನಿಗಳ ಪಲಾಯನ| ಡ್ರ್ಯಾಗನ್‌ ಮುಷ್ಠಿಯಿಂದ ತಮ್ಮನ್ನು ತಾವು ಮುಕ್ತಗೊಳಿಸಲಾರಂಭಿಸಿ ಕಂಪನಿಗಳು| ಕೊರೋನಾ ಬಳಿಕ ಆರ್ಥಿಕ ಚೇತರಿಕೆ ಮೇಲೂ ಭಾರೀ ಪ್ರಭಾವ

ಬೀಜಿಂಗ್(ಏ.20): ಚೀನಾದಿಂದ ವಿದೇಶೀ ಕಂಪನಿಗಳ ಪಲಾಯನ ಮುಂದುವರೆದಿದೆ. ಬಹಳ ವೇಗವಾಗಿ ಕಂಪನಿಗಳು ಡ್ರ್ಯಾಗನ್‌ ಮುಷ್ಠಿಯಿಂದ ತಮ್ಮನ್ನು ತಾವು ಮುಕ್ತಗೊಳಿಸಲಾರಂಭಿಸಿವೆ. ಇದರಿಂದಾಗಿ ಕೊರೋನಾ ಬಳಿಕ ಆರ್ಥಿಕ ಚೇತರಿಕೆ ಮೇಲೂ ಭಾರೀ ಪ್ರಭಾವ ಬೀರಲಾರಂಭಿಸಿದೆ. ಕಂಪನಿಗಳು ಹೀಗೆ ಏಕಾಏಕಿ ತಮ್ಮ ರಾಷ್ಟ್ರ ತೊರೆಯುತ್ತಿರುವುದರಿಂದ ವಿದೇಶೀ ಮಾರುಕಟ್ಟೆ ಮೇಲೆ ಚೀನಾ ಅವಲಂಭನೆ ಕಡಿಮೆಗೊಳಿಸುವ ಗುರು ಇಟ್ಟುಕೊಂಡು ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಜಾರಿಗೊಳಿಸಿದ್ದ,  Dual circulation policyಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಜಿನ್‌ಪಿಂಗ್ ಸರ್ಕಾರ ಕಂಪನಿಗಳ ಪಲಾಯನ ತಡೆಯಲು ಎಲ್ಲಾ ರೀತಿಯ ಯತ್ನ ನಡೆಸುತ್ತಿದೆ. 

ಚೀನಾ ಬಿಟ್ಟು ಬರುವ ಕಂಪನಿಗೆ ಭಾರತದಲ್ಲಿ 4.6 ಲಕ್ಷ ಹೆಕ್ಟೇರ್‌ ಭೂಮಿ ಗುರುತು!

ನವೆಂಬರ್‌ 2020ರಲ್ಲಿ ಅಮೆರಿಕನ್ ಚೇಂಬರ್‌ ಆಫ್‌ ಕಾಮರ್ಸ್‌ ಶಾಂಘೈನಲ್ಲಿ ಚೀನಾ ಬ್ಯುಸಿನೆಸ್‌ ರಿಪೋರ್ಟ್‌ ಬಿಡುಗಡೆಗೊಳಿಸಿತ್ತು. ಈ ವರದಿಯಲ್ಲಿ 346 ಸದಸ್ಯರು, ಇಲ್ಲಿನ ಶೇ. 71% ಕಂಪನಿಗಳು ತಾವು ಚೀನಾದಿಂದ ಹೊರಗೆ ಉತ್ಪಾದನೆ ಮಾಡುವುದಿಲ್ಲ ಎಂಬ ಸಂಕೇತ ನೀಡಿವೆ ಎಂದಿದ್ದರು. ಈ ವರದಿಯನ್ವಯ ವಿದೇಶೀ ಕಂಪನಿಗಳು ಚೀನಾದಲ್ಲೇ ತಮ್ಮ ಉದ್ಯಮ ಮುಂದುವರೆಸುವ ಇಚ್ಛೆ ಹೊಂದಿದ್ದವು.

ಸಮೀಕ್ಷೆ ಹೇಳೋದೇನು?

ಇದೇ ರೀತಿ 2021 ರ ಜನವರಿ 28ರಂದು ಬೀಜಿಂಗ್‌ನ Caixin ಎಂಬ ಪ್ರಸಿದ್ಧ ಆನ್‌ಲೈನ್ ಬ್ಯುಸಿನೆಸ್‌ ನಿಯತಕಾಲಿಕೆ, ಇಬ್ಬರು ಪ್ರಮುಖ ಚೀನಾದ ವ್ಯಾಪಾರ ಸಲಹೆಗಾರರಿಂದ op-ed ಪ್ರಕಟಿಸಿತ್ತು. ಇದರಲ್ಲಿ ಚೀನಾದಿಂದ ಹೊರ ಹಾರಲು ಬಯಸುತ್ತಿರುವ ಉತ್ಪಾದನಾ ವಿಮಾನಗಳು ಬಹಳಷ್ಟಿವೆ ಎನ್ನಲಾಗಿತ್ತು. AmCham ಸರ್ವೆಯನ್ನು ಆಧಾರವಾಗಿಟ್ಟುಕೊಂಡು ಈ ಇಬ್ಬರು ಸಲಹೆಗಾರರು ಹೀಗೆ ವಾದಿಸಿದ್ದರು. 

2020ರಲ್ಲಿ ಚೀನಾದ ಆರ್ಥಿಕತೆ ಶೇ.2.3 ಬೆಳವಣಿಗೆ: ಭಾರತ ಸೇರಿದಂತೆ ಎಲ್ಲಾ ಪ್ರಮುಖ ಆರ್ಥಿಕತೆ ಕುಸಿತ!

ಆದರೆ 2020ರಲ್ಲಿ, ಅಂದರೆ AmCham ಸಂಮೀಕ್ಷೆಯ ಸುಮಾರು ಒಂದು ವರ್ಷದ ಮೊದಲು ದ ಇಕನಾಮಿಸ್ಟ್‌ 'ಅಮೆರಿಕ ಹಾಗೂ ಚೀನಾ ನಡುವಿನ ವ್ಯಾಪಾರ ಒಪ್ಪಂದಿಂದ ಮೂರ್ಖರಾಗಬೇಡಿ. ವಿಶ್ವದ ಅಅತೀ ದೊಡ್ಡ ಬ್ರೇಕಪ್‌ ಆಗಲಿದೆ' ಎಂಬ ಶೀರ್ಷಕೆಯಡಿ ಲೇಖನವೊಂದನ್ನು ಪ್ರಕಟಿಸಿತ್ತು. ಇದರಲ್ಲಿ ವಿಶ್ವದ ಅತ್ಯಂತ ಮಹತ್ವಪೂರ್ಣ ಸಂಬಂಧ ಐದು ದಶಕದಲ್ಲೇ ಅತ್ಯಂತ ಅಪಾಯಕಾರಿ ತಿರುವು ಪಡೆದುಕೊಂಡಿದೆ. ಇದಕ್ಕೂ ಮುನ್ನ ಹೀಗೆ ರಿಚರ್ಡ್‌ ನಿಕ್ಸನ್‌ ಹಾಗೂ ಮಾವೋ ಜೆಡಾಂಗ್‌ ಸಮಯದಲ್ಲಿ ನಡೆದಿತ್ತು ಎನ್ನಲಾಗಿತ್ತು.

2020ರಲ್ಲಿ ಪ್ರಿನ್ಸ್‌ ಘೋಷ್‌ ಫೋರ್ಬ್ಸ್‌ನಲ್ಲಿ, ದೀರ್ಘ ಕಾಲದಿಂದ ನಡೆದುಕೊಂಡು ಬಂದಿರುವ ವಿವಾದಗಳಾದ ಟ್ಯಾರಿಫ್, ಕೊರೋನಾ, ಹಾಗೂ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಚೀನಾದಿಂದ ದೊಡ್ಡ ಪ್ರಮಾಣದ ವಲಸೆ ಆರಂಭವಾಗಿದೆ. ಇದರಿಂದಾಗಿ ದೇಶದ ಉತ್ಪಾದನಾ ಪ್ರಾಬಲ್ಯದ ಕುಸಿತ ಪ್ರಾರಂಭವಾಯಿತು ಎಂದು ಹೇಳಲಾಗಿತ್ತು. ಇನ್ನು ಇದೇ ತಿಂಗಳು ಹಾಂಗ್‌ ಕಾಂಗ್‌ನ ಪ್ರಶಸ್ತಿ ವಿಜೇತ ಪತ್ರಕರ್ತ ಜೋಹಾನ್‌ ನೈಲೆಂಡರ್‌ ಕೂಡಾಆ ತಮ್ಮ The Epic Split – Why ‘Made in China’ ಎಂಬ ಪುಸ್ತಕದಲ್ಲಿ, ಚೀನಾದಲ್ಲಿ ಬದಲಾವಣೆ ಗಾಳಿ ಬೀಸಿದೆ. ಈ ಬದಲಾವಣೆ ರಾತ್ರೋ ರಾಥ್ರಿ ನಡೆದಿದ್ದಲ್ಲ. ಆದತರೆ ಎಲ್ಲವೂ ಬದಲಾಗುತ್ತಿರುವುದು ನಿಜ ಎಂದಿದ್ದರು.

ಆಟಿಕೆ ವಲಯಕ್ಕೆ ಬಜೆಟ್‌ನಲ್ಲಿ ವಿಶೇಷ ನೀತಿ: ಚೀನಾ ಆಟಿಕೆಗೆ ಸಡ್ಡು!

ಚೀನಾದಿಂದ ಹೊರ ಹೋಗುತ್ತಿವೆಯಾ ಕಂಪನಿಗಳು?

ಹಾಗಾಧ್ರೆ ನಿಜಕ್ಕೂ ಕಂಪನಿಗಳು ಚೀನಾ ತೊರೆಯುತ್ತಿವೆಯಾ? ಇಲ್ಲಿ ಯಾರ ಮಾತು ನಿಜ, ಯಾರ ಮಾತು ಸುಳ್ಳು ಎಂದು ತಿಳಿದುಕೊಳ್ಳಲು AmCham  ಶಾಂಘೈನ ಸಮೀಕ್ಷೆಯಲ್ಲಿ ಯಾರು ಭಾಗವಹಿಸಿದ್ದರೆಂಬುವುದನ್ನು ತಿಳಿದುಕೊಳ್ಳುವುದು ಅಗತ್ಯ. ಈ ಸಮೀಕ್ಷೆಯಲ್ಲಿ ಭಾಗವಹಿಸಿದ 346ರ ಪೈಕಿ 200 ಮಂದಿ ಉತ್ಪಾದಕರಾಗಿದ್ದರು. ಇವರಲ್ಲಿ 141 ಮಂದಿ ಚೀನಾದಿದ ಹೊರಹೋಗುವ ಯಾವುದೇ ಯೋಜನೆ ಇಲ್ಲ ಎಂದಿದ್ದರು. ಆದರೆ 58 ಮಂದಿ ಉತ್ಪಾದಕರು ತಮ್ಮ ವ್ಯವಹಾರವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಚೀನಾದಿಂದ ಹೊರಗೊಯ್ಯುವುದಾಗಿ ಹೇಳಿದ್ದರು. ಈ ಮೂಲಕ ಸುಮಾರು ಮೂರನೇ ಒಂದು ಭಾಗದಷ್ಟು ಉತ್ಪಾದಕರು ಚೀನಾವನ್ನು ಈಗಾಗಲೇ ಬಿಡಲು ನಿರ್ಧರಿಸಿದ್ದಾರೆಂಬುವುದು ಸ್ಪಷ್ಟವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌