
ಮುಂಬೈ(ಆ.24): ಇತ್ತೀಚಿಗಷ್ಟೇ ಮುಖೇಶ್ ಅಂಬಾನಿ ಸಾರಥ್ಯದ ರಿಲಯನ್ಸ್ ಇಂಡಸ್ಟ್ರೀಸ್, ಷೇರು ಮಾರುಕಟ್ಟೆಯ ಮೌಲ್ಯದಲ್ಲಿ ಅಗ್ರ ಸ್ಥಾನಕ್ಕೇರಿ ದೇಶದ ಕಾರ್ಪೋರೇಟ್ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಮೊದಲ ಬಾರಿಗೆ 8 ಲಕ್ಷ ಕೋಟಿ ರೂ. ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದ ಕಂಪನಿಯಾಗಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಇದೇ ಮೊದಲ ಬಾರಿಗೆ ಭಾರತೀಯ ಕಂಪನಿಯೊಂದು ಈ ದಾಖಲೆ ನಿರ್ಮಿಸಿದ್ದು, ಷೇರುಗಳ ಒಟ್ಟು ಮೌಲ್ಯದಲ್ಲಿ ರಿಲಯನ್ಸ್ ಹಾಗೂ ಟಾಟಾ ಸಮೂಹದ ಟಿಸಿಎಸ್ ನಡುವೆ ಸ್ಪರ್ಧೆ ಉಂಟಾಗಿದೆ. ಟಿಸಿಎಸ್ ಬಂಡವಾಳ ಮೌಲ್ಯ ಕೂಡ 7.79 ಲಕ್ಷ ಕೋಟಿ ರೂ. ಇದ್ದು, ಎರಡನೇ ಸ್ಥಾನದಲ್ಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ಸಭೆಯಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಜಿಯೊ ಗಿಗಾಫೈಬರ್ ಹಾಗೂ ಇತರ ಯೋಜನೆಗಳನ್ನು ಪ್ರಕಟಿಸಿದ ನಂತರವೇ, ಷೇರು ದರಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ.
ಅದರಂತೆ ನಿನ್ನೆ ಷೇರು ದರ ಶೇ.2ರಷ್ಟು ಏರಿದ್ದು, ಒಟ್ಟು 1,273 ರೂ ಷೇರು ದರ ದಾಖಲಾಗಿತ್ತು. ಈ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯ 8,04,089 ಕೋಟಿ ರೂ.ಗಳಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.