
ನವದೆಹಲಿ(ಆ.24): 2018-19 ರಲ್ಲಿ ಭಾರತ ಶೇ.7.5 ರಷ್ಟು ಆರ್ಧಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ ಎಂದು ಮೂಡೀಸ್ ಹೇಳಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮೂಡೀಸ್ ವರದಿ ಕೊಂಚ ನಿರಾಳ ತಂದಿದೆ.
2018-19 ನೇ ಸಾಲಿನ ಗ್ಲೋಬಲ್ ಮ್ಯಾಕ್ರೋ ಔಟ್ ಲುಕ್ ನಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯ ಮುನ್ನೋಟ ನೀಡಿರುವ ಮೂಡೀಸ್, ಕಳೆದ ಕೆಲವು ತಿಂಗಳುಗಳಿಂದ ಇಂಧನ ಬೆಲೆಯಲ್ಲಿ ಉಂಟಾಗಿರುವ ಏರಿಕೆ ತಾತ್ಕಾಲಿಕವಾಗಿ ಹಣದುಬ್ಬರವನ್ನು ಏರಿಕೆ ಮಾಡಲಿದೆ. ಆದರೆ ಆರ್ಥಿಕ ಬೆಳವಣಿಗೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ.
ಜಿ-20 ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯ ಭವಿಷ್ಯ ಅತ್ಯುತ್ತಮವಾಗಿದ್ದು, 2018 ರಲ್ಲಿ ಒಟ್ಟಾರೆ ಜಿ-20 ಬೆಳವಣಿಗೆ ಶೇ.3.3 ರಷ್ಟಿರಲಿದೆ ಹಾಗೂ 2019 ರಲ್ಲಿ ಶೇ.3.1 ರಷ್ಟಿರಲಿದೆ. ಇನ್ನು ಈಗಾಗಲೇ ಅಭಿವೃದ್ಧಿ ಸಾಧಿಸಿರುವ ರಾಷ್ಟ್ರಗಳ ಆರ್ಥಿಕತೆ 2018 ರಲ್ಲಿ ಶೇ.2.3 ರಷ್ಟು ಬೆಳವಣಿಗೆ ಸಾಧಿಸಲಿದ್ದು, 2019 ರಲ್ಲಿ ಶೇ.2 ರಷ್ಟು ಬೆಳವಣಿಗೆ ಕಾಣಲಿದೆ.
ಇನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕ ಬೆಳವಣಿಗೆ ಶೇ.5.1 ರಷ್ಟಿರಲಿದ್ದು, ಭಾರತದ ಆರ್ಥಿಕತೆ 2018-19 ರಲ್ಲಿ ಶೇ.7.5 ರಷ್ಟು ಇರಲಿದೆ ಎಂದು ಮೂಡೀಸ್ ತನ್ನ ವರದಿಯಲ್ಲಿ ಅಂದಾಜಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.