
ನವದೆಹಲಿ(ಆ.23): ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಇಲಾಖೆ ದೇಶಾದ್ಯಂತ ಸುಮಾರು 1000 ಪೋರ್ಟೆಬಲ್ ಪೆಟ್ರೋಲ್ ಪಂಪ್ ತೆರೆಯಲು ಅನುಮತಿ ನೀಡಿದೆ.
ಗ್ರಾಮೀಣ ಪ್ರದೇಶದಲ್ಲೂ ಸುಲಭವಾಗಿ ಪೆಟ್ರೋಲ್ ಮತ್ತು ಡೀಸೆಲ್ ಸಿಗಲು ಅನುಕೂಲವಾಗುವಂತೆ ಈ ಪೋರ್ಟೆಬಲ್ ಪೆಟ್ರೋಲ್ ಪಂಪ್ ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಅದರಂತೆ ಆಸಕ್ತರು ಈ ಪೋರ್ಟೆಬಲ್ ಪೆಟ್ರೋಲ್ ಪಂಪ್ ಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಒಂದು ಪೆಟ್ರೋಲ್ ಬಂಕ್ ತೆರೆಯಲು 90 ಲಕ್ಷದಿಂದ 1 ಕೋಟಿ ರೂ. ಬೇಕಾಗುತ್ತದೆ. ಅಲ್ಲದೇ ಶೇ. 80 ರಷ್ಟು ಸಾಲ ಸೌಲಭ್ಯ ಕೂಡ ಒದಗಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಸಾಮಾನ್ಯ ಪೆಟ್ರೋಲ್ ಬಂಕ್ ಗಳಿಗಿಂತ ತುಸು ಭಿನ್ನವಾಗಿರುವ ಈ ಪೋರ್ಟೆಬಲ್ ಪೆಟ್ರೋಲ್ ಪಂಪ್ ಗಳು ಗ್ರಾಮೀಣ ಪ್ರದೇಶದಲ್ಲಿ ತೈಲ ಸೇವೆ ಒದಗಿಸಲಿವೆ. ಕೇವಲ 400 ಮೀಟರ್ ಪ್ರದೇಶದಲ್ಲಿ ಈ ಪೋರ್ಟೆಬಲ್ ಪೆಟ್ರೋಲ್ ಪಂಪ್ ತೆರೆಯಲು ಸಾಧ್ಯವಿದ್ದು, ಎಲ್ಲಾ ಆಧುನಿಕ ಸೌಲಭ್ಯಗಳು ಇದರಲ್ಲಿ ಇರಲಿವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.