ಸಾವಿರಾರು ಕೋಟಿ ರೂ ನಷ್ಟದ ಬೆನ್ನಲ್ಲೇ ಶಾಕ್ ಕೊಟ್ಟ ಮುಕೇಶ್ ಅಂಬಾನಿ, ತಟ್ಟಲಿದೆ ಬಿಸಿ

Published : Mar 06, 2025, 03:23 PM ISTUpdated : Mar 06, 2025, 08:01 PM IST
ಸಾವಿರಾರು ಕೋಟಿ ರೂ ನಷ್ಟದ ಬೆನ್ನಲ್ಲೇ ಶಾಕ್ ಕೊಟ್ಟ ಮುಕೇಶ್ ಅಂಬಾನಿ, ತಟ್ಟಲಿದೆ ಬಿಸಿ

ಸಾರಾಂಶ

ಮುಕೇಶ್ ಅಂಬಾನಿ ರಿಲಯನ್ಸ್ ಕಳೆದ ಕೆಲ ದಿನಗಳಿಂದ ನಷ್ಟ ಅನುಭವಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಮುಕೇಶ್ ಅಂಬಾನಿ ಶಾಕ್ ಕೊಟ್ಟಿದ್ದಾರೆ. ಅಂಬಾನಿ ನಿರ್ಧಾರ ಬಹುತೇಕರಿಗೆ ತಟ್ಟಲಿದೆ. ಅಂಬಾನಿಯ ಶಾಕಿಂಗ್ ನಿರ್ಧಾರವೇನು?

ಮುಂಬೈ(ಮಾ.05) ಮುಕೇಶ್ ಅಂಬಾನಿಯ ರಿಲಯನ್ಸ್ ಕಳೆದ ಕೆಲ ದಿನಗಳಿಂದ ಮಾರುಕಟ್ಟೆಯಲ್ಲಿ ತಲ್ಲಣ ಎದುರಿಸುತ್ತಿದೆ. ಇದರ ಪರಿಣಾಮ ಸುಮೂರು 35 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಮುಕೇಶ್ ಅಂಬಾನಿ ತೆಗೆದುಕೊಂಡ ನಿರ್ಧಾರ ಹಲವರ ಆತಂಕಕ್ಕೆ ಕಾರಣವಾಗಿದೆ. ಹೌದು, ಭಾರತದ ಅತೀ ದೊಡ್ಡ ರಿಟೇಲ್ ಮಾರ್ಕೆಟ್ ಆಗಿರುವ ರಿಲಯನ್ಸ್ ರಿಟೇಲ್ ಇದೀಗ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಾರಣ ರಿಲಯನ್ಸ್ ರಿಟೇಲ್ ಮೌಲ್ಯ 125 ಬಿಲಿಯನ್ ಅಮೆರಿಕನ್ ಡಾಲರ್‌ನಿಂದ ಇದೀಗ 50 ಮಿಲಿಯನ್ ಅಮೆರಿಕನ್ ಡಾಲರ್‌ಗ ಇಳಿಕೆಯಾಗಿದೆ. ಇಷ್ಟೇ ಅಲ್ಲ ರಿಲಯನ್ಸ್ ಜಿಯೋ ಹಾಗೂ ಡಿಸ್ನಿ ಸ್ಟಾರ್‌ನಿಂದಲೂ ಉದ್ಯೋಗ ಕಡಿತ ಮಾಡಲಾಗುತ್ತಿದೆ.

2022ರಲ್ಲಿ ರಿಲಯನ್ಸ್ ರಿಟೇಲ್ ಆರ್ಥಿಕ ಸಂಪನ್ಮೂಲ ಕ್ರೋಢಿಕರಣದ ವೇಳೆ ಬ್ಲೂಮ್‌ಬರ್ಗ್ ಬಿಡುಗಡೆ ಮಾಡಿದ ವರದಿಯಲ್ಲಿ ರಿಲಯನ್ಸ್ ರಿಟೇಲ್ 125 ಬಿಲಿಯನ್ ಡಾಲರ್ ಮೌಲ್ಯ ಹೊಂದಿತ್ತು. ಆದರೆ ಇದೀಗ ಕೇವಲ 50 ಬಿಲಿಯನ್‌ಗೆ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಹೂಡಿಕೆದಾರರು ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಮುಕೇಶ್ ಅಂಬಾನಿ ಉದ್ಯೋಗ ಕಡಿತಕ್ಕೆ ಮುಂದಾಗಿದ್ದಾರೆ.

ಮುಕೇಶ್ ಅಂಬಾನಿ ಗ್ರಹಗತಿಗೆ ಏನಾಗಿದೆ? ಕೇವಲ 6 ಗಂಟೆಯಲ್ಲಿ 35 ಸಾವಿರ ಕೋಟಿ ರೂ ನಷ್ಟ

ರಿಲಯನ್ಸ್ ರಿಟೇಲ್ ಮಳಿಗೆ ವಿಸ್ತರಣೆ ಯೋಜನೆ ಕೈಬಿಟ್ಟಿದೆ. ಇರುವ ಮಳಿಗೆಗಳಿಂದ ನೌಕರರ ಕಡಿತಕ್ಕೆ ಮುಂದಾಗಿದೆ.ಮಾರ್ಕೆಟಿಂಗ್ ಹಾಗೂ ಪ್ರಮೋಶನ್ ಬಜೆಟ್ ಕಡಿತಗೊಳಿಸಲಾಗಿದೆ. Ajio ಆನ್‌ಲೈನ್ ಪ್ಲಾಟ್‌ಫಾರ್ಮ್ ಮೇಲೆ ಹೂಡಿಕೆ ನಿಲ್ಲಿಸಲಾಗಿದೆ. 2024ರ ಅಂತ್ಯದಿಂದ ಹೊಸ ನೇಮಕಾತಿ ಮಾಡುತ್ತಿಲ್ಲ. ಕೆಳ ಹಂತದಲ್ಲಿ ಅನಿವಾರ್ಯತೆ ಇದ್ದರೆ ಮಾತ್ರ ನೇಮಕಾತಿ ಮಾಡಲಾಗಿದೆ. ಇನ್ಯಾವುದೇ ನೇಮಕಾತಿಗೆ ರಿಲಯನ್ಸ್ ಪ್ರಮುಖ ಕಚೇರಿಯಿಂದ ಅನುಮತಿ ಪಡೆಯಬೇಕು.

ಇತ್ತ ರಿಲಯನ್ಸ್ ಜಿಯೋ ಹಾಗೂ ಸ್ಟಾರ್ ಈಗಾಗಲೇ ವೀಲಿನಗೊಂಡಿದೆ, ಡಿಸ್ನಿ ಸ್ಟಾರ್ ಖರೀದಿಸಿದ ಜಿಯೋ ಇದೀಗ ಭಾರತ ಹಾಗೂ ಏಷ್ಯಾದಲ್ಲಿ ಕ್ರೀಡೆ ನೇರಪ್ರಸಾರ ಮಾಡುತ್ತಿದೆ. ಇದೀಗ ಎರಡೂ ಕಂಪನಿಗಳ ವಿಲೀನದ ಬಳಿಕ ಇದೀಗ ಇಲ್ಲೂ ಉದ್ಯೋಗ ಕಡಿತ ಆರಂಭಗೊಂಡಿದೆ. ಜಿಯೋ ಸ್ಟಾರ್‌ನಿಂದ 1,100 ಉದ್ಯೋಗಿಗಳ ಕಡಿತಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದ ಕ್ರೀಡಾ ನೇರಪ್ರಸಾರ ವಾಹಿನಿ ಹಾಗೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಿಂದ ಹಲವು ಉದ್ಯೋಗ ಕಡಿತವಾಗುತ್ತಿದೆ. 

ರಿಲಯನ್ಸ್ ಇಂಡಸ್ಟ್ರೀ ಉದ್ಯೋಗ ಕಡಿತದತ್ತ ಅತೀ ದೊಡ್ಡ ನಿರ್ಧಾರಗಳನ್ನು ಇದುವರೆಗೆ ತೆಗದುಕೊಂಡಿಲ್ಲ. ಪ್ರಮುಖವಾಗಿ ಮುಕೇಶ್ ಅಂಬಾನಿ ನೇತೃತ್ವದಲ್ಲಿನ ರಿಲಯನ್ಸ್ ಗ್ರೂಪ್ ವಿಸ್ತರಣೆ, ಅಭಿವೃದ್ಧಿಯತ್ತವೇ ಸಾಗಿದೆ. ಆದರೆ ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿನ ತಲ್ಲಣದಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಇದರ ಜೊತೆಗೆ ರಿಲಯನ್ಸ್ ರಿಟೇಲ್ ಹಾಗೂ ಜಿಯೋ ಸ್ಟಾರ್‌ನಲ್ಲಿ ಮಾನವ ಸಂಪನ್ಮೂಲ ಹೊರೆಯಾಗುತ್ತಿದೆ.


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ