ವಿದೇಶಕ್ಕೆ ಹೋಗುವಾಗ ಗಂಡಸರು, ಹೆಂಗಸರು ಎಷ್ಟು ಚಿನ್ನ ಕೊಂಡೊಯ್ಯಬಹುದು? ನಿಯಮಗಳೇನು?

Published : Mar 06, 2025, 01:48 PM ISTUpdated : Mar 06, 2025, 02:40 PM IST
ವಿದೇಶಕ್ಕೆ ಹೋಗುವಾಗ ಗಂಡಸರು, ಹೆಂಗಸರು ಎಷ್ಟು ಚಿನ್ನ ಕೊಂಡೊಯ್ಯಬಹುದು? ನಿಯಮಗಳೇನು?

ಸಾರಾಂಶ

ಭಾರತದಿಂದ ವಿದೇಶಕ್ಕೆ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗುವ ಬಗ್ಗೆ ಮಾಹಿತಿ ಇಲ್ಲಿದೆ. ಪುರುಷರು ಮತ್ತು ಮಹಿಳೆಯರು ಎಷ್ಟು ಚಿನ್ನವನ್ನು ಧರಿಸಬಹುದು, ಡಿಕ್ಲೇರೇಷನ್ ಫಾರ್ಮ್‌ನ ಮಹತ್ವ ಮತ್ತು ಅಮೆರಿಕದಿಂದ ಭಾರತಕ್ಕೆ ಸುಂಕ ರಹಿತ ಚಿನ್ನದ ಮಿತಿಗಳ ಬಗ್ಗೆ ತಿಳಿಯಿರಿ.

ಬೆಂಗಳೂರು (ಮಾ.06): ಭಾರತದಿಂದ ವಿದೇಶಕ್ಕೆ ಹೋಗುವಾಗ ಮೈತುಂಬಾ ಆಭರಣಗಳನ್ನು ಧರಿಸಿಕೊಂಡು ಹೋಗಬಹುದೇ? ಪುರುಷರು ಮತ್ತು ಮಹಿಳೆಯರು ತಲಾ ಎಷ್ಟು ಚಿನ್ನವನ್ನು ಮೈಮೇಲೆ ಹಾಕಿಕೊಂಡು ಹೋಗಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ನಮ್ಮ ದೇಶದಿಂದ ಅನೇಕ ಜನರು ವೊವಿಧ ಕಾರಣಗಳಿಗೆ ವಿದೇಶಕ್ಕೆ ಹೋಗಿ ಬರುತ್ತಾರೆ. ಕೆಲವರು ಪ್ರವಾಸ, ಇನ್ನು ಕೆಲವರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ಇನ್ನು ಕೆಲವರು ಸಂಬಂಧಿಕರನ್ನು ಭೇಟಿಯಾಗಲು, ಉದ್ಯಮ ವ್ಯವಹಾರ, ಕ್ರೀಡೆಗಳ ವೀಕ್ಷಣೆ ಇತ್ಯಾದಿ ಕಾರಣಗಳಿಗೆ ಹೋಗಿ ಬರುತ್ತಾರೆ. ಆದರೆ, ವಿದೇಶಕ್ಕೆ ಹೋಗುವಾಗ ಮಹಿಳೆಯರರು ಮತ್ತು ಪುರುಷರು ಎಷ್ಟು ತೂಕದ ಮತ್ತು ಎಷ್ಟು ಮೌಲ್ಯದ ಚಿನ್ನಾಭರಣವನ್ನು ಕೊಂಡೊಯ್ಯಬಹುದು ಎಂಬ ಮಾಹಿತಿ ಬಹಳಷ್ಟು ಜನರಿಗೆ ಮಾಹಿತಿಯೇ ಇರುವುದಿಲ್ಲ. ಸ್ವತಃ ಚಿನ್ನಾಭರಣ ವ್ಯಾಪಾರಿಯೂ ಆಗಿರುವ ಶ್ರೀ ಸಾಯಿ ಗೋಲ್ಡ್ ಜ್ಯೂವೆಲ್ಲರಿ ಮಳಿಗೆಯ ಮಾಲೀಕ ಶರವಣ ಅವರು ವಿದೇಶಕ್ಕೆ ಪುರುಷರು ಮತ್ತು ಮಹಿಳೆಯರು ಎಷ್ಟು ಚಿನ್ನಾಭರಣವನ್ನು ಧರಿಸಿಕೊಂಡು ಹೋಗಬಹುದು ಎಂಬ ಮಾಹಿತಿಯನ್ನು ವಿವರವಾಗಿ ತಿಳಿಸಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಾಗೂ ಸಾಯಿ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಶರವಣ ಅವರು, ಒಬ್ಬ ಮಹಿಳೆ ಭಾರತದಿಂದ ವಿದೇಶಕ್ಕೆ ಹೋಗಲು 250 ಗ್ರಾಂ ಚಿನ್ನವನ್ನು ಧರಿಸಿಕೊಂಡು ಹೋಗಬಹುದು. ಇನ್ನು ಪುರುಷರು 100 ಗ್ರಾಂ ಚಿನ್ನವನ್ನು ಧರಿಸಿಕೊಂಡು ಹೋಗಬಹುದು. ಇದನ್ನು ಕೂಡ ನಾವು ವಿದೇಶಕ್ಕೆ ಹೋಗುವ ಮೊದಲೇ ಡಿಕ್ಲೇರೇಷನ್ ಫಾರ್ಮ್‌ನಲ್ಲಿ ಮಾಹಿತಿ ನಮೂದಿಸಬೇಕು. ಇಲ್ಲವಾದಲ್ಲಿ ನೀವು ವಾಪಸ್ ಬರುವಾಗ ನಿಮ್ಮ ಚಿನ್ನಾಭರಣಕ್ಕೆ ನೀವೇ ಭಾರತೀಯ ಮೌಲ್ಯಕ್ಕೆ ತಕ್ಕಂತೆ ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ. ಇನ್ನು ಯಾವುದೇ ಮಾಹಿತಿ (ಡಿಕ್ಲೇರೇಷನ್ ಫಾರ್ಮ್) ಭರ್ತಿ ಮಾಡದೆ 50 ಸಾವಿರ ರೂ. ಮೌಲ್ಯದ ಚಿನ್ನಾಭರಣ ಧರಿಸಿಕೊಂಡು ಹೋಗಲು ಮಾತ್ರ ಅವಕಾಶ ನೀಡಬಹುದು ಎಂದು ಶರವಣ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್ ದುಬೈ ನಂಟು ಬಯಲು, 40 ಬಾರಿ ವಿದೇಶ ಪ್ರವಾಸ!

ಇನ್ನು ಪ್ರತಿಬಾರಿ ವಿದೇಶಗಳಿಗೆ ಹೋಗುವಾಗಲೂ ಒಬ್ಬ ವ್ಯಕ್ತಿ ಇಂತಿಷ್ಟು ಕೆಜಿಯಷ್ಟು ತೂಕದ ಲಗೇಜ್ ಅನ್ನು ತೆಗೆದುಕೊಂಡು ಹೋಗಲು ಅವಕಾಶ ಇರುತ್ತದೆ. ಇದಕ್ಕಿಂತ ಹೆಚ್ಚಿನ ತೂಕದ ಲಗೇಜ್ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಅದಕ್ಕೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಅದನ್ನು ಬೇರೊಂದು ಲಗೇಜ್ ಕ್ಯಾಬಿನ್‌ನಲ್ಲಿ ತುಂಬಿಕೊಂಡು ಪ್ರಯಾಣಿಕರಿಗೆ ಕೊಡಲಾಗುತ್ತದೆ.

ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಅವರು ದುಬೈಗೆ ಹೋಗಿ ಬರುವಾಗ ಗೋಲ್ಡ್ ಸ್ಮಗ್ಲಿಂಗ್ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಒಟ್ಟು 14.02 ಕೆಜಿ ಗಟ್ಟಿ ಚಿನ್ನವನ್ನು ತನ್ನ ಉಡುಪಿನಲ್ಲಿ ಇಟ್ಟುಕೊಂಡು ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಬರುವಾಗ ಸಿಕ್ಕಿಬಿದ್ದಿದ್ದಾರೆ. ಇದೀಗ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಇದೀಗ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಕೃತ್ಯದ ಹಿಂದೆ ಬೇರೆ ದಿಡ್ಡ ಕೈವಾಡಗಳು ಏನಾದರೂ ಇವೆಯೇ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಲಾಕರ್‌ನಲ್ಲಿದ್ದ ಚಿನ್ನಾಭರಣ ನಾಪತ್ತೆ! ಮನೇಲಿ ಕಳ್ಳರ ಕಾಟ ಅಂತಾ ಬ್ಯಾಂಕ್‌ನಲ್ಲಿಟ್ರೆ ಇಲ್ಲೂ ಕಳ್ರು! ಏನಿದು ಪ್ರಕರಣ?

ಅಮೆರಿಕದಿಂದ ಭಾರತಕ್ಕೆ ಸುಂಕ ರಹಿತ ಚಿನ್ನ: ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಯಾಣಿಕರು ತಮ್ಮ ಪ್ರಯಾಣದ ಸಮಯದಲ್ಲಿ ಒಂದು ನಿರ್ದಿಷ್ಟ ತೂಕದವರೆಗೆ ಚಿನ್ನವನ್ನು ಸುಂಕವಿಲ್ಲದೆ ಕೊಂಡೊಯ್ಯಲು ಅನುಮತಿ ಇದೆ. 
ಅಮೆರಿಕದಿಂದ ಭಾರತಕ್ಕೆ ಚಿನ್ನದ ಮಿತಿಯ ಕುರಿತು ಕೆಲವು ಅಂಶಗಳು ಇಲ್ಲಿವೆ.
ಪುರುಷ ಪ್ರಯಾಣಿಕರಿಗೆ 20 ಗ್ರಾಂ, ಗರಿಷ್ಠ ಮೌಲ್ಯ 50,000 ರೂ.
ಮಹಿಳಾ ಪ್ರಯಾಣಿಕರಿಗೆ, 40 ಗ್ರಾಂ, ಗರಿಷ್ಠ ಮೌಲ್ಯ ರೂ. 1,000,000 ವರೆಗೆ.
ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ಕಳೆದ ಮಕ್ಕಳು ಸಹ ಚಿನ್ನಾಭರಣಗಳ ಮೇಲೆ ಸುಂಕ ರಹಿತ ಭತ್ಯೆಗೆ ಅರ್ಹರಾಗಿರುತ್ತಾರೆ.
ಗಮನಿಸಿ: ಪ್ರತಿ ಗ್ರಾಂಗೆ ಚಿನ್ನದ ಪ್ರಸ್ತುತ ಮಾರುಕಟ್ಟೆ ಬೆಲೆ ರೂ.2500 ಕ್ಕಿಂತ ಹೆಚ್ಚಿರುವುದರಿಂದ ನೀವು 20 ಅಥವಾ 40 ಗ್ರಾಂಗಳ ನಿಯತಾಂಕವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ನಿರ್ಬಂಧವು ರೂ. 50,000 ಮತ್ತು ರೂ. 1,00,000 ಮೌಲ್ಯದಲ್ಲಿರುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!