
ಜಗತ್ತಿನ ದೊಡ್ಡ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿಯವರ ಕಿರಿಯ ಮಗ ಅನಂತ್ ಅಂಬಾನಿ ಅವರಿಗೆ ಗಡಿಯಾರಗಳೆಂದರೆ ಬಹಳ ಇಷ್ಟ. ಈಗ ಅವರು ಹಾಕಿಕೊಂಡಿರುವ ಗಡಿಯಾರ ಎಲ್ಲರ ಗಮನ ಸೆಳೆದಿದೆ.
ಭಾರತದ ಉದ್ಯಮಿ ಮುಖೇಶ್ ಅಂಬಾನಿಯವರ ಕಿರಿಯ ಮಗ ಅನಂತ್ ಅಂಬಾನಿ. ಇತ್ತೀಚೆಗೆ ಅವರು ಹಾಕಿಕೊಂಡಿದ್ದ ಗಡಿಯಾರ ಎಲ್ಲರ ಗಮನ ಸೆಳೆಯಿತು. ಅವರು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಾರೆ ಮತ್ತು ಜಿಯೋ ನಿರ್ದೇಶಕರೂ ಆಗಿದ್ದಾರೆ.
ಮುಕೇಶ್ ಅಂಬಾನಿ ಗ್ರಹಗತಿಗೆ ಏನಾಗಿದೆ? ಕೇವಲ 6 ಗಂಟೆಯಲ್ಲಿ 35 ಸಾವಿರ ಕೋಟಿ ರೂ ನಷ್ಟ
ಅನಂತ್ ಅಂಬಾನಿ ಅವರ ವಿಶೇಷ ಗಡಿಯಾರ
ಕಳೆದ ಎರಡು ದಿನಗಳ ಹಿಂದೆ, ಅವರ ಪ್ರಯತ್ನದಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ ವಂದಾರಾ ಪ್ರಾಣಿಗಳ ರಕ್ಷಣೆ ಮತ್ತು ಆರೈಕೆ ಕೇಂದ್ರವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇಲ್ಲಿ ಆಶ್ರಯವಿಲ್ಲದ ಪ್ರಾಣಿಗಳಿಂದ ಹಿಡಿದು ಗಾಯಗೊಂಡ ಪ್ರಾಣಿಗಳವರೆಗೆ, ಯಾರೂ ನೋಡಿಕೊಳ್ಳದ ಪ್ರಾಣಿಗಳನ್ನು ನೋಡಿಕೊಳ್ಳಲಾಗುತ್ತದೆ. ಇಲ್ಲಿ ಪ್ರಾಣಿಗಳಿಗೆ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಈ ಕೇಂದ್ರ ಸುಮಾರು 3,500 ಎಕರೆಗಳಲ್ಲಿ ಹರಡಿಕೊಂಡಿದೆ. ಪ್ರಾಣಿಗಳನ್ನು ಪ್ರೀತಿಸುವ ಅನಂತ್ ಅಂಬಾನಿಗೆ ಗಡಿಯಾರಗಳ ಹುಚ್ಚು ಕೂಡ ಇದೆ. ಅವರಿಗೆ ತರಹೇವಾರಿ ಗಡಿಯಾರಗಳನ್ನು ಹಾಕಿಕೊಳ್ಳುವುದು ಅಂದ್ರೆ ಇಷ್ಟ.
ಅವರು ಇತ್ತೀಚೆಗೆ ರಿಚರ್ಡ್ ಮಿಲ್ಲೆ RM 26-01 ಟೂರ್‌ಬಿಲ್ಲನ್ ಪಾಂಡಾ ಗಡಿಯಾರವನ್ನು ಹಾಕಿಕೊಂಡಿದ್ದರು. ಇದು ಪ್ರಪಂಚದಾದ್ಯಂತದ ಗಡಿಯಾರ ಪ್ರಿಯರಿಗೆ ಒಂದು ಆಕರ್ಷಕ ಗಡಿಯಾರವಾಗಿದೆ.
ಜಾಕೆಟ್ ಧರಿಸಿ ನ್ಯೂಯಾರ್ಕ್ ಲಿಂಕನ್ ಸೆಂಟರ್‌ಗೆ ಭೇಟಿ ಕೊಟ್ಟ ನೀತಾ ಅಂಬಾನಿ ಕಂಡು ದಂಗು!
ಅನಂತ್ ಅಂಬಾನಿ ಅವರ 30 ಕೋಟಿ ಗಡಿಯಾರ
ರಿಚರ್ಡ್ ಮಿಲ್ಲೆ RM 26-01 ಟೂರ್‌ಬಿಲ್ಲನ್ ಪಾಂಡಾವನ್ನು ಸುಮ್ಮನೆ ಗಡಿಯಾರ ಅಂತ ತಿಳ್ಕೊಬೇಡಿ. ಅನಂತ್ ಅಂಬಾನಿ ಏನಾದ್ರೂ ಹಾಕೊಂಡ್ರೆ ಅದ್ರಲ್ಲಿ ಏನೋ ಒಂದು ಸ್ಪೆಷಲ್ ಇರುತ್ತೆ. ಈ ಗಡಿಯಾರವನ್ನು ಕಲಾತ್ಮಕವಾಗಿ ಡಿಸೈನ್ ಮಾಡಲಾಗಿದೆ. ಈ ಗಡಿಯಾರದ ಬೆಲೆ 30 ಕೋಟಿ ರೂಪಾಯಿಗಳು.
ಈ ಗಡಿಯಾರದ ರೇಟೇಲ್ ಬೆಲೆ 5.36 ಕೋಟಿ ರೂಪಾಯಿಗಳು, ಆದರೆ ಮಾರ್ಕೆಟ್‌ನಲ್ಲಿ ಇದರ ಬೆಲೆ 30 ಕೋಟಿ ರೂಪಾಯಿಗಳು. ಈ ತರಹದ ಕೇವಲ 30 ಗಡಿಯಾರಗಳನ್ನು ಮಾತ್ರ ಇಲ್ಲಿಯವರೆಗೆ ತಯಾರಿಸಿ ಮಾರಾಟ ಮಾಡಲಾಗಿದೆ. ಗಡಿಯಾರ ಪ್ರಿಯರಿಗೆ ಈ ಗಡಿಯಾರ ಅಂದ್ರೆ ಫುಲ್ ಫೇವರಿಟ್ ಆಗಿರುತ್ತೆ, ಇದರಲ್ಲಿ ಡೌಟೇ ಇಲ್ಲ.
ಟೂರ್‌ಬಿಲ್ಲನ್ ಪಾಂಡಾ ಗಡಿಯಾರದ ವಿಶೇಷತೆ ಏನು?
ಕೇಸ್: 18 ಕ್ಯಾರೆಟ್ ಬಿಳಿ ಚಿನ್ನದ ಮೇಲೆ ವಜ್ರಗಳನ್ನು ಹಾಕಲಾಗಿದೆ
ಸ್ಟ್ರಾಪ್: ಉತ್ತಮ ಕಪ್ಪು ಚರ್ಮದಿಂದ ಮಾಡಲ್ಪಟ್ಟಿದೆ
ಬೆಝೆಲ್: ವಜ್ರಗಳನ್ನು ಹಾಕಲಾಗಿದೆ
ಡಯಲ್: ಬೆಳ್ಳಿ ಮತ್ತು ವಜ್ರದ ಮುತ್ತುಗಳಿಂದ ಮಾಡಲ್ಪಟ್ಟಿದೆ. ನೀಲಿ ಬಣ್ಣದ ಡಯಲ್ ಮೇಲೆ ಬಿದಿರಿನ ಎಲೆಗಳಿಂದ ಸುತ್ತುವರಿದ ಪಾಂಡಾ ಡಿಸೈನ್ ಇದೆ.
ಚೀನಾದ ಪಾಂಡಾ
ಕೈಯಿಂದಲೇ ಬಣ್ಣ ಹಾಕಿದ ಬಿದಿರಿನ ಎಲೆಗಳು ಗಡಿಯಾರದ ಸೌಂದರ್ಯವನ್ನು ಹೆಚ್ಚಿಸುತ್ತವೆ. ರಿಚರ್ಡ್ ಮಿಲ್ಲೆ ಕ್ಯಾಲಿಬರ್ RM26-01 ನಿಂದ ಚಲಿಸುವ ಈ ಗಡಿಯಾರದಲ್ಲಿ ಎರಡು ಟೂರ್‌ಬಿಲ್ಲನ್ ಸಬ್-ಡಯಲ್‌ಗಳಿವೆ. ಡಯಲ್ ಮೇಲಿನ ಪಾಂಡಾ ಚೀನಾದ ರಾಷ್ಟ್ರೀಯ ಚಿಹ್ನೆಯ ಸಂಕೇತವಾಗಿದೆ, ಇದು ಅಳಿವಿನಂಚಿನಲ್ಲಿರುವ ಪ್ರಭೇದಗಳ ಸಂರಕ್ಷಣಾ ಪ್ರಯತ್ನಗಳನ್ನು ತೋರಿಸುತ್ತದೆ. ಈ ಗಡಿಯಾರವು ಪ್ರಾಣಿಗಳ ರಕ್ಷಣೆಗಾಗಿ ಅನಂತ್ ಅವರ ಸಮರ್ಪಣೆಯನ್ನು ತೋರಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.