
ನವದೆಹಲಿಆ(.24): ಸಂಕಷ್ಟದಲ್ಲಿ ರಕ್ತ ಸಂಬಂಧವೇ ಸಹಾಯಕ್ಕೆ ಬರುವುದು ಎಂಬುದನ್ನು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಿಸ್ಟ್ರೀಸ್ ಸಾಬೀತುಪಡಿಸಿದೆ. ಸಹೋದರ ಅನಿಲ್ ಅಂಬಾನಿ ಒಡೆತನದ ಆರ್ ಕಾಮ್ ಕಂಪನಿ ಸಾಲದ ಸುಳಿಗೆ ಸಿಲುಕಿದ್ದು, ಅನಿಲ್ ಬೆಂಬಲಕ್ಕೆ ಮುಖೇಶ್ ದೌಡಾಯಿಸಿದ್ದಾರೆ.
ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದ ರಿಲಯನ್ಸ್ ಕಮ್ಯುನಿಕೇಷನ್ ತನ್ನ 2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ರಿಲಯನ್ಸ್ ಜಿಯೋಗೆ ಮಾರಾಟ ಮಾಡುತ್ತಿದೆ. ಖುದ್ದು ಅನಿಲ್ ಅಂಬಾನಿ ಒಡೆತನದ ಆರ್ ಕಾಮ್ ಈ ಘೋಷಣೆ ಮಾಡಿದೆ.
ಸುಮಾರು 5 ಮಿಲಿಯನ್ ಸ್ಕ್ವೇರ್ ಫೀಟ್ನಲ್ಲಿರುವ ಇರುವ ಟೆಲಿಕಾಂ ಮೂಲಸೌಕರ್ಯಗಳನ್ನು ಜಿಯೋ ಬಳಸಿಕೊಳ್ಳಲಿದೆ. ಈ ಎಲ್ಲ ಜಾಗ ಹಾಗೂ ಉಪಕರಣಗಳನ್ನ ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋಗೆ ಮಾರಾಟ ಮಾಡಿರುವುದಾಗಿ ಆರ್ಕಾಂ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸಾವಿರಾರು ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿ ಇನ್ನೂ 25 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡುವ ಸಾಧ್ಯತೆ ಇದೆ. ಕಳೆದ ವರ್ಷ ಅನಿಲ್ ಅಂಬಾನಿ, ಅಣ್ಣ ಮುಖೇಶ್ ಅಂಬಾನಿ ನೇತೃತ್ವದ ಜಿಯೋಗೆ ವೈರ್ಲೆಸ್ ಸ್ಪೆಕ್ಟ್ರಂ, ಟವರ್, ಪೈಬರ್ ಮತ್ತು ಎಂಸಿಎನ್ ಆಸ್ತಿಗಳನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.