
ಬೆಂಗಳೂರು(ಆ.24): ದೇಶದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್ಕಾರ್ಟ್, ಇದೇ ಮೊದಲ ಬಾರಿಗೆ ನವೀಕರಣಗೊಂಡ ಇಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಮೊಬೈಲ್ ಆ್ಯಪ್ ಬಿಡುಗಡೆಗೊಳಿಸಿದೆ.
'2ಗುಡ್' ಎಂಬ ಹೆಸರಿನ ಆ್ಯಪ್ ನಲ್ಲಿ ಗುಣಮಟ್ಟ ಅಪೇಕ್ಷಿಸುವ ಗ್ರಾಹಕರಿಗೆ ಬೇರೆ ಬೇರೆ ಬ್ರಾಂಡ್ನ ನವೀಕರಣಗೊಂಡ ಪ್ರೊಡಕ್ಟ್ಗಳು ಲಭ್ಯವಿರಲಿದೆ ಎಂದು ಫ್ಲಿಪ್ಕಾರ್ಟ್ ಸಂಸ್ಥೆಯ ಉಪಾಧ್ಯಕ್ಷ ಅನೀಲ್ ಗೋಟೇಟಿ ಹೇಳಿದ್ದಾರೆ.
ಆರಂಭದ ಹಂತದಲ್ಲಿ ಮೊಬೈಲ್ ಆ್ಯಪ್ ಆಗಿ ಬಿಡುಗಡೆಗೊಂಡಿರುವ '2ಗುಡ್' ಮುಂದೆ ಡೆಸ್ಕ್ಟಾಪ್ ವಿನ್ಯಾಸದಲ್ಲೂ ಜನರ ಕೈಸೇರಲಿದೆ. ನವೀಕರಣಗೊಂಡ ಮೊಬೈಲ್ ಫೋನ್, ಲಾಪ್ಟಾಪ್, ಸ್ಮಾರ್ಟ್ವ್ಯಾಚ್, ಹೀಗೆ ಎಲ್ಲಾ ಇಲೆಕ್ಟ್ರಾನಿಕ್ ಉಪಕರಣಗಳೂ ಇಲ್ಲಿ ಸಿಗಲಿದೆ. ಜೊತೆಗೆ ಈ ಆಪ್ ಗೂಗಲ್ ಪ್ಲೇಸ್ಟೋರ್ ಮತ್ತು ಆಪಲ್ ಆಪರೇಟಿಂಗ್ ಸಿಸ್ಟೆಮ್ನಲ್ಲೂ ಲಭ್ಯವಿರಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.