Own Business : ಮನೆ ಮೂಲೆ ಸೇರಿರೋ ವಸ್ತುಗಳು ನಿಮ್ಮನ್ನು ಲಕ್ಷಾಧಿಪತಿ ಮಾಡ್ಬಹುದು..! ಹೇಗೆ ಗೊತ್ತಾ?

By Suvarna News  |  First Published Dec 31, 2021, 6:36 PM IST

ಮನೆ ತುಂಬಾ ಬೇಡದ ವಸ್ತು ತುಂಬ್ಕೊಂಡಿವೆ. ರದ್ದಿಗೆ ಹಾಕೋವಷ್ಟು ಕೆಟ್ಟಿಲ್ಲ.ಇಟ್ಟುಕೊಳ್ಳೋಕೆ ಆಗ್ತಿಲ್ಲ ಎನ್ನುವವರು ಇದನ್ನ ಓದಿ. ಹಾಳಾಗಿದೆ ಎಂದು ನೀವು ಅಂದುಕೊಂಡಿರುವ ವಸ್ತುಗಳೇ ನಿಮಗೆ ಮುಂದೆ ಹಣದ ಮಳೆ ಸುರಿಸಬಹುದು. 


Business Desk: ಸ್ವಂತ ವ್ಯವಹಾರ(Own Business) ಆರಂಭಿಸಬೇಕೆಂಬುದು ಅನೇಕರ ಕನಸಾಗಿರುತ್ತದೆ. ಆದ್ರೆ ಯಾವ ವ್ಯವಹಾರ(Business) ಶುರು ಮಾಡ್ಬೇಕೆಂಬ ಗೊಂದಲವಿರುತ್ತದೆ. ಬ್ಯುಸಿನೆಸ್(Business) ಕೈ ಹಿಡಿಯದೆ ಹೋದ್ರೆ? ಹೂಡಿಕೆ (Investment) ಮಾಡಿದ ಹಣ ನೀರು ಪಾಲಾದ್ರೆ? ಲಾಭವಿಲ್ಲದೆ (Profit) ವ್ಯಾಪಾರ ನಡೆಸುವಂತಾದ್ರೆ? ಹೀಗೆ ಅನೇಕ ಪ್ರಶ್ನೆಗಳು,ಆತಂಕಗಳು ಕಾಡುತ್ತವೆ. ಯಾವುದೇ ಬ್ಯುಸಿನೆಸ್ ಗೆ ಇಳಿಯುವ ಮೊದಲು ಅದ್ರ ಬಗ್ಗೆ ಸ್ವಲ್ಪ ತಿಳಿದಿರಬೇಕು. ಹೆಚ್ಚು ರಿಸ್ಕ್(Risk) ಬೇಡ ಎನ್ನುವವರೂ ವ್ಯವಹಾರ ಶುರು ಮಾಡಬಹುದು.ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ (Profit) ನೀಡುವ ಅನೇಕ ಬ್ಯುಸಿನೆಸ್ ಇದೆ. ಕೆಲವೊಂದು ವ್ಯವಹಾರವನ್ನು ಮನೆಯಲ್ಲಿಯೇ ಕುಳಿತು ಶುರು ಮಾಡಬಹುದು.ಕಡಿಮೆ ಬಂಡವಾಳದಲ್ಲಿ(Investment) ಶುರು ಮಾಡಬಹುದಾದ ಒಂದು ಬ್ಯುಸಿನೆಸ್ ಬಗ್ಗೆ ಇಂದು ಹೇಳ್ತೆವೆ. 

ಪ್ರತಿ ಮನೆಯಲ್ಲೂ ಬೇಡದ ವಸ್ತುಗಳು ತುಂಬಿರುತ್ತವೆ. ಮನೆ ಬದಲಿಸುವ ವೇಳೆ ಅಥವಾ ಮನೆ ಸ್ವಚ್ಛಗೊಳಿಸುವ ವೇಳೆ ಕೆ.ಜಿ.ಗಟ್ಟಲೆ ತ್ಯಾಜ್ಯ (Waste) ಸಿಗುತ್ತದೆ. ಕೆಲವೊಂದು ವಸ್ತುಗಳನ್ನು ಕಸಕ್ಕೆ ಹಾಕಲು ಮನಸ್ಸಿರೋದಿಲ್ಲ. ಆದ್ರೆ ಅದು ಬಳಕೆಗೆ ಬರುವುದಿಲ್ಲ.ಈ ವಸ್ತುಗಳನ್ನಿಟ್ಟುಕೊಂಡೇ ನೀವು ವ್ಯವಹಾರ ಮಾಡಿಕೊಳ್ಳಬಹುದು. ವಸ್ತುಗಳ ಮರುಬಳಕೆ ವ್ಯಾಪಾರ  ಆರಂಭಿಸಿ ಲಾಭ ಗಳಿಸಬಹುದು. ಮನೆಯ ಸ್ಕ್ರ್ಯಾಪ್‌ ಗಳೇ ನಿಮ್ಮ ವ್ಯವಹಾರದ ಮೂಲ. 

Tap to resize

Latest Videos

Wedding Insurance : ಮದುವೆ ರದ್ದಾದ್ರೆ ಟೆನ್ಷನ್ ಬೇಡ,ಇಲ್ಲಿ ಸಿಗುತ್ತೆ 10 ಲಕ್ಷ ರೂ.

ವ್ಯಾಪಾರವನ್ನು ಯಾವಾಗ ಮತ್ತು ಎಲ್ಲಿ ಪ್ರಾರಂಭಿಸಬೇಕು : ಈ ವ್ಯವಹಾರದ ವ್ಯಾಪ್ತಿ ದೊಡ್ಡದಾಗಿದೆ. ವಿಶ್ವಾದ್ಯಂತ, ಪ್ರತಿ ವರ್ಷ 2 ಶತಕೋಟಿ ಟನ್‌ಗಳಿಗಿಂತ ಹೆಚ್ಚು ತ್ಯಾಜ್ಯ ವಸ್ತುಗಳನ್ನು(Waste Products) ಉತ್ಪಾದಿಸಲಾಗುತ್ತದೆ. ಅದೇ ಸಮಯದಲ್ಲಿ, ಭಾರತದಲ್ಲಿ 277 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಜಂಕ್ ಉತ್ಪತ್ತಿಯಾಗುತ್ತದೆ.ಇಷ್ಟು ದೊಡ್ಡ ಮೊತ್ತದಲ್ಲಿ ತ್ಯಾಜ್ಯ ನಿರ್ವಹಣೆ (Waste Management)ಅತ್ಯಂತ ಕಷ್ಟಕರವಾದ ವಿಷಯವಾಗಿದೆ. 
ಅನೇಕ ಜನರು ಮನೆ ಅಲಂಕಾರಿಕ ವಸ್ತುಗಳು(decorative items), ಆಭರಣಗಳು(Ornaments), ತ್ಯಾಜ್ಯ ವಸ್ತುಗಳಿಂದ ಮಾಡಿದ ಪೇಂಟಿಂಗ್‌  (Painting )ಸೇರಿದಂತೆ ಅನೇಕ ವಸ್ತುಗಳನ್ನು ಸಿದ್ಧಪಡಿಸುವ ಮೂಲಕ ತ್ಯಾಜ್ಯದ ಸಮಸ್ಯೆಯನ್ನು ವ್ಯಾಪಾರವಾಗಿ ಪರಿವರ್ತಿಸಿಕೊಂಡಿದ್ದಾರೆ. ಇದೇ ವ್ಯವಹಾರದಲ್ಲಿ ಈಗಾಗಲೇ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.   

undefined

ಹಳೆ ವಸ್ತುಗಳಿಂದ ಏನು ಮಾಡ್ಬಹುದು? : ಹಳೆಯ,ಹಾಳಾದ,ಕಸಕ್ಕೆ ಸೇರುವ ವಸ್ತುಗಳಿಂದ ನೀವು ಬಗೆ ಬಗೆಯ ವಸ್ತುಗಳನ್ನು ತಯಾರಿಸಬಹುದು.ಪಿಠೋಪಕರಣಗಳನ್ನು ಕಪ್ ಗಳಾಗಿ, ಅಲಂಕಾರಿಕ ಕನ್ನಡಿ,ಬಾಚಣಿಗೆ ಅಥವಾ ಸಣ್ಣ ಸಣ್ಣ ಕರಕುಶಲ ವಸ್ತುಗಳಾಗಿ ಪರಿವರ್ತಿಸಬಹುದು. ಹಳೆ ವಸ್ತುಗಳಿಗೆ ಹೊಸ ರೂಪ ನೀಡುವ ಕಲೆ ನಿಮಗೆ ಗೊತ್ತಿರಬೇಕು. ಕಲೆಯಲ್ಲಿ ಆಸಕ್ತಿಯಿದ್ದರೆ ನಿಮ್ಮ ಕೆಲಸ ಮತ್ತಷ್ಟು ಸುಲಭವಾಗುತ್ತದೆ. ಆರಂಭದಲ್ಲಿ ಮನೆಯಲ್ಲಿ ಹಾಳಾದ ವಸ್ತುಗಳನ್ನು ಬಳಸಿಕೊಂಡು ಹೊಸ ವಸ್ತುಗಳನ್ನು ತಯಾರಿಸಿ. 

ಮಾರುಕಟ್ಟೆ ಹೇಗೆ?:  ನೀವು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಒದಗಿಸಬೇಕಾಗುತ್ತದೆ.ಇ-ಕಾಮರ್ಸ್(e-commerce) ಕಂಪನಿ ಅಮೆಜಾನ್(Amazon) ಮತ್ತು ಫ್ಲಿಪ್ಕಾರ್ಟ್ (Flipcart)ನಲ್ಲಿ ನೀವು ಮಾರಾಟ ಮಾಡಬಹುದು. ಆನ್ ಲೈನ್ ಹಾಗೂ ಆಫ್ ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟ ಮಾಡಬಹುದು. ಸಾಮಾಜಿಕ ಜಾಲತಾಣಗಳು ಇದಕ್ಕೆ ಅತ್ಯುತ್ತಮ. ಆಕರ್ಷಕ ವಸ್ತುಗಳಿಗೆ ಸದಾ ಬೇಡಿಕೆಯಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.

Business Astro: ಕ್ಲಿಕ್ ಆಗೋಕೆ ಜ್ಯೋತಿಷ್ಯದ ಟಿಪ್ಸ್

ವ್ಯಾಪಾರ ಪ್ರಾರಂಭಿಸುವುದು ಹೇಗೆ?
ಈ ವ್ಯವಹಾರವನ್ನು(Business) ಪ್ರಾರಂಭಿಸಲು, ಮೊದಲನೆಯದಾಗಿ ನೀವು ನಿಮ್ಮ ಮತ್ತು ನಿಮ್ಮ ಮನೆಯ ಸುತ್ತಲಿನ ತ್ಯಾಜ್ಯ ವಸ್ತುಗಳನ್ನು ಅಂದರೆ ಜಂಕ್ ಅನ್ನು ಸಂಗ್ರಹಿಸಬೇಕು. ಬೇಕಿದ್ದರೆ ಮುನ್ಸಿಪಲ್ ಕಾರ್ಪೊರೇಷನ್ ನ ತ್ಯಾಜ್ಯವನ್ನೂ ತೆಗೆದುಕೊಳ್ಳಬಹುದು. ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವವರಿರುತ್ತಾರೆ. ಅವರಿಂದಲೂ ನೀವು ಖರೀದಿಸಬಹುದು. ಅದರ ನಂತರ ಆ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕು. ನಂತರ ಅದಕ್ಕೆ ಹಸ ರೂಪ ನೀಡಿ,ಬಣ್ಣ ಹಚ್ಚಬೇಕು.

ಈ ವ್ಯವಹಾರ ಶುರು ಮಾಡಲು ಆರಂಭದಲ್ಲಿ ಹೆಚ್ಚಿನ ಬಂಡವಾಳ ಬೇಕಾಗುವುದಿಲ್ಲ. ನಿಮ್ಮ ವಸ್ತುಗಳಿಗೆ ಬೇಡಿಕೆ ಹೆಚ್ಚಾದಂತೆ ನೀವು ಹೆಚ್ಚೆಚ್ಚು ತ್ಯಾಜ್ಯವನ್ನು ಖರೀದಿಸಬಹುದು. ಸಣ್ಣ ರೂಮಿನಲ್ಲಿಯೂ ನೀವು ವ್ಯವಹಾರ ಶುರು ಮಾಡಬಹುದು.

click me!