ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ಈ 10 ತಪ್ಪುಗಳನ್ನು ಮಾಡ್ಬೇಡಿ!

By Suvarna News  |  First Published Aug 3, 2023, 2:04 PM IST

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಕೈಸುಟ್ಟುಕೊಂಡವರ ಸಂಖ್ಯೆ ಕಡಿಮೆಯೇನಿಲ್ಲ. ಹಾಗಾದ್ರೆ ಅನೇಕರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುವುದು ಏಕೆ? ಇದಕ್ಕೇನು ಕಾರಣ? ಇಲ್ಲಿದೆ ಮಾಹಿತಿ. 


Business Desk: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಆದರೆ, ಬಹುತೇಕ ಮಂದಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿರೋದೆ ಹೆಚ್ಚು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ಬೇಗ ಹೆಚ್ಚಿನ ಹಣ ಗಳಿಸಬಹುದು ಎಂಬುದು ಕೆಲವರ ಯೋಚನೆ. ಆದರೆ, ಈ ಷೇರು ಮಾರುಕಟ್ಟೆ ಎಂಬುದು ಸಮುದ್ರದಂತೆ. ಯಾವಾಗ ಅಲೆಗಳ ಅಬ್ಬರ ಹೆಚ್ಚುತ್ತದೆ, ಯಾವಾಗ ತಗ್ಗುತ್ತದೆ ಎಂದು ಹೇಳೋದು ಕಷ್ಟ. ಹೀಗಾಗಿ ಷೇರು ಮಾರುಕಟ್ಟೆ ಪ್ರವೇಶಿಸುವ ಮುನ್ನ ಅದರ ಬಗ್ಗೆ ಒಂದಿಷ್ಟು ಮಾಹಿತಿ ಹೊಂದಿರೋದು ಅಗತ್ಯ. ಯಾವುದೇ ಪ್ರಾಥಮಿಕ ಮಾಹಿತಿಯಿಲ್ಲದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ಕೈಸುಟ್ಟುಕೊಳ್ಳೋದು ಗ್ಯಾರಂಟಿ. ಮಾರುಕಟ್ಟೆ ನಿಯಂತ್ರಕ ಸೆಬಿ ವರದಿ ಪ್ರಕಾರ ಸುಮಾರು ಶೇ.90ರಷ್ಟು ಟ್ರೇಡರ್ಸ್ ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾದ್ರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರು ಹಣ ಕಳೆದುಕೊಳ್ಳಲು ಕಾರಣವೇನು? ತಜ್ಞರ ಪ್ರಕಾರ ಇದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಕೆಲವು ಪ್ರಮುಖವಾದ ಕಾರಣಗಳನ್ನು ಇಲ್ಲಿ ನೀಡಲಾಗಿದೆ.

1.ಹೂಡಿಕೆಗೆ ಅನ್ಯರ ಟಿಪ್ಸ್ ಪಡೆಯೋದು
ಷೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡೋದು ಹೇಗೆ ಎಂಬುದು ಬಹುತೇಕರಿಗೆ ತಿಳಿದಿರೋದಿಲ್ಲ. ಇಂಥವರು ಇನ್ನೊಬ್ಬರ ಸಲಹೆ ಅಥವಾ ಟಿಪ್ಸ್ ಆಧರಿಸಿ ಹೂಡಿಕೆ ಮಾಡುತ್ತಾರೆ. ಈ ರೀತಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋರಿಗೆ ಮಾರ್ಗದರ್ಶನ ಅಥವಾ ಟಿಪ್ಸ್ ನೀಡುವ ಅನೇಕ ಮಂದಿ ಅಥವಾ ಸಂಸ್ಥೆಗಳಿವೆ. ಇಂಥ ವ್ಯಕ್ತಿ ಅಥವಾ ಸಂಸ್ಥೆಗಳು ಹೂಡಿಕೆ ಮಾಡುವ ವ್ಯಕ್ತಿಯ ಲಾಭದಲ್ಲಿ ಶೇ.30-40ರಷ್ಟು ಪಾಲು ಪಡೆಯುತ್ತಾರೆ. ಇಂಥವರನ್ನು ನಂಬಿ ಹೂಡಿಕೆ ಮಾಡೋದ್ರಿಂದ ಅನೇಕ ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಏಕೆಂದರೆ ಈ ರೀತಿ ಟಿಪ್ಸ್ ನೀಡುವ ಎಷ್ಟೋ ಮಂದಿಗೆ ಷೇರು ಮಾರುಕಟ್ಟೆಯ ಬಗ್ಗೆ ಪೂರ್ಣ ಪ್ರಮಾಣದ ಜ್ಞಾನವಿರೋದಿಲ್ಲ. 

Tap to resize

Latest Videos

ಐಟಿಆರ್ ಸಲ್ಲಿಕೆಯಾಯ್ತು, ರೀಫಂಡ್ ಯಾವಾಗ? ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ

2.ಮಾರುಕಟ್ಟೆ ಬಗ್ಗೆ ಅರಿವಿನ ಕೊರತೆ
ಷೇರು ಮಾರುಕಟ್ಟೆ ಬಗ್ಗೆ ಮಾಹಿತಿ ಕೊರತೆ ಇರೋರು ಹೂಡಿಕೆ ಮಾಡಿದ್ರೆ ಹಣ ಕಳೆದುಕೊಳ್ಳುವುದು ಗ್ಯಾರಂಟಿ. ಷೇರು ಮಾರುಕಟ್ಟೆಗೆ ಸಂಬಂಧಿಸಿ ಪ್ರಾಥಮಿಕ ಮಾಹಿತಿಯೂ ಇಲ್ಲದೆ ಹೂಡಿಕೆ ಮಾಡಿದ್ರೆ ಜೇಬು ಖಾಲಿಯಾಗೋದರಲ್ಲಿ ಅನುಮಾನವಿಲ್ಲ. ಮಾರುಕಟ್ಟೆ ಟ್ರೆಂಡ್ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಷೇರು ಮಾರುಕಟ್ಟೆಗೆ ಸಂಬಂಧಿಸಿದ ಟರ್ಮ್ ಗಳ ಬಗ್ಗೆ ತಿಳಿದಿರಬೇಕು. ಹಾಗೆಯೇ ಫಾರಿನ್ ಇನ್ಸಿಟಿಟ್ಯೂಷನಲ್ ಇನ್ವೆಸ್ಟರ್ಸ್  (FIIs) ಹಾಗೂ ಡೊಮೆಸ್ಟಿಕ್ ಇನ್ಸಿಟಿಟ್ಯೂಷನಲ್ ಇನ್ವೆಸ್ಟರ್ಸ್(DIIs) ಯಾವ ಟ್ರೆಂಡ್ ನಲ್ಲಿ ಎನ್ನೋದನ್ನು ಗಮನಿಸೋದು ಅಗತ್ಯ.

3.ಸ್ಕ್ರೀನ್ ನೋಡಿ ಟ್ರೇಡಿಂಗ್ 
ಕೆಲವರು ಸ್ಕ್ರೀನ್ ನೋಡಿಕೊಂಡೇ ಟ್ರೇಡಿಂಗ್ ಮಾಡುತ್ತಾರೆ. ಇದು ತಪ್ಪು ಎನ್ನುತ್ತಾರೆ ತಜ್ಞರು. ಹೀಗೆ ಮಾಡೋದ್ರಿಂದ ಹಣ ಗಳಿಸಬಹುದು ಎಂಬುದು ತಪ್ಪು ಕಲ್ಪನೆ ಎನ್ನೋದು ತಜ್ಞರ ಅಭಿಪ್ರಾಯ.

4.ಕಳೆದುಕೊಂಡ ಹಣವನ್ನು ಇಲ್ಲೇ ಗಳಿಸ್ಬೇಕು ಎಂಬ ಮನೋಭಾವ
ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡವರಿಗೆ ಮತ್ತೆ ಇಲ್ಲೇ ವಾಪಸ್ ಪಡೆಯಬೇಕು ಎಂಬ ಮನೋಭಾವ ಇರುತ್ತದೆ. ಇದು ತಪ್ಪು ಎನ್ನುತ್ತಾರೆ ತಜ್ಞು.

5.ಹೆಡ್ಜಿಂಗ್ : ಹೆಡ್ಜಿಂಗ್ ಅನ್ನೋದು ನಿಮ್ಮ ಹೂಡಿಕೆ ಮೇಲೆ ವಿಮೆ ತೆಗೆದುಕೊಂಡಂತೆ. ಒಂದು ಷೇರಿನಿಂದಾಗುವ ನಷ್ಟವನ್ನು ತಡೆಯಲು ಇನ್ನೊಂದು ಷೇರನ್ನು ಖರೀದಿಸೋದು ಎಂದು ಹೇಳಬಹುದು.ಹೆಡ್ಜಿಂಗ್ ನಿಮ್ಮ ಲಾಭದ ಹಣವನ್ನು ಸಂರಕ್ಷಿಸುವ ಜೊತೆಗೆ ನಷ್ಟವನ್ನು ತಗ್ಗಿಸುತ್ತದೆ.

6.ಲಾಟ್ ತೆಗೆದುಕೊಳ್ಳುವಾಗ ಎಚ್ಚರ: ತಪ್ಪಾಗಿ ಲಾಟ್ ಸೈಜ್ ಆಯ್ಕೆ ಮಾಡೋದು ಕೂಡ ನಷ್ಟಕ್ಕೆ ಕಾರಣವಾಗುತ್ತದೆ. ಹಣ ಇದೆ ಎಂಬ ಕಾರಣಕ್ಕೆ ಹೆಚ್ಚು ಲಾಟ್ ತೆಗೆದುಕೊಂಡು ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಜಗತ್ತಿನ ಅತೀ ಶ್ರೀಮಂತರು ಎಲಾನ್‌ ಮಸ್ಕ್‌, ಅಂಬಾನಿ ಅಲ್ವೇ ಅಲ್ಲ, ಶತಕೋಟಿ ಆಸ್ತಿಯ ಒಡತಿ ಈ ಮಹಿಳೆ!

7.ಫ್ಯೂಚರ್ ಎಂಡ್ ಆಯ್ಕೆ ನೋಡಿಕೊಳ್ಳಬೇಕು: ಷೇರು ಮಾರುಕಟ್ಟೆಗೆ ಎಂಟ್ರಿ ಆಗೋದು ಸುಲಭ. ಆದರೆ, ಹೊರಬರೋದು ಕಷ್ಟ. ಹೀಗಾಗಿ ಷೇರಿನ ಮೇಲೆ ಹೂಡಿಕೆ ಮಾಡುವಾಗ ಫ್ಯೂಚರ್ ಎಂಡ್ ಆಯ್ಕೆ ಇದೆಯಾ ಎಂಬುದನ್ನು ನೋಡಿಕೊಳ್ಳಬೇಕು. 

8.ಪೆನ್ನಿ ಸ್ಟಾಕ್ ಖರೀದಿ: ಕಡಿಮೆ ಹಣಕ್ಕೆ ಸಿಗುವ ಚಿಕ್ಕಪುಟ್ಟ ಸಂಸ್ಥೆಗಳ ಷೇರುಗಳನ್ನು ಖರೀದಿ ಮಾಡೋದು ಕೂಡ ತಪ್ಪು ಎನ್ನುತ್ತಾರೆ ತಜ್ಞರು

9. ಹೂಡಿಕೆ ಮುನ್ನ ಪರಿಶೀಲನೆ: ಯಾವುದೇ ಒಂದು ಸಂಸ್ಥೆ ಷೇರಿನ ಮೇಲೆ ಹೂಡಿಕೆ ಮಾಡುವ ಮುನ್ನ ಅದರ ಲಾಭ, ಮಾರುಕಟ್ಟೆ ಸ್ಥಿತಿಗತಿ, ಸಾಲ ಇತ್ಯಾದಿ ಅಂಶಗಳನ್ನು ಪರಿಗಣಿಸೋದು ಅಗತ್ಯ. ಹೀಗೆ ಯಾವುದೇ ವಿಶ್ಲೇಷಣೆ ನಡೆಸದೆ ಹೂಡಿಕೆ ಮಾಡಿದ್ರೆ ಹಣ ಕಳೆದುಕೊಳ್ಳುವುದು ಅಗತ್ಯ.

10.ಡಿಸ್ಕೌಂಟ್ ಬ್ರೋಕರ್ ಆಯ್ಕೆ: ಉತ್ತಮ ಡಿಸ್ಕೌಂಟ್ ನೀಡುವ ಬ್ರೋಕರ್ ಆಯ್ಕೆ ಮಾಡೋದು ಅಗತ್ಯ. ಬ್ರೋಕರೇಜ್ ಮೊತ್ತ ಕೂಡ ಟ್ರೇಡಿಂಗ್ ಗಳಿಕೆ ಮೇಲೆ ಪರಿಣಾಮ ಬೀರುತ್ತದೆ. 
 

click me!