
ಈಗಿನ ದಿನಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದೇ ದೊಡ್ಡ ಸವಾಲು. ಕೆಲಸ ಸಿಕ್ಕು ಒಂದೆರಡು ತಿಂಗಳು ಅದಕ್ಕೆ ಅಡ್ಜೆಸ್ಟ್ ಆಗಲು ಬೇಕು. ನಂತ್ರ ನಿಶ್ಚಿತ ಸಂಬಳದ ಆಧಾರದ ಮೇಲೆ ಉದ್ಯೋಗಿಗಳು ಮನೆ ಖರ್ಚು, ತಮ್ಮ ಖರ್ಚನ್ನು ಲೆಕ್ಕ ಹಾಕಿ ಉಳಿತಾಯ ಅಥವಾ ಬೇರೆ ಯಾವುದೋ ಕೆಲಸದ ಮೇಲೆ ಹಣ ಹೂಡಿರುತ್ತಾರೆ. ಇನ್ನೇನು ಎಲ್ಲವೂ ಸರಿಯಾಯ್ತು ಎನ್ನುವ ಸಂದರ್ಭದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಕೆಲಸದಿಂದ ತೆಗೆದು ಹಾಕಿದ್ರೆ ಅವರು ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಊರು ಬಿಟ್ಟು ಬೇರೆ ಊರಿನಲ್ಲಿ ಮನೆ ಬಾಡಿಗೆಗೆ ಪಡೆದಿರುವವರ ಕಷ್ಟ ಮತ್ತಷ್ಟು ಹೆಚ್ಚು. ಮನೆ ಬಾಡಿಗೆ, ನಿತ್ಯದ ಖರ್ಚು ಸೇರಿದಂತೆ ಎಲ್ಲ ಖರ್ಚನ್ನು ನಿಭಾಯಿಸೋದು ಕಷ್ಟವಾಗುತ್ತದೆ. ಮುಂದೇನು ಮಾಡ್ಬೇಕು ಎಂಬ ಭಯ ಅವರನ್ನು ಆವರಿಸುತ್ತದೆ. ಕೆಲಸ ಕಳೆದುಕೊಂಡ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡವರೂ ನಮ್ಮಲ್ಲಿದ್ದಾರೆ. ಕೆಲವರಿಗೆ ಕೆಲಸ ಬೇಗ ಸಿಕ್ಕಿದ್ರೆ ಮತ್ತೆ ಕೆಲವರಿಗೆ 2 -3 ತಿಂಗಳು ಕೆಲಸಕ್ಕಾಗಿ ಅಲೆಯಬೇಕಾಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಜನರು ಕೆಲಸ (Job) ಕಳೆದುಕೊಂಡ ನೋವನ್ನು ಹಂಚಿಕೊಳ್ತಿರುತ್ತಾರೆ. ಈಗ ರೆಡ್ಡಿಟ್ ನಲ್ಲಿ ವ್ಯಕ್ತಿಯೊಬ್ಬ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ರಾತ್ರಿ ಕೆಲಸಕ್ಕೆ ಬರಬೇಡ ಎಂದ ಬಾಸ್. ಕೆಲಸವಿಲ್ಲದೆ ಮನೆ ಬಾಡಿಗೆ ಹೇಗೆ ಕಟ್ಟೋದು ಎಂದು ಆತ ಬರೆದ ಪೋಸ್ಟ್ ಗೆ ಜನರು ಅನೇಕ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಐಟಿಆರ್ ಸಲ್ಲಿಕೆಯಾಯ್ತು, ರೀಫಂಡ್ ಯಾವಾಗ? ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ
ರೆಡ್ಡಿಟ್ (Reddit) ಪೋಸ್ಟ್ ನಲ್ಲಿ ಇರೋದೇನು? : circesporkroast ಹೆಸರಿನ ರೆಡ್ಡಿಟ್ ಪೋಸ್ಟ್ ನಲ್ಲಿ ವ್ಯಕ್ತಿ ತನ್ನ ನೋವನ್ನು ಹಂಚಿಕೊಂಡಿದ್ದಾನೆ. ಸಹೋದ್ಯೋಗಿಗಳ ಜೊತೆ ಒಳ್ಳೆ ರೀತಿಯಲ್ಲಿದ್ದರೂ, ಕಚೇರಿಯಲ್ಲಿ ಉತ್ತಮವಾಗಿ ಕೆಲಸ ಮಾಡ್ತಿದ್ದರೂ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಆತ ಬರೆದಿದ್ದಾನೆ. ಯಾವುದೇ ವಿವರಣೆ ನೀಡದೆ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಪೋಸ್ಟ್ ಗೆ ಶೀರ್ಷಿಕೆ ಹಾಕಿದ್ದಾನೆ.
"ನನ್ನ ಬಾಸ್ ಯಾವುದೇ ವಿವರಣೆ ಅಥವಾ ಎಚ್ಚರಿಕೆ ಇಲ್ಲದೆ ನಿನ್ನೆ ರಾತ್ರಿ ನನ್ನನ್ನು ವಜಾ ಮಾಡಿದ್ದಾರೆ. ಸುಮ್ಮನೆ ವಾಪಸ್ ಬರಬೇಡ ಅಂತ ಹೇಳಿದ್ದಾರೆ. ನಾನು ನಿನ್ನೆ ಕೆಲಸ ಮಾಡಿದ್ದೆ ಆದ್ರೆ ಈಗ ನನಗೆ ಕೆಲಸವಿಲ್ಲ. ಏಕೆ ಎಂದು ನನಗೆ ತಿಳಿದಿಲ್ಲ. ನಾಲ್ಕು ತಿಂಗಳು ದುಡಿದ ನನಗೆ ಫಿಟ್ ಇಲ್ಲ ಎಂದು ಹೇಳಿದ್ದಾರೆ. ಈಗ ಬಾಡಿಗೆ ಹೇಗೆ ಕೊಡುವುದೋ ಗೊತ್ತಿಲ್ಲ. ತನ್ನ ಉದ್ಯೋಗಿಗಳ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಬಾಸ್ ಎಂದು ನಾನು ಭಾವಿಸಿದ್ದೆ. ಕೊನೆಗೂ ಮನುಷ್ಯರಂತೆ ಕಾಣುವ ಕೆಲಸ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಆತ ಬರೆದಿದ್ದಾನೆ.
ಒಂದು ಬಲ್ಬ್ ಚೇಂಜ್ ಮಾಡಿದ್ರೆ ಸಿಗುತ್ತೆ ಲಕ್ಷ ಲಕ್ಷ ಸ್ಯಾಲರಿ, ಆದ್ರೂ ಸಿಕ್ತಿಲ್ಲ ಸ್ಟ್ಯಾಫ್
ಪೋಸ್ಟ್ ಮಾಡಿದ ವ್ಯಕ್ತಿಗೆ ಹಳೆಯ ಖಾಯಿಲೆಯೊಂದಿದೆ. ಆಗಾಗ ಕೆಲಸದಿಂದ ಬೇಗ ಹೋಗ್ಬೇಕಾಗುತ್ತೆ. ಕೆಲಸದ ಮಧ್ಯೆ ಬ್ರೇಕ್ ತೆಗೆದುಕೊಳ್ಳುವ ಅಗತ್ಯವಿರುತ್ತೆ. ಒಂದು ಗಂಟೆಗೆ ಒಮ್ಮೆ ವಾಶ್ ರೂಮಿಗೆ ಹೋಗ್ಬೇಕಾಗುತ್ತೆ. ಇದು ಬಾಸ್ ಗೆ ತಿಳಿದಿದೆ. ಆದ್ರೆ ನನ್ನ ಕೆಲಸಕ್ಕೆ ಇದ್ರಿಂದ ಯಾವುದೇ ಅಡ್ಡಿಯಾಗಿರಲಿಲ್ಲ. ನಾಲ್ಕು ತಿಂಗಳು ನನ್ನ ಕೆಲಸ ಇಷ್ಟವಾದವರಿಗೆ ಈಗ ಏನಾಯ್ತೋ ಗೊತ್ತಿಲ್ಲ. ನನ್ನ ಖಾಯಿಲೆಯೇ ನನ್ನನ್ನು ಕೆಲಸದಿಂದ ತೆಗೆಯಲು ಕಾರಣವೆಂದ್ರೆ ನಾನು ಒಪ್ಪೋದಿಲ್ಲ ಎನ್ನುತ್ತಾನೆ ಬಳಕೆದಾರ.
ಇದಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ನಾವೂ ಇಂಥ ಸಂದರ್ಭವನ್ನು ಎದುರಿಸಿದ್ದೇವೆ ಎಂದು ಇನ್ನೊಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾನೆ. ಆರು ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡಿದ್ದೆ. ನನ್ನಿಂದ ಕಂಪನಿಗೆ ಸಾಕಷ್ಟು ಲಾಭ ಬಂದಿತ್ತು. ಆದ್ರೆ ಯಾವುದೇ ಕಾರಣ ಹೇಳದೆ ವಜಾ ಮಾಡಿದ್ದಾರೆಂದು ತನ್ನ ನೋವನ್ನು ಆತ ತೋಡಿಕೊಂಡಿದ್ದಾನೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.