
ಮುಂಬೈ(ಸೆ.24): ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ RBI ವಿಧಿಸಿರುವ ನಿರ್ಬಂಧ ಉದ್ಯಮ ವಲಯವನ್ನು ತೀವ್ರ ಆತಂಕಕ್ಕೆ ಗುರಿ ಮಾಡಿದೆ.
RBI ಸೂಚನೆಯ ಪ್ರಕಾರ, ಯಾವುದೇ ಉಳಿತಾಯ, ಚಾಲ್ತಿ ಖಾತೆ ಮತ್ತು ಇತರೆ ಠೇವಣಿ ಖಾತೆಗಳಿಂದ ಗ್ರಾಹಕರು ಗರಿಷ್ಠ 1 ಸಾವಿರ ರೂ. ಮಾತ್ರ ವಿತ್ ಡ್ರಾ ಮಾಡಬುಹುದಾಗಿದೆ.ಇದು ಬ್ಯಾಂಕ್ ಗ್ರಾಹಕರನ್ನು ಅಕರಶಃ ಹೈರಾಣು ಮಾಡಿದೆ.
ಕುರಿತು ಮಾಹಿತಿ ನೀಡಿರುವ ಪಿಎಂಸಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಯೋಗೇಶ್ ದಯಾಳ್, RBI ಹೊಸ ನಿಯಮದ ಅನ್ವಯ ಪಿಎಂಸಿ ಗ್ರಾಹಕರು ಇನ್ನು ಮುಂದೆ ಕೇವಲ 1 ಸಾವಿರ ರೂ. ಮಾತ್ರ ವಿತ್ ಡ್ರಾ ಮಾಡಬಹುದು ಎಂದು ತಿಳಿಸಿದ್ದಾರೆ.
ಬಹು-ರಾಜ್ಯ ಸಹಕಾರಿ ಬ್ಯಾಂಕ್ ಎಂದೇ ಖ್ಯಾತಿ ಪಡೆದಿರುವ ಪಿಎಂಸಿ ಬ್ಯಾಂಕ್, ಕರ್ನಾಟಕ, ಮಹಾರಾಷ್ಟ್ರ ದೆಹಲಿ, ಗೋವಾ, ಗುಜರಾತ್, ಆಂಧ್ರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.
1984ರಲ್ಲಿ ಮುಂಬೈನಲ್ಲಿ ಸ್ಥಾಪನೆಯಾದ ಈ ಸಹಕಾರಿ ಬ್ಯಾಂಕ್ ಈಗ ಆರು ರಾಜ್ಯಗಳಲ್ಲಿ ಒಟ್ಟು 137 ಶಾಖೆಗಳನ್ನು ಹೊಂದಿದೆ ಮತ್ತು ದೇಶದ ಟಾಪ್ 10 ಸಹಕಾರಿ ಬ್ಯಾಂಕ್’ಗಳಲ್ಲಿ ಒಂದಾಗಿರುವುದು ವಿಶೇಷ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.