ಆನ್‌ಲೈನ್ NEFT ವಹಿವಾಟಿಗೆ ನಿಗದಿತ ಸಮಯದ ಮಿತಿ ಇಲ್ಲ| ಇದೇ ಡಿ.16ರಿಂದ 24/7 NEFT ವಹಿವಾಟು| ಡಿಜಿಟಲ್ ವಹಿವಾಟು ಉತ್ತೇಜಿಸಲು ಮುಂದಾದ ಆರ್‌ಬಿಐ| ಗ್ರಾಹಕರಲ್ಲಿ ಸಂತಸ ಮೂಡಿಸಿದ NEFT 24/7 ವಹಿವಾಟು ನಿರ್ಧಾರ| ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ|
ನವದೆಹಲಿ(ಡಿ.07): ಆನ್‌ಲೈನ್ NEFT ವಹಿವಾಟಿಗೆ ನಿಗದಿತ ಸಮಯದ ಮಿತಿಯನ್ನು ಆರ್‌ಬಿಐ ತೆಗೆದು ಹಾಕಿದೆ. ಇದೇ ಡಿ.16ರಿಂದ 24/7 NEFT ವಹಿವಾಟು ಮಾಡಬಹುದಾಗಿದೆ.
ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಸಿಹಿ ಸುದ್ದಿ!
ಡಿ.16ರ ರಾತ್ರಿ 12:30ರ ಬಳಿಕ NEFT ವಹಿವಾಟು 24/7 ಕಾಲಮಿತಿಗೆ ತೆರೆದುಕೊಳ್ಳಲಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಅಲ್ಲದೇ ಈ ಕುರಿತು ಎಲ್ಲಾ ಬ್ಯಾಂಕ್‌ಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆರ್‌ಬಿಐ ಸೂಚನೆ ನೀಡಿದೆ.
ಇದು ಚಮತ್ಕಾರ: RTGS, NEFT ಶುಲ್ಕ ಕೈಬಿಡಲು ನಿರ್ಧಾರ!
ಈಗಾಗಲೇ NEFT ಹಾಗೂ RTGS ಮೇಲಿನ ಹೆಚ್ಚುವರಿ ಶುಲ್ಕವನ್ನು ತೆಗೆದು ಹಾಕಿರುವ ಆರ್‌ಬಿಐ, ಇದೀಗ NEFT ವಹಿವಾಟನ್ನು ನಿರಂತರ ಸೇವೆಯನ್ನಾಗಿ ಪರಿವರ್ತಸಿರುವುದು ಬ್ಯಾಂಕ್ ಗ್ರಾಹಕರಲ್ಲಿ ಸಂತಸ ಮೂಡಿಸಿದೆ.
Availability of National Electronic Funds Transfer (NEFT) System on 24x7 basishttps://t.co/ytimjQtXax
— ReserveBankOfIndia (@RBI)ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಆರ್‌ಬಿಐ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು, NEFT ವಹಿವಾಟಿಗೆ ಕಾಲಮಿತಿ ತೆಗೆದು ಹಾಕಿರುವುದು ಕ್ಯಾಶ್‌ಲೆಸ್ ಎಕಾನಾಮಿಯತ್ತ ಇಟ್ಟ ದಿಟ್ಟ ಹೆಜ್ಜೆ ಎಂದು ವಿಶ್ಲೇಷಿಸಲಾಗಿದೆ.
ಜು.01ರಿಂದ ಬ್ಯಾಂಕ್’ಗಳಲ್ಲಿ ಈ ಬದಲಾವಣೆ: ಖುಷಿಯಾಗುವಿರಿ ನಿಮ್ಮಾಣೆ!
ಡಿಸೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ