ಆರ್‌ಬಿಐ ಮಾಹಿತಿ, 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ವಾಪಸ್‌!

By Santosh NaikFirst Published Aug 1, 2023, 3:42 PM IST
Highlights

2 ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದ ಬಳಿಕ ಇಲ್ಲಿವರೆಗೂ ಬ್ಯಾಂಕ್‌ಗಳಿಗೆ 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ವಾಪಸಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.
 

ನವದೆಹಲಿ (ಆ.1): ಚಲಾವಣೆಯಿಂದ 2 ಸಾವಿರ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಮಾಡಿದ ಬಳಿಕ ಈವರೆಗೂ ಬ್ಯಾಂಕ್‌ಗೆ 3.14 ಲಕ್ಷ ಕೋಟಿ ರೂಪಾಯಿ ಅಂದರೆ, ಶೇ. 88ರಷ್ಟು ನೋಟುಗಳು ವಾಪಸಾಗಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜುಲೈ 31ರ ವೇಳೆಗೆ ಕೇವಲ 42 ಸಾವಿರ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ಮಾತ್ರವೇ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದೆ ಎಂದು ಮಾಹಿತಿ ನೀಡಿದೆ.  ಮೇ 19 ರಂದು ಪತ್ರಿಕಾ ಪ್ರಕಟಣೆ ನೀಡುವ ಮೂಲಕ ಸದ್ಯ ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ಬ್ಯಾಂಕ್‌ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ಘೋಷಣೆ ಮಾಡಿತ್ತು. ಮಾರ್ಚ್‌ 31ರ ವೇಳೆಗೆ ಮಾರುಕಟ್ಟೆಯಲ್ಲಿ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳಿದ್ದವು. ಇನ್ನು ಮೇ 19 ರಂದು ಆರ್‌ಬಿಐ ತನ್ನ ಅಧಿಕೃತ ಪ್ರಕಟಣೆ ನೀಡುವ ವೇಳೆ ಇದರ ಪ್ರಮಾಣ 3.56 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು ಎಂದು ಆರ್‌ಬಿಐ ತಿಳಿಸಿದೆ.

ಕಳೆದ ಜುಲೈ 3 ರಂದು ಕೂಡ ಎಷ್ಟು ಪ್ರಮಾಣ 2 ಸಾವಿರ ರೂಪಾಯಿ ನೋಟುಗಳು ಬ್ಯಾಂಕ್‌ಗೆ ವಾಪಾಸ್‌ ಬಂದಿವೆ ಎನ್ನುವ ಮಾಹಿತಿಯನ್ನೂ ನೀಡಿದ್ದವು. ಈಗ ಜುಲೈ ತಿಂಗಳ ಸಂಪೂರ್ಣ ಮಾಹಿತಿ ಪಡೆದಿರುವ ಆರ್‌ಬಿಐ, ಜುಲೈ 31ರ ವೇಳೆಗೆ ಒಟ್ಟು 3.14 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ಬ್ಯಾಂಕ್‌ಗೆ ಮರಳಿವೆ. ಇನ್ನು ಮಾರುಕಟ್ಟೆಯಲ್ಲಿ 42 ಸಾವಿರ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ಚಲಾವಣೆಯಲ್ಲಿದೆ. ಮೇ. 19ಕ್ಕೆ ಹೋಲಿಸಿದರೆ, ಈವರೆಗೂ ಶೇ. 88ರಷ್ಟು 2 ಸಾವಿರ ರೂಪಾಯಿ ನೋಟುಗಳು ಬ್ಯಾಂಕ್‌ಗೆ ವಾಪಾಸ್‌ ಬಂದಂತಾಗಿದೆ ಎಂದು ಆರ್‌ಬಿಐ ತಿಳಿಸಿದೆ. 

ಹೆಚ್ಚಿನ ಹಣ ಠೇವಣಿ: ದೇಶದ ಪ್ರಮುಖ ಬ್ಯಾಂಕ್‌ಗಳು ನೀಡುವ ಮಾಹಿತಿಯ ಪ್ರಕಾರ, ಬ್ಯಾಂಕ್‌ಗಳಿಗೆ ಈಗಾಗಲೇ ವಾಪಾಸ್‌ ಬಂದಿರುವ 2 ಸಾವಿರ ರೂಪಾಯಿ ನೋಟುಗಳ ಪೈಕಿ ಶೇ. 87ರಷ್ಟು ಠೇವಣಿ ಮೂಲಕ ಬಂದಿದ್ದರೆ, ಶೇ. 13ರಷ್ಟು ಮಾತ್ರವೇ ನೋಟುಗಳ ಬದಲಿ ಮಾಡಿಕೊಳ್ಳುವ ಪ್ರಕ್ರಿಯೆ ಮೂಲಕ ಬಂದಿದೆ.

Latest Videos

ಚಲಾವಣೆಯಲ್ಲಿರುವ 2 ಸಾವಿರ ರೂ. ನೋಟುಗಳಲ್ಲಿ ಶೇ.76ರಷ್ಟು ಬ್ಯಾಂಕುಗಳಿಗೆ ವಾಪಸ್

ವಿಸ್ತರಣೆ ಮಾಡೋದಿಲ್ಲ: ಇದೇ ವೇಳೆ ಆರ್‌ಬಿಐ ಗ್ರಾಹಕರಿಗೆ ಸೆಪ್ಟೆಂಬರ್‌ 30ರ ಒಳಗಾಗಿ ನಿಮ್ಮಲ್ಲಿರುವ ಎಲ್ಲಾ 2 ಸಾವಿರ ರೂಪಾಯಿ ನೋಟುಗಳನ್ನು ಹಿಂತಿರುಗಿಸುವಂತೆ ಹೇಳಿದೆ. ಸೆಪ್ಟೆಂಬರ್‌ 30ರವರೆಗೆ ಬದಲಾವಣೆಗೆ ಅವಕಾಶವಿದೆ. ಆ ಬಳಿಕ ಇದನ್ನು ವಿಸ್ತರಣೆ ಮಾಡೋದಿಲ್ಲ. ಹಾಗಾಗಿ ಮುಂದಿನ ಎರಡು ತಿಂಗಳುಗಳ ಕಾಲ ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು. ಕೊನೆಯ ದಿನದವರೆಗೆ ಯಾವುದೇ ಕಾರಣಕ್ಕೂ ಕಾಯಬೇಡಿ ಎಂದು ಹೇಳಿದೆ.

2,000 ರೂ. ನೋಟ್‌ ಎಕ್ಸ್‌ಚೇಂಜ್‌ ಹೆಸರಲ್ಲಿ 25 ಲಕ್ಷ ರೂ. ವಂಚನೆ: ತಿರುಪತಿಗೆ ಕರೆಸಿ ನಾಮ ಹಾಕಿದ ಖದೀಮರು

 

click me!