ಓದಿದ ಕ್ಷೇತ್ರದಲ್ಲೇ ಕೆಲಸ ಗಿಟ್ಟಿಸಿಕೊಂಡು ಹಣ ಗಳಿಸ್ತೇನೆ ಅನ್ನೋದು ಮೂರ್ಖರು. ಓದು ಯಾವ್ದೇ ಇರಲಿ ಅದನ್ನು ಬಳಸಿಕೊಂಡು ಹೊಸ ಕ್ಷೇತ್ರಕ್ಕೆ ಧುಮುಕಿ ಹಣ ಮಾಡ್ತೇನೆ ಅನ್ನೋದು ಬುದ್ಧಿವಂತರ ಲಕ್ಷಣ. ಅದಕ್ಕೆ ಈ ಯುವಕ ಸಾಕ್ಷ್ಯ.
ಈಗಿನ ಯುವಜನತೆ ಇಂಜಿನಿಯರಿಂಗ್ , ಮೆಡಿಕಲ್ ಸೇರಿದಂತೆ ಹೆಚ್ಚು ಸಂಬಳ ನೀಡುವ, ದುಬಾರಿ ಕೋರ್ಸ್ ಗಳನ್ನು ಮಾಡುತ್ತಾರೆ. ಪದವಿ ಪಡೆದ ನಂತರ ತಮ್ಮ ವಿದ್ಯಾರ್ಹತೆಗೆ ತಕ್ಕ ಕೆಲಸದ ಹುಡುಕಾಟ ಶುರು ಮಾಡ್ತಾರೆ. ಆದ್ರೆ ಸೂಕ್ತವಾದ ಕೆಲಸ ಸಿಗದೆ ಇದ್ದಾಗ ಬೇಸರಗೊಳ್ಳುತ್ತಾರೆ. ಆತ್ಮಹತ್ಯೆಯಂತಹ ತಪ್ಪು ನಿರ್ಧಾರ ತೆಗೆದುಕೊಂಡವರೂ ನಮ್ಮಲ್ಲಿದ್ದಾರೆ.
ಶಿಕ್ಷಣ (Education) ಎನ್ನುವುದು ನಮ್ಮ ಜೀವನಕ್ಕೆ ದಾರಿದೀಪವಾಗಬೇಕೇ ಹೊರತು ಉರುಳಾಗಬಾರದು. ನಮ್ಮ ಪದವಿಗೆ ತಕ್ಕನಾದ ಕೆಲಸ ಸಿಗಲಿಲ್ಲ ಎಂದಾದರೆ ನಮಗೆ ಎಂತಹ ಕೆಲಸ ಮಾಡಲು ಸಾಧ್ಯವಿದೆಯೋ, ಯಾವ ಕೆಲಸ ಸಿಗುತ್ತದೆಯೋ ಅಂತಹ ಕೆಲಸವನ್ನೇ ಮಾಡಬೇಕು. ಯಾವುದೇ ಕೆಲಸವನ್ನಾದರೂ ನಾವು ನಿಷ್ಠೆಯಿಂದ ಮಾಡಿದಾಗ ಅದೇ ನಮಗೆ ಯಶಸ್ಸನ್ನು ನೀಡುತ್ತದೆ ಎನ್ನುವುದಕ್ಕೆ ರಾಜಸ್ಥಾನ (Rajasthan) ದ ಈ ಯುವಕ ಪ್ರತ್ಯಕ್ಷ ಸಾಕ್ಷಿ.
ಭಾರತ ಕಂಡ ಶ್ರೀಮಂತ ಮಹಿಳಾ ಉದ್ಯಮಿ ಬೆಂಗಳೂರು ಮಹಿಳೆ, 30 ಸಾವಿರ ಕೋಟಿ ಸಾಮ್ರಾಜ್ಯಕ್ಕೆ ಒಡತಿ!
ಕೆಲಸ ಸಿಗದೇ ಇದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ: ರಾಜಸ್ಥಾನದ ನಿವಾಸಿಯಾಗಿರುವ ಭಾವೇಶ ಕುಮಾರ ಇಂಜಿನೀಯರಿಂಗ್ ಪದವೀಧರ. 25 ವರ್ಷದ ಭಾವೇಶ ಎಲ್ಲರಂತೆ ಇಂಜಿನೀಯರಿಂಗ್ ಪದವಿ ಮುಗಿಸಿ ಸರ್ಕಾರಿ ನೌಕರಿ ಪಡೆಯಲು ಪ್ರಯತ್ನ ನಡೆಸಿದ. ಆದರೆ ಅವನಿಗೆ ಸರಕಾರಿ ನೌಕರಿ ಎಲ್ಲೂ ಸಿಗಲೇ ಇಲ್ಲ. ಎಲ್ಲೂ ಕೆಲಸ ಸಿಗದ ಕಾರಣ ಭಾವೇಶನಿಗೆ ಮನೆಯವರ ಬೈಗುಳ ಹಾಗೂ ಸುತ್ತಮುತ್ತಲಿನವರಿಂದ ಅನೇಕ ರೀತಿಯ ಮಾತುಗಳನ್ನು ಕೇಳಬೇಕಾಗಿ ಬಂತು. ತನ್ನ ಅಸಫಲತೆಯನ್ನು ಆತ್ಮವಿಶ್ವಾಸವಾಗಿ ಬದಲಾಯಿಸಿಕೊಂಡ ಭಾವೇಶ್ ಏನಾದರೂ ಹೊಸತನ್ನು ಮಾಡಲು ನಿರ್ಧರಿಸಿದ.
ಸಕಾರಾತ್ಮಕ ಚಿಂತನೆ ಹೊಸ ದಾರಿಗೆ ನಾಂದಿಯಾಯಿತು : ರಾಜಸ್ಥಾನದ ಬೇರಲಾ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಭಾವೇಶನಿಗೆ ಮೊದ ಮೊದಲು ತಾನು ಕೂಡ ತಂದೆಯಂತೆಯೇ ನೌಕರಿ ಗಳಿಸಬೇಕೆಂಬ ಆಸೆಯಿತ್ತು. ಆದರೆ ಬೆಳೆದ ದೊಡ್ಡವನಾಗುತ್ತಿದ್ದ ಹಾಗೆ ಅವನಿಗೆ ನೌಕರಿ ಮಾಡುವ ವಿಚಾರ ಬರಲೇ ಇಲ್ಲ. ಪದವಿ ಮುಗಿಸಿದ ನಂತರ ಭಾವೇಶನಿಗೆ ತನ್ನದೇ ಆದ ಬ್ಯುಸಿನೆಸ್ ಆರಂಭಿಸಬೇಕು ಎನಿಸಿತು. ಭಾವೇಶನಲ್ಲಾದ ಈ ಬದಲಾವಣೆ ಕುಟುಂಬದವರ ಕೋಪಕ್ಕೆ ಕೂಡ ಕಾರಣವಾಯ್ತು. ಇಷ್ಟೊಂದು ವಿದ್ಯಾಭ್ಯಾಸ ಪಡೆದುಕೊಂಡು ನೌಕರಿಗೆ ಹೋಗಲಿಲ್ಲ ಎನ್ನುವ ಕಾರಣಕ್ಕೆ ಭಾವೇಶ್ ಎಲ್ಲರ ಕೋಪಕ್ಕೆ ಗುರಿಯಾದ. ಆದರೆ ಇದ್ಯಾವ ಬೈಗುಳಗಳೂ ಭಾವೇಶನ ದೃಢ ನಿರ್ಧಾರವನ್ನು ಬದಲಿಸಲಿಲ್ಲ. ಅದೇ ಸಮಯದಲ್ಲಿ ಅವನಿಗೆ ಗ್ರಾಮೀಣ ಪ್ರದೇಶದಲ್ಲಿ ಆನ್ ಲೈನ್ ಮಾರುಕಟ್ಟೆ ಬೆಳೆಯುತ್ತಿರುವುದನ್ನು ಗಮನಿಸಿದ. ಆಗ ಅವನಿಗೆ ನಾನು ಕೂಡ ಇಂಟರ್ನೆಟ್ ನ ಉಪಯೋಗ ಪಡೆದುಕೊಳ್ಳಬೇಕು ಎನ್ನುವ ವಿಚಾರ ಬಂತು.
Gruha Jyothi Scheme: ಮೊದಲ ಶೂನ್ಯ ಕರೆಂಟ್ ಬಿಲ್ ವಿತರಣೆ: ಗ್ರಾಹಕರು ಫುಲ್ ಖುಷ್
ಆನ್ ಲೈನ್ ನಲ್ಲಿ ದೇಶೀಯ ಬಿಲೋನಾ ಎ2 ಹಸುವಿನ ತುಪ್ಪದ ಮಾರಾಟ : ಭಾವೇಶ ಹಳ್ಳಿಯಲ್ಲಿ ಸುಲಭವಾಗಿ ದೊರಕುವ ವಸ್ತುಗಳು ಹಾಗೂ ನಗರಗಳಲ್ಲಿ ಅಗತ್ಯವಾಗಿ ಬೇಕಾಗುವ ವಸ್ತಗಳ ಬಗ್ಗೆ ಅಧ್ಯಯನ ಮಾಡಿದ. ಆಗ ಅವನಿಗೆ ಮನೆಯಲ್ಲೇ ತಯಾರಿಸುವ ದೇಸೀ ಬಿಲೋನಾ ಎ2 ಹಸುವಿನ ತುಪ್ಪವನ್ನು ಆನ್ ಲೈನ್ ನಲ್ಲಿ ಮಾರಾವ ಐಡಿಯಾ ಬಂತು. ಭಾವೇಶ ತಾಯಿಯ ಬಳಿ 3000 ರೂಪಾಯಿಗಳನ್ನು ಪಡೆದು ತನ್ನ ಮನೆಯಲ್ಲೇ ಇರುವ ತುಪ್ಪವನ್ನು ಜಾರ್ ಗೆ ಹಾಕಿ ಪ್ಯಾಕ್ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಅದರ ಫೋಟೋಗಳ ಜಾಹೀರಾತು ಮಾಡಿದ.
ಎ2 ಹಸುವಿನ ತುಪ್ಪದಿಂದ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ : ಭಾವೇಶ ತನ್ನ ಕಂಪನಿಗೆ ‘ಕಸುತಮ್’ ಎಂಬ ಹೆಸರನ್ನಿಟ್ಟ. ಈತನ ತುಪ್ಪದ ಬ್ಯುಸಿನೆಸ್ ದಿನೇ ದಿನೇ ಹೆಚ್ಚು ಪ್ರಖ್ಯಾತವಾಯಿತು. ಭಾವೇಶ ಯು ಟ್ಯೂಬ್ ನಲ್ಲಿ ಎ2 ಹಸುವಿನ ತುಪ್ಪದ ವಿಡಿಯೋ ಅಪ್ ಲೋಡ್ ಮಾಡಿದ. ಆತನ ಸತತ ಪರಿಶ್ರಮದಿಂದ ಇಂದು ಬಿಲೋನಾ ಎ2 ಹಸುವಿನ ತುಪ್ಪ ವಿದೇಶದಲ್ಲೂ ಮಾರಾಟವಾಗುತ್ತಿದೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾನೆ ಭಾವೇಶ್.